ದಕ್ಷಿಣ ಭಾರತದ ಪ್ರವಾಸಿ ತಾಣಗಳತ್ತ ಎಕ್ಸ್‌ಟ್ರೀಮ್ ಪಯಣ

By Nagaraja

ಇಂದಿನ ಯುವ ಜನಾಂಗ ಬೈಕ್ ಚಾಲನೆ ಮಾಡಲು ತುಂಬಾನೇ ಇಷ್ಟಪಡುತ್ತಾರೆ. ಒಂದು ದಿನದ ಪ್ರವಾಸ ಅಥವಾ ಕಾಲೇಜ್ ಗೆಳೆಯ ಅಥವಾ ಗೆಳೆತಿಯರ ಜೊತೆಗೆ ಸುತ್ತಾಡಿಕೊಳ್ಳಲು ಬೈಕ್‌ ಉತ್ತಮ ಆಯ್ಕೆ. ಹಾಗೆ ನೋಡಿದಾಗ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆ ಅಪಾರವಾಗಿ ಬೆಳೆದು ನಿಂತಿದೆ. ಇಲ್ಲಿ 100 ಸಿಸಿ ಬೈಕ್‌ಗಳಿಂದ ಹಿಡಿದು 150 ಸಿಸಿ ಬೈಕ್‌ಗಳನ್ನು ಪ್ರಯಾಣಿಕ ಬೈಕ್ ಎಂದೇ ಪರಿಗಣಿಸಲ್ಪಡುತ್ತದೆ. ಈ ವಿಭಾಗಕ್ಕೆ ಹೀರೊ ಎಕ್ಸ್‌ಟ್ರೀಮ್ ಹೊಸ ಸೇರ್ಪಡೆಯಾಗಿದೆ. ಸಿಬಿಝಡ್ ಮತ್ತು ಸಿಬಿಝಡ್ ಎಕ್ಸ್‌ಟ್ರೀಮ್ ಬಳಿಕ ಇದೇ ವಿಭಾಗದಲ್ಲಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಿಂದ ಕಾಣಿಸಿಕೊಳ್ಳುತ್ತಿರುವ ಮೂರನೇ ಬೈಕ್ ಇದಾಗಿದೆ.

ಇವನ್ನೂ ಓದಿ: ಅಮೆರಿಕ ಶೈಲಿಯ ಬೈಕ್ ಭಾರತಕ್ಕೆ

150 ಸಿಸಿ ವಿಭಾಗವನ್ನು ಪರಿಗಣಿಸಿದಾಗ ಬಜಾಜ್ ಪಲ್ಸರ್ ಅತಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಸಾಮಾನ್ಯವಾಗಿ 150 ಸಿಸಿ ವಿಭಾಗದಲ್ಲಿ ಗ್ರಾಹಕರು ಹೆಚ್ಚು ನಿರ್ವಹಣೆ ಹಾಗೂ ಶೈಲಿಯನ್ನು ಬಯಸುತ್ತಾರೆ. ಇವೆಲ್ಲವನ್ನೂ ನಿಭಾಯಿಸುವಲ್ಲಿ ಹೊಸ ಎಕ್ಸ್‌ಟ್ರೀಮ್ ಯಶಸ್ವಿಯಾಗಿದೆ. ಅಂದ ಹಾಗೆ ಈ ಹೊಚ್ಚ ಹೊಸ ಎಕ್ಸ್‌ಟ್ರೀಮ್ ಬೈಕ್ ಓಡಿಸಲು ನಮ್ಮ ಡ್ರೈವ್‌ಸ್ಪಾರ್ಕ್ ತಂಡಕ್ಕೂ ಅವಕಾಶ ದೊರಕಿತ್ತು. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳದ ನಮ್ಮ ತಂಡವು ದಕ್ಷಿಣ ಭಾರತದ ಪ್ರವಾಸಿ ಹಾಗೂ ಪ್ರಕೃತಿ ರಮಣೀಯ ಪ್ರದೇಶಗಳಿಂದ ಕೂಡಿದ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಪಯಣ ಬೆಳೆಸುವಲ್ಲಿ ಯಶಸ್ವಿಯಾಗಿತ್ತು.

ರೋಡ್ ಮ್ಯಾಪ್

ರೋಡ್ ಮ್ಯಾಪ್

ಎಕ್ಸ್‌ಟ್ರೀಮ್ ರೋಡ್ ಮ್ಯಾಪ್ - ದಿನ 1 ಬೆಂಗಳೂರು - ಮೈಸೂರು - ಹನ್ಸೂರ್ - ಪೊನ್ನಂಪೆಟ್ - ತೋಲ್ಪೆಟ್ಟಿ - ಮಾನಂದವಾಡಿ - ಕುಟ್ಟಿಯಾಡಿ - ಕಾಪಾಡ್ - ಕಲ್ಲಿಕೋಟೆ. ದಿನ 2 - ಕಲ್ಲಿಕೋಟೆ - ವೈಥಿರಿ - ಕಲ್ಪೆಟ್ಟ - ಚುಂಡಾಲೆ - ಗುಂಡಲೂರ್ - ಮಸಿನಗುಡಿ - ಊಟಿ - ಕುಂಧಾ. ದಿನ 3 - ಕುಂಧಾ - ಎಮೆರಾಲ್ಡ್ ಲೇಕ್ - ಊಟಿ - ಮೆಟ್ಟುಪಲಾಯಂ - ಸತ್ಯಮಂಗಲಂ - ಕೊಲ್ಲೇಗಾಲ್ - ಮಲವಲ್ಲಿ - ಬೆಂಗಳೂರು.

ಇಲ್ಲಿ ಗಮನಾರ್ಹ ವಿಷಯವೆಂದರೆ ಒಟ್ಟು 1200 ಕೀ.ಮೀ. ದೂರ ಕ್ರಮಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿತ್ತು. ಹೊಚ್ಚ ಹೊಸ ಬೈಕ್‌ನಲ್ಲಿ ಮೊದಲ ಪಯಣದಲ್ಲೇ ಇಷ್ಟೊಂದು ದೂರ ಸಂಚರಿಸುವುದು ಅಷ್ಟು ಸುಲಭದ ಮಾತಲ್ಲ. ಹಾಗಿದ್ದರೂ ಇವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ಎಕ್ಸ್‌ಟ್ರೀಮ್ ಯಶ ಕಂಡಿದೆ.

ಪರೀಕ್ಷೆ ಮಾಡಿದ ಮಾದರಿ: 2014 ಹೀರೊ ಎಕ್ಸ್‌ಟ್ರೀಮ್ (ಡಬಲ್ ಡಿಸ್ಕ್)

ಬೆಲೆ: 83,926 ರು. (ಆನ್ ರೋಡ್ ಬೆಂಗಳೂರು)

ಎಂಜಿನ್: 149.2ಸಿಸಿ

ಪವರ್: 14.2 ಬಿಎಚ್‌ಪಿ

ಗರಿಷ್ಠ ವೇಗ: 110 km/h (ಟೆಸ್ಟಿಂಗ್ ವೇಳೆ)

ಒಟ್ಟು ಕೀ.ಮೀ.: 1200

ವಿನ್ಯಾಸ

ವಿನ್ಯಾಸ

ಹೀರೊ ಎಕ್ಸ್‌ಟ್ರೀಮ್ ವಿನ್ಯಾಸದ ಬಗ್ಗೆ ಎರಡು ಮಾತಿಲ್ಲ. ಇದು ಚೂಪಾದ ಡಿಸೈನ್ ಪಡೆದುಕೊಂಡಿದೆ. ಚಾಲನೆ ವೇಳೆ ಸವಾರರಿಗೆ ಹೆಚ್ಚು ಆತ್ಮವಿಶ್ವಾಸ ಒದಗಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಹಿಂದುಗಡೆಯೂ ಮೊನಚಾದ ಫಿನಿಶಿಂಗ್ ಮಾಡಲಾಗಿದೆ. ಒಟ್ಟಾರೆಯಾಗಿ ಈ ವಿಭಾಗದ ಅತ್ಯುತ್ತಮ ಬೈಕ್‌ಗಳಲ್ಲಿ ಒಂದೆನಿಸಿಕೊಂಡಿದೆ.

ಎಂಜಿನ್

ಎಂಜಿನ್

149.2 ಸಿಸಿ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸ್ಪಡುವ ಹೊಸ ಎಕ್ಸ್‌ಟ್ರೀಮ್ 14.4 ಪಿಎಸ್ ಪವರ್ (8500 ಆವರ್ತನಕ್ಕೆ) ಉತ್ಪಾದಿಸುತ್ತದೆ. ಇದು 12.8 ಎನ್‌ಎಂ ಟಾರ್ಕ್ (6500 ಆವರ್ತನಕ್ಕೆ) ನೀಡುತ್ತದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಸಹ ಹೊಂದಿರುತ್ತದೆ.

ನಿರ್ವಹಣೆ

ನಿರ್ವಹಣೆ

ದಕ್ಷಿಣ ಭಾರತದ ಅತ್ಯಂತ ಕಡಿದಾದ ಹಾಗೂ ಏರು ತಗ್ಗುಗಳಿಂದ ಕೂಡಿದ ರಸ್ತೆಯಲ್ಲಿ ಚಲಿಸಿರುವ ಹೊರತಾಗಿಯೂ ಹೊಸ ಎಕ್ಸ್‌ಟ್ರೀಮ್ ಪ್ರತಿ ಲೀಟರ್‌ಗೆ ಸರಾಸರಿ 45 ಕೀ.ಮೀ. ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಿದೆ. ಇದು ಅತ್ಯಂತ ನಯವಾದ ಎಂಜಿನ್ ಪಡೆದುಕೊಂಡಿದೆ.

