ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

Posted By:

ದಕ್ಷಿಣ ಭಾರತದ ಬಹುಭಾಷಾ ತಾರೆ ರಮ್ಯಾ ತಮ್ಮ ಅತ್ಯುತ್ತಮ ನಟನಾ ಕೌಶಲ್ಯದಿಂದಲೇ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಕನ್ನಡ ಚಿತ್ರರಂಗದ ಲಕ್ಕಿ ಸ್ಟಾರ್ ನಟಿ ನೂತನ ವೆಸ್ಪಾ ಸ್ಕೂಟರ್ ಖರೀದಿ ಮಾಡಿದ್ದಾರೆ.

ಇಟಲಿ ದ್ವಿಚಕ್ರ ವಾಹನ ತಯಾರಕ ಕಂಪನಿ ಪಿಯಾಜಿಯೊ ತನ್ನ ಜನಪ್ರಿಯ ವೆಸ್ಪಾ ಎಲ್‌ಎಕ್ಸ್ 125 ಮಾಡೆಲ್ ಅನ್ನು ರಮ್ಯಾ ತಮ್ಮದಾಗಿಸಿಕೊಂಡಿದ್ದಾರೆ. ವೆಸ್ಪಾದ ಗಿಯಾಲೊ ಲೈಮ್ ರಮ್ಯಾ ಪಾಲಿಗೆ ಫೇವರಿಟ್ ಕಲರ್ ಎನಿಸಿಕೊಂಡಿದೆ.

ಆಕಾಶ್, ಗೌರಮ್ಮ, ಅಮೃತಧಾರೆ, ಮುಸ್ಸೆಂಜೆ ಮಾತು, ಕಿಚ್ಚ ಹುಚ್ಚ, ದಂಡಂ ದಶಗುಣಂ, ಸಂಜು ವೆಡ್ಸ್ ಗೀತಾ, ಬೊಂಬಾಟ್ ಚಿತ್ರಗಳಲ್ಲಿನ ನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ರಮ್ಯಾ, ಉಪೇಂದ್ರ, ಸುದೀಪ್, ಗಣೇಶ್, ಪ್ರಜ್ವಲ್, ದರ್ಶನ್ ತೂಗುದೀಪ್, ಪುನೀತ್ ರಾಜ್‌ಕುಮಾರ್, ದುನಿಯಾ ವಿಜಯ್, ಜಿರಂಜೀವಿ ಸರ್ಜಾ ಹಾಗೂ ಶ್ರೀನಗರ ಕಿಟ್ಟಿ ಅವರಂತಹ ಪ್ರಮುಖ ನಟರೊಂದಿಗೆ ನಟಿಸಿದ ಅನುಭವ ಹೊಂದಿದ್ದಾರೆ.

ಲಕ್ಕಿ ಸ್ಟಾರ್ ರಮ್ಯಾ ಚಿತ್ರೋದ್ಯಮದಲ್ಲಿ ಜನಪ್ರಿಯರಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ಆಕೆ ಅಭಿನಯದ ಸಂಜು ವೆಡ್ಸ್ ಗೀತಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಹಾಗಿದ್ದರೆ ಬನ್ನಿ ರಮ್ಯಾ ವೆಸ್ಪಾ ಎಲ್‌ಎಕ್ಸ್ 125 ಸ್ಕೂಟರ್ ಅದೃಷ್ಟ ತರಲಿದೆಯೇ ಎಂಬುದನ್ನು ನೋಡೋಣ ಬನ್ನಿ...

To Follow DriveSpark On Facebook, Click The Like Button
ಎಂಜಿನ್:

ಎಂಜಿನ್:

124 ಸಿಸಿಯ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ನೂತನ ಸ್ಕೂಟರ್ 8,250 ಆವರ್ತನಕ್ಕೆ 7.65 ಅಶ್ವಶಕ್ತಿ ಮತ್ತು 7,250 ಆವರ್ತನಕ್ಕೆ 9.6 ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ ಎಂಜಿನ್ ಏರ್ ಕೂಲಿಂಗ್, ಎಲೆಕ್ಟ್ರಾನಿಕ್ ಇಂಜೆಕ್ಷನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಗೇರ್ ಹೊಂದಿದೆ. ಇದರಿಂದಾಗಿ ವೆಸ್ಪಾ ಸವಾರಿ ಸುಲಭ ಮತ್ತು ಆರಾಮದಾಯಕವಾಗಿರಲಿದೆ.

ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ಮೈಲೇಜ್ ವಿಷ್ಯದಲ್ಲಿ ವೆಸ್ಪಾ ಅಷ್ಟೇನೂ ನಿರಾಶೆ ಮಾಡುವುದಿಲ್ಲ. ಹಾಗಂತ ಖುಷಿಯನ್ನೂ ಮಾಡುವುದಿಲ್ಲ. ವೆಸ್ಪಾ ಮೈಲೇಜ್ ಪ್ರತಿಲೀಟರಿಗೆ ಸುಮಾರು 45 ಕಿ.ಮೀ. ಆಸುಪಾಸಿನಲ್ಲಿ ದೊರಕಲಿದೆ. ಆಕ್ಸಿಲರೇಷನ್ ಮತ್ತು ಪಿಕಪ್ ವಿಷಯದಲ್ಲೂ ಈ ಸ್ಕೂಟರ್ ಬೇಜಾರು ಮಾಡೋದಿಲ್ಲ.

ವೆಸ್ಪಾ ಕಲರ್ ವೆರಿಯಂಟ್

ವೆಸ್ಪಾ ಕಲರ್ ವೆರಿಯಂಟ್

ವೆಸ್ಪಾ ಎಲ್‌ಎಕ್ಸ್124 ಆರು ನೂತನ ಕಲರ್ ವೆರಿಯಂಟ್‌ಗಳಲ್ಲಿ ಗ್ರಾಹಕರ ಕೈಸೇರಲಿವೆ. ನೀರೊ ವೊಲ್ಕನೊ, ಮಾಂಟೆ ಬಿಯನ್‌ಕೊ, ರುಸ್ಸೊ ಡ್ರಾಗನ್, ಗಿಯಲ್ಲೊ ಲೈಮ್, ಮಿಡ್‌ನೈಟ್ ಬ್ಲ್ಯು ಹಾಗೂ ರುಸ್ಸೊ ಚಿಯಾಂಟಿ.

ಆರಾಮದಾಯಕತೆ

ಆರಾಮದಾಯಕತೆ

ಚಾಲಕ ಮತ್ತು ಹಿಂಬದಿ ಸವಾರನಿಗೆ ಆರಾಮವಾಗಿ ಕುಳಿತುಕೊಳ್ಳಲು ನೆರವಾಗುವ ವಿಶಾಲ ಸೀಟ್ ವೆಸ್ಪಾ ಸ್ಕೂಟರಲ್ಲಿದೆ. ಸೆಲ್ಪ್ ಸ್ಟಾರ್ಟ್ ಫೀಚರಿಂದ ಕಂಫರ್ಟ್ ಆಗಿ ಡ್ರೈವ್ ಮಾಡಬಹುದಾಗಿದೆ. ನೂತನ ಸಸ್ಪೆನ್ಷನ್ ಸಿಸ್ಟಮ್ ರೈಡಿಂಗ್ ಅನುಭವವನ್ನು ಹೆಚ್ಚಿಸಿದೆ. ಕಾಲಿಡುವ ಫೂಟ್ ಪೆಗ್ಸ್ ಮತ್ತು ಫೂಟ್ ರೆಸ್ಟ್ ಕೂಡ ಸೀಟಿನಲ್ಲಿ ಆರಾಮವಾಗಿ ಕುಳಿತುಕೊಳ್ಳಲು ನೆರವಾಗುತ್ತದೆ.

ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ಹಬ್ಬದ ಸೀಸನ್‌ನಲ್ಲಿ ವೆಸ್ಪಾ ದರ ಕಡಿತಗೊಳಿಸಲಾಗಿದ್ದು 70 ಸಾವಿರ ರೂಪಾಯಿಗಳ ಅಸುಪಾಸಿನಲ್ಲಿ ಗ್ರಾಹಕನ ಕೈಸೇರಲಿದೆ.

English summary
Leading South Indian Actress Ramya takes delivery of her very own Giallo Lime Vespa in Chennai. She’s really excited to ride it around the city.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark