ಟಿವಿಎಸ್‌ನಿಂದ ಸಾಲು ಗಟ್ಟಿ ನಿಂತಿರುವ ಬೈಕ್, ಸ್ಕೂಟರ್

By Nagaraja

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಉಳಿಸಿಕೊಂಡಿರುವ ಟಿವಿಎಸ್ ಮೋಟಾರು ಇಂಡಿಯಾ ಸಂಸ್ಥೆಯು, ಇದೀಗಷ್ಟೇ ಸ್ಟಾರ್ ಸಿಟಿ ಪ್ಲಸ್ ಪ್ರಯಾಣಿಕ ಬೈಕನ್ನು ಲಾಂಚ್ ಮಾಡಿತ್ತು. ಇಲ್ಲಿಗೂ ನಿಲ್ಲದ ಟಿವಿಎಸ್ ಪಯಣ ನಿಕಟ ಭವಿಷ್ಯದಲ್ಲೇ ಅನೇಕ ನೂತನ ಮಾದರಿಗಳನ್ನು ಲಾಂಚ್ ಮಾಡಿದೆ.

ಟಿವಿಎಸ್ ಸ್ಟಾರ್ ಸಿಟಿ ಲಾಂಚ್

ಹೌದು, ಟಿವಿಎಸ್ ಅತ್ಯಾಕರ್ಷಕ ಹೊಸ ಮಾದರಿಗಳ ದೇಶದ ರಸ್ತೆ ಪ್ರವೇಶಿಸಲು ಸಾಲು ಗಟ್ಟಿ ನಿಂತಿವೆ. ಇವುಗಳಲ್ಲಿ ಟಿವಿಎಸ್ ಜೆಸ್ಟ್, ಟಿವಿಎಸ್ ವಿಕ್ಟರ್ ಹಾಗೂ ಬಹುನಿರೀಕ್ಷಿತ ಟಿವಿಎಸ್-ಬಿಎಂಡಬ್ಲ್ಯು ಬೈಕ್ ಸೇರಿಕೊಂಡಿವೆ. ಬನ್ನಿ ಕೆಳಗಡೆ ಕೊಡಲಾಗಿರುವ ಫೋಟೊ ಫೀಚರ್ ಮೂಲಕ ಈ ಎಲ್ಲದರ ಬಗೆಗಿನ ಮಾಹಿತಿಯನ್ನು ಕಲೆ ಹಾಕೋಣವೇ...

ಟಿವಿಎಸ್ ಜೆಸ್ಟ್

ಟಿವಿಎಸ್ ಜೆಸ್ಟ್

ಲಾಂಚ್ ದಿನಾಂಕ

ಮೊದಲ ಬಾರಿಗೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಟಿವಿಎಸ್ ಜೆಸ್ಟ್, ಸ್ಕೂಟಿ ಫ್ಯಾಮಿಲಿಗೆ ಸೇರಿದ್ದಾಗಿದೆ. ಪ್ರಸ್ತುತ ಸ್ಕೂಟರ್ ಜೂನ್ ತಿಂಗಳಲ್ಲಿ ಲಾಂಚ್ ಆಗಲಿದೆ.

ಟಿವಿಎಸ್ ಜೆಸ್ಟ್

ಟಿವಿಎಸ್ ಜೆಸ್ಟ್

ಎಂಜಿನ್, ವಿನ್ಯಾಸ

ಇದು ವೆಗೊ ಹಾಗೂ ಜೂಪಿಟರ್ ಸ್ಕೂಟರ್‌ಗಳಲ್ಲಿ ಬಳಕೆಯಾಗಿರುವುದಕ್ಕೆ ಸಮಾನವಾದ 110 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಇದು ತಲಾ ಎಂಟು ಅಶ್ವಶಕ್ತಿ ಹಾಗೂ ಟಾರ್ಕ್ ಉತ್ಪಾದಿಸಲಿದೆ. ಅಂದ ಹಾಗೆ ಟಿವಿಎಸ್ ಜೆಸ್ಟ್ ಮಾದರಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಇದು 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನದಲ್ಲಿ ಕಂಡುಬಂದಿರುವುದಕ್ಕೆ ಸಮಾನ ವಿನ್ಯಾಸ ಪಡೆದುಕೊಳ್ಳಲಿದೆ.

ಟಿವಿಎಸ್ ವಿಕ್ಟರ್

ಟಿವಿಎಸ್ ವಿಕ್ಟರ್

ಲಾಂಚ್

ಟಿವಿಎಸ್‌ನ ಜನಪ್ರಿಯ ಆವೃತ್ತಿಗಳಲ್ಲಿ ವಿಕ್ಟರ್ ಒಂದಾಗಿದೆ. ಇದೇ ಕಾರಣಕ್ಕಾಗಿ ಟಿವಿಎಸ್‌ನಿಂದ ಆಗಮನವಾಗಲಿರುವ ನೂತನ ಪ್ರಯಾಣಿಕ ಬೈಕ್ ಹೆಚ್ಚು ಕುತೂಹಲ ಸೃಷ್ಟಿ ಮಾಡಿದೆ. ಇದು ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ. ಹಾಗಿದ್ದರೂ ಟಿವಿಎಸ್ ವಕ್ಟರ್ ಬಗೆಗಿನ ಹೆಚ್ಚಿನ ಮಾಹಿತಿ ಹೊರಬಂದಿಲ್ಲ. ಇದು ಸ್ಟಾರ್ ಪ್ಲಸ್ ಸಿಟಿ, ಸ್ಪೋರ್ಟ್, ಫೋನಿಕ್ಸ್ 125 ಪ್ರಯಾಣಿಕ ಬೈಕ್‌ಗಳ ಸಾಲಿಗೆ ಸೇರಿಕೊಳ್ಳಲಿದೆ.

ಟಿವಿಎಸ್-ಬಿಎಂಡಬ್ಲ್ಯು ಮೊಟೊರಾಡ್ ಮೋಟಾರ್‌ಸೈಕಲ್

ಟಿವಿಎಸ್-ಬಿಎಂಡಬ್ಲ್ಯು ಮೊಟೊರಾಡ್ ಮೋಟಾರ್‌ಸೈಕಲ್

ಬಿಎಂಡಬ್ಲ್ಯು-ಟಿವಿಎಸ್ ಸಹಯೋಗದಲ್ಲಿ ಬಿಡುಗಡೆಯಾಗಲಿರುವ ಮೊದಲ ಬೈಕ್ 2015 ದ್ವಿತಿಯಾರ್ಧದಲ್ಲಿ ಆಗಮನವಾಗಲಿದೆ. ಇದು ಎಲ್ಲ ಹೊಸತನದಿಂದ ಕೂಡಿದ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ. ಸಂಸ್ಥೆಯೇ ಹೇಳುವ ಪ್ರಕಾರ ನೂತನ ಯೋಜನೆಗಾಗಿ ಟಿವಿಎಸ್ 1.50 ಕೋಟಿ ಹೂಡಿಕೆ ಮಾಡಿದೆ. ನೂತನ ಬೈಕ್ ಬಗೆಗಿನ ತಾಂತ್ರಿಕ ಲಭ್ಯವಿಲ್ಲದಿದ್ದರೂ ವರದಿಗಳ ಪ್ರಕಾರ 300 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಳವಡಿಸುವ ಬಗ್ಗೆ ಮಾಹಿತಿಯಿದೆ.

ಟಿವಿಎಸ್ ಅಪಾಚಿ

ಟಿವಿಎಸ್ ಅಪಾಚಿ

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಟಿವಿಎಸ್‌ನ ಅತ್ಯಂತ ಜನಪ್ರಿಯ ಅಪಾಚಿ ಬೈಕ್ ಹೊಸ ಸ್ವರೂಪ ಪಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲೇ ಲಾಂಚ್ ಆಗಲಿದೆ.

More from DriveSpark

Article Published On: Friday, May 9, 2014, 12:49 [IST]
English summary
TVS launched the Star City+ commuter motorcycle yesterday in Chennai. Priced at Rs 44,000 (ex-showroom Delhi), the new motorcycle replaces the existing Star City.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+