ಮೈಲೇಜ್

ಮೈಲೇಜ್

ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 65 ಕೀ.ಮೀ. ಮೈಲೇಜ್ ಹೊಂದಿದ್ದರೂ ನೈಜ ಪರಿಸ್ಥಿತಿಯಲ್ಲಿ ಪ್ರತಿ ಲೀಟರ್‌ಗೆ 45 ಕೀ.ಮೀ. ಮೈಲೇಜ್ ನೀಡಲು ಯಶಸ್ವಿಯಾಗಿರುವುದು ಅತ್ಯುತ್ತಮವೆನಿಸಿದೆ. ಪ್ರಸ್ತುತ ಬೈಕ್ ಕಡಿದಾದ ಘಾಟಿ ಹಾಗೂ ಹೆದ್ದಾರಿಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು ಎಂಬುದು ಗಮನಾರ್ಹವೆನಿಸುತ್ತದೆ.

ಚಾಲನೆ ಮತ್ತು ಹ್ಯಾಂಡ್ಲಿಂಗ್

ಚಾಲನೆ ಮತ್ತು ಹ್ಯಾಂಡ್ಲಿಂಗ್

ನಿಜಕ್ಕೂ ಎಕ್ಸ್‌ಟ್ರೀಮ್ ಹ್ಯಾಂಡ್ಲಿಂಗ್ ಅತ್ಯುತ್ತಮವೆನಿಸಿದೆ. ಕೊಟಗಿರಿಯಲ್ಲಿ 56 ಕೀ.ಮೀ. ವೇಗದಲ್ಲಿ ಬೀಸುವ ಗಾಳಿಯ ನಡುವೆ ಹ್ಯಾಡ್ಲಿಂಗ್ ಹಾಗೂ ತಿರುವು ಸಾಮರ್ಥ್ಯವನ್ನು ಪರೀಕ್ಷಿಸಲು ಯೋಗ್ಯವಾದ ಪ್ರದೇಶವಾಗಿದೆ. ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಎಕ್ಸ್‌ಟ್ರೀಮ್ ಯಶಸ್ವಿಯಾಗಿದೆ.

ಹಾಗಿದ್ದರೂ ಹ್ಯಾಂಡಲ್‌ಬಾರ್ ಸ್ಥಾನ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿದೆ. ಇದು ಸಂಪೂರ್ಣವಾಗಿ ಮುಂದಕ್ಕೆ ಬಾಗಿಕೊಂಡು ಚಾಲನೆ ಮಾಡುವ ರೀತಿಯಲ್ಲಿ ಅಥವಾ ನೇರವಾಗಿ ಕುಳಿತುಕೊಂಡು ಚಾಲನೆ ಮಾಡುವ ರೀತಿಯಲ್ಲಿಲ್ಲ. ಇದು ಸವಾರರ ಕುತ್ತಿಗೆಗೆ ಹೆಚ್ಚು ನೋವನ್ನುಂಟು ಮಾಡುವ ಸಾಧ್ಯತೆಯಿದೆ.

ಆಸನ

ಆಸನ

ಆರಾಮದಾಯಕ ಆಸನ ವ್ಯವಸ್ಥೆಯನ್ನು ಎಕ್ಸ್‌ಟ್ರೀಮ್ ಪಡೆದುಕೊಂಡಿದೆ. ಇಲ್ಲಿ ಗಮನಿಸಿಬೇಕಾದ ಅಂಶವೆಂದರೆ ತುಂಬಾ ಎತ್ತರದ ಸಿಟ್ಟಿಂಗ್ ವ್ಯವಸ್ಥೆ ಇದರಲ್ಲಿದೆ. ಇದು ಕಡಿಮೆ ಉದ್ದದ ಸವಾರರಿಗೆ ಸ್ವಲ್ಪ ಕಷ್ಟಕರವಾಗಲಿದೆ.

ಫ್ರಂಟ್, ರಿಯರ್ ಬ್ರೇಕ್

ಫ್ರಂಟ್, ರಿಯರ್ ಬ್ರೇಕ್

ಇದು ಮುಂದುಗಡೆ 240 ಎಂಎಂ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ. ಅದೇ ರೀತಿ ಹಿಂಭಾಗದ 220 ಎಂಎಂ ಡಿಸ್ಕ್ ಬ್ರೇಕ್ ಉತ್ತಮ ಕೆಲಸ ಮಾಡುತ್ತದೆ. ಇದು ಐಚ್ಛಿಕ ಡ್ರಮ್ ಬ್ರೇಕ್ ಸಹ ಪಡೆದುಕೊಂಡಿರುತ್ತದೆ.

