ಭಾರತಕ್ಕೆ ಮತ್ತೆ ಬರ್ತಿದೆ ಐತಿಹಾಸಿಕ ಲ್ಯಾಂಬ್ರೆಟಾ ದ್ವಿಚಕ್ರ ವಾಹನ

By Girish

ಲ್ಯಾಂಬ್ರೆಟಾ ಬ್ರಾಂಡ್ ಭಾರತದಲ್ಲಿನ ಆಟೊಮೋಟಿವ್ ಉತ್ಸಾಹಿಗಳಿಗೆ ಪ್ರಸಿದ್ಧವಾದ ಹೆಸರು ಎನ್ನಬಹುದು. ಬಹಳ ವರ್ಷಗಳ ಕಾಲ ಭಾರತದಲ್ಲಿ ಈ ಬ್ರ್ಯಾಂಡ್ ಕಣ್ಮರೆಯಾಗಿತ್ತು. ಈಗ ಮತ್ತೆ ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ ಎಂಬ ವಿಚಾರ ತಿಳಿದು ಬಂದಿದೆ.

ಲ್ಯಾಂಬ್ರೆಟಾ ಸಂಸ್ಥೆಯು ವಿ50 ಸ್ಪೆಶಲ್, ವಿ125 ಸ್ಪೆಶಲ್ ಮತ್ತು ವಿ200 ವಾಹನಗಳ ಪುನರುತ್ಥಾನದ ನಂತರ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇಐಸಿಎಂಎ ಪ್ರದರ್ಶನದಲ್ಲಿ ಲ್ಯಾಂಬ್ರೆಟಾ ಸ್ಕೂಟರ್‌ಗಳನ್ನು ಬಹಿರಂಗಪಡಿಸಿದೆ ಮತ್ತು 2019ರ ಹೊತ್ತಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲಾ ಮೂರು ಹೊಸ ಮಾದರಿಗಳು ಒಂದೇ ಪ್ಲೇಟ್‌ಫಾರಂ ಆಧಾರದ ಮೇಲೆ ಅನಾವರಣಗೊಳ್ಳಲಿದ್ದು, ಒಂದೇ ತರಹದ ಆಯಾಮಗಳನ್ನು ಸಹ ಹೊಂದಿರುತ್ತವೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಗೊತ್ತಾಗಿದೆ.

ವಿ125 ರೂಪಾಂತರವು, 124.7 ಸಿಸಿ ಫ್ಯುಯೆಲ್ ಇಂಜೆಕ್ಟ್ ಎಂಜಿನ್ ಪಡೆಯುತ್ತದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ, 10.1 ಬಿಎಚ್‌ಪಿ ಹಾಗು 9.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂರು ಸ್ಕೂಟರ್‌ಗಳಲ್ಲಿ ಚಿಕ್ಕದಾದ ವಿ50 ಮಾದರಿಯು, 49.5 ಸಿಸಿ ಎಂಜಿನ್ ಆಯ್ಕೆ ಇರಲಿದ್ದು, ಏರ್ ಕೋಲ್ಡ್ , ಕಾರ್ಬ್ಯುರೇಟೆಡ್, ಸಿಂಗಲ್-ಸಿಲಿಂಡರ್ ಮೋಟರ್ ಅಳವಡಿಕೆಯಾಗಲಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ, 3.5 ಬಿಎಚ್‌ಪಿ ಹಾಗು 3.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ವಿ200 ವಾಹನವು ಪ್ರೀಮಿಯಂ ಸ್ಕೂಟರ್ ಆಗಿದೆ. ಈ ವಾಹನ 168.9 ಸಿಸಿ ಇಂಧನ ಇಂಜೆಕ್ಟ್ ಎಂಜಿನ್ ಪಡೆದುಕೊಳ್ಳುತ್ತದೆ ಹಾಗು ಗರಿಷ್ಠ 7,500 ಆರ್‌ಪಿಎಂನಲ್ಲಿ, 12.1 ಬಿಎಚ್‌ಪಿ ಹಾಗು 12.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ವಿ ಮಾದರಿಗಳು ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್‌ಗಳಂತಹ ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುತ್ತವೆ. ಮುಂಭಾಗದಲ್ಲಿ ಟೆಲೆಸ್ಕೋಪಿಕ್ ಸೂಸ್ಪೆನ್‌ಷನ್ ಕೂಡ ಪಡೆಯಲಿವೆ. ಲ್ಯಾಂಬ್ರೆಟಾ ವಾಹನಗಳು 220 ಎಂಎಂ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಮತ್ತು 110 ಎಂಎಂ ಡ್ರಮ್ ಬ್ರೇಕ್ ಸೌಕರ್ಯಗಳನ್ನು ಅಳವಡಿಕೆಗೊಳ್ಳಲಿವೆ. ವಿ125 ವಾಹನವು ಸಂಯೋಜಿತ ಬ್ರೇಕ್ ಸಿಸ್ಟಮ್ ಪಡೆಯುತ್ತದೆ ಮತ್ತು ವಿ200 ದ್ವಿಚಕ್ರ ಆಬಿಎಸ್ ಹೊಂದಲಿದೆ. ಎಲ್ಲಾ ಮೂರು ಸ್ಕೂಟರ್‌ಗಳಲ್ಲಿ 12ವಿ ಚಾರ್ಜಿಂಗ್ ಸಾಕೆಟ್ ಇರಿಸಲಾಗಿರುತ್ತದೆ.

Kannada
English summary
The Lambretta brand is a well-known name among the automotive enthusiasts in India. This brand had vanished from the market and now it makes a comeback in EICMA. The scooters will be built in Taiwan and will enter the Indian market in 2018.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more