ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

By Nagaraja

ದೇಶದ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಒಂದಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅತಿ ಹೆಚ್ಚಿನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಎಲ್ಲರಿಗೂ ಹೊಂದಿಕೊಳ್ಳುವಂತಹ ವಿನ್ಯಾಸ, ನಿರ್ಹವಣೆ, ಆರಾಮ, ಅನುಕೂಲ ಹೀಗೆ ಎಲ್ಲ ವಿಭಾಗದಲ್ಲೂ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ತಮ್ಮ ಸ್ವಿಫ್ಟ್ ಇತರರಿಗಿಂತ ವಿಭಿನ್ನವಾಗಿ ಕಾಣಿಸಬೇಕೆಂಬುದು ಹಲವರ ಬಯಕೆಯಾಗಿದೆ. ಇದಕ್ಕಾಗಿ ಅನೇಕ ಮಾರ್ಪಾಡುಗಳನ್ನು ತರುತ್ತಾರೆ. ಹಾಗಿರಬೇಕೆಂದರೆ ಸೂಪರ್ ಕಾರಿಗಿಂತಲೂ ಕಮ್ಮಿಯೇನಲ್ಲ ಎಂದು ಬಿಂಬಿಸುವ ರೀತಿಯಲ್ಲಿ ನೂತನ ಸ್ವಿಫ್ಟ್ ಕಾರಿನ ಪ್ರವೇಶವಾಗಿದೆ. ಇದು ಥೇಟ್ ನಿಸ್ಸಾನ್ ಜಿಟಿಆರ್ ಕಾರನ್ನು ಹೋಲುತ್ತಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ಜಪಾನ್ ಮೂಲದ ಐಕಾನಿಸ್ ಸಂಸ್ಥೆ ನಿಸ್ಸಾನ್, ಭಾರತದಲ್ಲಿ ಜಿಟಿಆರ್ ಸೂಪರ್ ಕಾರನ್ನು ಬಿಡುಗಡೆ ಮಾಡಲು ಯೋಜನೆ ಇರುವ ಇದೇ ಹೊತ್ತಿನಲ್ಲಿ, ಹೊಸ ಕಸ್ಟಮೈಸ್ಡ್ ಕಾರಿನ ಪ್ರವೇಶವಾಗಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ಕೇರಳದ ಕೊಲ್ಲಂ ತಳಹದಿಯ ಕಸ್ಟಮೈಸ್ಡ್ ಸಂಸ್ಥೆಯಾಗಿರುವ ಕ್ಯಾಡಿ ಕ್ರ್ಯೂವ್ಜ್, ಜನಪ್ರಿಯ ಮಾದರಿಗೆ ಕ್ರೀಡಾ ವಿನ್ಯಾಸವನ್ನು ತುಂಬಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ಕಾರಿನ ಮುಂಭಾಗದಲ್ಲಿ ಜಿಟಿಆರ್ ಕಾರಿಗೆ ಹೋಲುವಂತಹ ಫ್ರಂಟ್ ಗ್ರಿಲ್, ಹೊಸತಾದ ಬಂಪರ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ ಮತ್ತು ಫ್ರಂಟ್ ಸ್ಪಾಯ್ಲರ್ ಗಳನ್ನು ಕಾಣಬಹುದಾಗಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ಇದರ ಹೊರತಾಗಿ 17 ಇಂಚುಗಳ ಅಲಾಯ್ ವೀಲ್, ಸೈಡ್ ಸ್ಕರ್ಟ್, ಕಸ್ಟಮ್ ಫೆಂಡರ್ ಇತ್ಯಾದಿ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ಕಾರಿನ ಹಿಂದುಗಡೆ ಕ್ರೀಡಾತ್ಮಕ ಶೈಲಿಗೆ ಅನುಗುಣವಾಗಿ ನಾಲ್ಕು ಎಕ್ಸಾಸ್ಟ್ ಕೊಳವೆಗಳನ್ನು ಹಾಗೂ ಹೆಚ್ಚು ಅಗಲವಾದ ಬಂಪರ್ ಗಳನ್ನು ಲಗತ್ತಿಸಲಾಗಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಹೊಸತಾದ ಹೆಡ್ ಲೈಟ್ ಮತ್ತು ಟೈಲ್ ಲ್ಯಾಂಪ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ಕಾರಿನೊಳಗೆ ಸ್ಪಾರ್ಕೊ ಗೇರ್ ನಾಬ್, ಮೊಮೊ ಪೆಡಲ್ ವ್ಯವಸ್ಥೆಗಳನ್ನು ಕೊಡಲಾಗಿದೆ. ಇವೆಲ್ಲದರ ಹೊರತಾಗಿ ಹೊಸ ಬಣ್ಣವನ್ನು ಮೈಗೂಡಿಸಲಾಗಿದೆ.

ಥೇಟ್ ನಿಸ್ಸಾನ್ ಜಿಟಿಆರ್ ಸೂಪರ್ ಕಾರನ್ನು ಹೋಲುವ ಸ್ವಿಪ್ಟ್

ಇಷ್ಟೆಲ್ಲ ಹೇಳಿದ ಮೇಲೆ ನಿಸ್ಸಾನ್ ಜಿಟಿಆರ್ ಹೇಗೆ ಗೋಚರಿಸುತ್ತಿದೆ ಎಂಬುದನ್ನು ಅರಿಯದಿದ್ದರೆ ಹೇಗೆ? ಇಲ್ಲಿದೆ ನೋಡಿ ಅಂದವಾದ ನಿಸ್ಸಾನ್ ಜಿಟಿಆರ್ ಸೂಪರ್ ಕಾರು.

Most Read Articles

Kannada
English summary
Maruti Swift Redesigned As A GT-R, Looks Surprisingly Good
Story first published: Thursday, June 23, 2016, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X