ದೇಶಕ್ಕೆ ಮಗದೊಂದು ಪ್ರೀಮಿಯಂ ಸ್ಕೂಟರ್ - ವೆಸ್ಪಾ ಎಸ್

By Nagaraja

2012ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಇಟಲಿಯ ಐಕಾನಿಕ್ ಪಿಯಾಜಿಯೊ ಸಂಸ್ಥೆಯು ವಿಶ್ವದರ್ಜೆಯ ವೆಸ್ಪಾ ಸ್ಕೂಟರ್ ಮಾದರಿಗಳನ್ನು ದೇಶಕ್ಕೆ ಪರಿಚಯಿಸಿತ್ತು.

2014 ಆಟೋ ಎಕ್ಸ್ ಪೋ

ಇನ್ನೇನು ವೆಸ್ಪಾ ಬ್ರಾಂಡ್ ಭಾರತ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಗ್ರಾಹಕರಿಂದ ಅತೀವ ಬೇಡಿಕೆ ಕಂಡುಬಂದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡಿರುವ ಇಟಲಿಯ ಪಿಯಾಜಿಯೊ ಸಂಸ್ಥೆಯು ಇದೀಗಷ್ಟೇ ಅಂತ್ಯಗೊಂಡಿರುವ 2014 ಆಟೋ ಎಕ್ಸ್ ಪೋದಲ್ಲಿ ಇನ್ನಷ್ಟು ಪ್ರೀಯಿಯಂ ಸ್ಕೂಟರುಗಳನ್ನು ದೇಶಕ್ಕೆ ಪರಿಚಯಿಸಿದೆ.

ದೇಶಕ್ಕೆ ಮಗದೊಂದು ಪ್ರೀಮಿಯಂ ಸ್ಕೂಟರ್ - ವೆಸ್ಪಾ ಎಸ್

ಈ ವೆಸ್ಪಾ ಎಸ್ ಸ್ಕೂಟರ್ ಈಗಾಗಲೇ ವಿಶ್ಲೇಷಕರ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ವರ್ಷವೇ ಘೋಷಣೆಯಾದಂತೆಯೇ ವೆಸ್ಪಾ ಎಸ್ ಮಾದರಿ ಪ್ರದರ್ಶನಗೊಂಡಿದೆ. ಇದೀಗ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನೆಗೊಂಡಿರುವ ವೆಸ್ಪಾ ಎಸ್ ಪ್ರಸಕ್ತ ಸಾಲಿನಲ್ಲೇ ದೇಶದ ಮಾರುಕಟ್ಟೆಗೂ ತಲುಪಲಿದೆ.

ದೇಶಕ್ಕೆ ಮಗದೊಂದು ಪ್ರೀಮಿಯಂ ಸ್ಕೂಟರ್ - ವೆಸ್ಪಾ ಎಸ್

ತಯಾರಕರ ಪ್ರಕಾರ ವೆಸ್ಪಾ ಎಸ್ ಮಾದರಿಯಲ್ಲಿ ಕ್ಲಾಸಿಕ್ ವಿನ್ಯಾಸ ಜತೆ ಸ್ಪೋರ್ಟಿ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ. ಇದು ಇದೀಗಲೇ ಮಾರಾಟದಲ್ಲಿರುವ ಎಲ್‌ಎಕ್ಸ್ ಮತ್ತು ವಿಎಕ್ಸ್ 125 ಮಾದರಿಗಳಿಗೆ ಸಮಾನವಾದ ವಿನ್ಯಾಸ ಪಡೆದುಕೊಂಡಿದೆ.

ದೇಶಕ್ಕೆ ಮಗದೊಂದು ಪ್ರೀಮಿಯಂ ಸ್ಕೂಟರ್ - ವೆಸ್ಪಾ ಎಸ್

ಆಯತಕಾರದ ಹೆಡ್ ಲ್ಯಾಂಪ್ ಮತ್ತು ರಿಯರ್ ವ್ಯೂ ಮಿರರ್ ಇದರ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಹಾಗೆಯೇ ದೊಡ್ಡದಾದ ಸಿಗ್ನಲ್ ಲ್ಯಾಂಪ್ ಮತ್ತು ಅಲಾಯ್ ವೀಲ್ ಪಡೆದುಕೊಂಡಿದೆ. ಇನ್ನೊಂದು ಮಹತ್ವದ ಫೀಚರ್ ಏನೆಂದರೆ ರೆಟ್ರೊ ಶೈಲಿಯ (ಹಳೆಯ) ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಅನಾಲಾಗ್ ಪಡೆದುಕೊಂಡಿದೆ.

ದೇಶಕ್ಕೆ ಮಗದೊಂದು ಪ್ರೀಮಿಯಂ ಸ್ಕೂಟರ್ - ವೆಸ್ಪಾ ಎಸ್

ಜಾಗತಿಕ ಮಾರುಕಟ್ಟೆಯಲ್ಲಿ ವೆಸ್ಪಾ ಎಸ್ 125 ಸಿಸಿ ಮತ್ತು 150 ಸಿಸಿಗಳಲ್ಲಿ ಲಭ್ಯವಿರುತ್ತದೆ. ಆದರೆ ಭಾರತದಲ್ಲಿ ಸದ್ಯಕ್ಕೆ 125 ಸಿಸಿ ಮಾತ್ರ ಪರಿಚಯವಾಗಲಿದೆ. ಇನ್ನು ಕ್ಲಾಸಿಕ್ ಸಿಂಗಲ್ ಸೈಡಡ್ ಹೈಡ್ರಾಲಿಕ್ ಫ್ರಂಟ್ ಸಸ್ಫೆಷನ್, ಮೆಟಾಲ್ ಮೊನೊಕಾಕ್ ಚಾಸೀಸ್ ಮತ್ತು ಕ್ರೋಮ್ ಫಿನಿಶ್ ಸ್ಟಾಂಡರ್ಡ್ ಆಗಿ ದೊರಕಲಿದೆ.

ದೇಶಕ್ಕೆ ಮಗದೊಂದು ಪ್ರೀಮಿಯಂ ಸ್ಕೂಟರ್ - ವೆಸ್ಪಾ ಎಸ್

ವರದಿಗಳ ಪ್ರಕಾರ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ವೆಸ್ಪಾ ಎಸ್ ಬಿಡುಗಡೆಯಾಗಲಿದೆ. ಇದು ಎಲ್‌ಎಕ್ಸ್ ಮತ್ತು ವಿಎಕ್ಸ್ ಮಾದರಿಗಳ ರೇಂಜ್‌ನಲ್ಲಿ ದರ ನಿಗದಿಗೊಳ್ಳಲಿದೆ. ಇನ್ನು ಪಿಯಾಜಿಯೊದ ಪುಣೆ ಘಟಕದಲ್ಲಿ ಸ್ಕೂಟರ್ ನಿರ್ಮಾಣವಾಗಲಿದೆ.

More from DriveSpark

Article Published On: Friday, February 14, 2014, 9:02 [IST]
English summary
Vespa had confirmed last year that its new scooter model, the Vespa S, would be launched in India by the end of 2013. But that never happened. However, the launch of the new scooter is likely to happen this year as the Vespa S was showcased at the Auto Expo 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+