ಇದೀಗ 48 ಸಾವಿರಕ್ಕೆ ವೆಸ್ಪಾ ನಿಮ್ಮದಾಗಿಸಿಕೊಳ್ಳಿ
ಆಟೋ ಜಗತ್ತಿನ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡುವವರಿಗೆ ಇಟಲಿಯ ಈ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಕಂಪನಿಯ ವೆಸ್ಪಾ ಬ್ರಾಂಡ್‌ಗೆ ದಿಢೀರನೆ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಇಳಿಕೆ ಹೇಗಾಯಿತು ಎಂಬ ಅನುಮಾನ ಕಾಡಬಹುದು?
ಆದರೆ ನಿಮ್ಮ ಮಾಹಿತಿಗಾಗಿ ಹೇಳ ಬಯಸುವುದೇನೆಂದರೆ ಇದು ಕಂಪನಿಯಿಂದ ಘೋಷಿತವಾದ ದರವಲ್ಲ. ಬದಲಾಗಿ ವೆಸ್ಪಾ ಮುಂಬೈ ಡೀಲರ್‌ವೊಂದು ಗ್ರಾಹಕರಿಗೆ ವಿನೂತನ ಆಫರ್ ಮುಂದಿರಿಸಿದ್ದು, ಕೇವಲ 48,000 ರು.ಗಳಿಗೆ ನೆಚ್ಚಿನ ವೆಸ್ಪಾ ಎಲ್‌ಎಕ್ಸ್ 125 ಬ್ರಾಂಡ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಅಂದರೆ ಬರೋಬ್ಬರಿ 10,000 ರು.ಗಳಷ್ಟು ದರ ಕಡಿತ ಘೋಷಿಸಲಾಗಿದೆ. ದೇಶಿಯ ವಾಹನ ಮಾರುಕಟ್ಟೆ ಕುಸಿದಿರುವಂತೆಯೇ ಗ್ರಾಹಕರನ್ನು ಆಕರ್ಷಿಸಲು ಹಾಗೂ ಸೇಲ್ಸ್ ಹೆಚ್ಚಿಸಲು ಮುಂಬೈನ ಅಸೆಟ್ ವೆಸ್ಪಾ ಡೀಲರ್‌ಶಿಪ್ ಇಂತಹದೊಂದು ಮಾರ್ಗ ಅನುಸರಿಸಿದೆ.

ಅಂದ ಹಾಗೆ ಈ ಆಫರ್ ಕೇವಲ ಸೀಮಿತ ಮೂರು ದಿನಗಳ ಅವಧಿಗೆ ಮಾತ್ರವಾಗಿದೆ. ಇನ್ಯಾಕೆ ತಡ ಈಗಾಗಲೇ ತ್ವರೆ ಮಾಡಿರಿ!

ಹಾಗಿದ್ದರೂ ಮುಂಬೈನ ಈ ವೆಸ್ಪಾ ಡೀಲರ್ ಕೆಲವೊಂದು ಷರುತ್ತುಗಳನ್ನು ಕೂಡಾ ವಿಧಿಸಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದೆ.

ವೆಸ್ಪಾ ಎಲ್‌ಎಕ್ಸ್ 125 ಸಿಸಿ ಸ್ಕೂಟರ್‌ನಲ್ಲಿ 125 ಸಿಸಿ ಕ್ಷಮತೆಯ ಸಿಂಗಲ್ ಸಿಲಿಂಡರ್ ಪ್ರಯೋಗಿಸಲಾಗಿದೆ. ಹಾಗೆಯೇ 10.06 ಪಿಎಸ್ ಪೀಕ್ ಪವರ್ ಹಾಗೂ 10.6 ಎನ್‌ಎಂ ಟರ್ಕ್ಯೂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ವೆಸ್ಪಾ ಎಲ್‌ಎಕ್ಸ್‌ನಲ್ಲಿ 8 ಲೀಟರ್ ಕ್ಷಮತೆಯ ಇಂಧನ ಟ್ಯಾಂಕ್ ಆಳವಡಿಸಲಾಗಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಇಟಲಿಯ ಈ ದ್ವಿಚಕ್ರ ವಾಹತ ತಯಾರಕ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ರಿ ಎಂಟ್ರಿ ಕೊಟ್ಟಿತ್ತು.

ಕನ್ನಡದ ನಟಿ ರಮ್ಯಾ ಕೂಡಾ ವೆಸ್ಪಾ ಕ್ಲಾಸಿಕ್ ಶೈಲಿಗೆ ಮಾರು ಹೋಗಿದ್ದರು. ಈ ಬಗೆಗಿನ ವರದಿಯನ್ನು ಇಲ್ಲಿ ನೋಡಿರಿ
ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ವೆಸ್ಪಾ ಎಲ್‌ಎಕ್ಸ್ 125

ವೆಸ್ಪಾ ಎಲ್‌ಎಕ್ಸ್ 125

ವೆಸ್ಪಾ ಎಲ್‌ಎಕ್ಸ್ 125



Click it and Unblock the Notifications