ನಮಗಿಷ್ಟವಾದ ಸಂಗತಿಗಳು - 1. ಎಲ್‌ಇಡಿ ಲೈಟ್ ಗೈಡ್

ನಮಗಿಷ್ಟವಾದ ಸಂಗತಿಗಳು - 1. ಎಲ್‌ಇಡಿ ಲೈಟ್ ಗೈಡ್

ಈಗ ಎಕ್ಸ್‌ಟ್ರೀಮ್ ಬೈಕ್‌ನಲ್ಲಿ ನಮ್ಮ ಪ್ರಶಂಸೆಗೆ ಪಾತ್ರವಾದ ಕೆಲವೊಂದು ಮುಖ್ಯ ಅಂಶಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ ಮಾಡಲಿದೆ. ಇದರಲ್ಲಿ ಮೊದಲನೆಯದ್ದು ಎಲ್‌ಇಡಿ ಲೈಟ್ ಗೈಡ್ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಇದು ಬೈಕ್ ವಿನ್ಯಾಸಕ್ಕೆ ತಕ್ಕಂತೆ ರಚಿಸಲಾಗಿದ್ದು, ಹೆಚ್ಚು ಗೋಚರತೆ ಪ್ರದಾನ ಮಾಡುವುದಷ್ಟೇ ಅಲ್ಲದೆ ಇತರ ವಾಹನಗಳನ್ನು ಎಚ್ಚರಿಸುವ ಮೂಲಕ ಸುರಕ್ಷತೆಯನ್ನ ಖಾತ್ರಿಪಡಿಸುತ್ತದೆ.

ನಮಗಿಷ್ಟವಾದ ಸಂಗತಿಗಳು - 2. ಮೊಬೈಲ್ ಚಾರ್ಜರ್

ನಮಗಿಷ್ಟವಾದ ಸಂಗತಿಗಳು - 2. ಮೊಬೈಲ್ ಚಾರ್ಜರ್

ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಸೀಟು ಕೆಳಗಡೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಕೂಡಾ ಇರುತ್ತದೆ. ಇಲ್ಲಿ ಸುರಕ್ಷಿತವಾಗಿ ಫೋನ್ ಚಾರ್ಜ್ ಮಾಡಬಹುದಾಗಿದೆ. ಆದರೆ 4.7 ಇಂಚಿಗಿಂತ ದೊಡ್ಡ ಫೋನ್ ನಿಮ್ಮದಾಗಿದ್ದರೆ ಫಿಟ್ ಆಗುವುದು ಕಷ್ಟಕರವಾಗಲಿದೆ.

ನಮಗಿಷ್ಟವಾದ ಸಂಗತಿಗಳು - 3. ಇನ್ಸ್ಟ್ರುಮೆಂಟ್ ಕ್ಲಸ್ಟರ್

ನಮಗಿಷ್ಟವಾದ ಸಂಗತಿಗಳು - 3. ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇನ್ನು ನೀಲಿ ಬಣ್ಣದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎಕ್ಸ್‌ಟ್ರೀಮ್ ಬೈಕ್‌ಗೆ ಇನ್ನಷ್ಟು ಪ್ರೀಮಿಯಂ ಲುಕ್ ನೀಡುತ್ತದೆ. ಇದರ ದೊಡ್ಡದಾದ ಅನಲಾಗ್ ನಡುವೆ ಆರ್‌ಪಿಎಂ ಮೀಟರ್ ಇರುತ್ತದೆ. ಸ್ಪೀಡೋ ರೀಡಿಂಗ್, ಓಡೊ ರಿಡಿಂಗ್ ಮತ್ತು ಫ್ಲೂಯಲ್ ಗೇಜ್ ಎಲ್ಲವೂ ಡಿಜಿಟಲ್‌ಮಯವಾಗಿದೆ. ಇನ್ಸ್ರುಮೆಂಟ್ ಕ್ಲಸ್ಟರ್ ದೊಡ್ಡದಾದ ಡಿಸ್‌ಪ್ಲೇ ಹೊಂದಿದ್ದು, ಆರ್‌ಪಿಎಂ ಮೀಟರ್‌ನಲ್ಲಿ ಸೈಡ್ ಸ್ಟ್ಯಾಂಡ್ ಲೈಟ್ ಸಹ ಇರುತ್ತದೆ. ಮಗದೊಂದು ಅತ್ಯಾಕರ್ಷಕ ವೈಶಿಷ್ಟ್ಯ ಏನೆಂದರೆ ಸೈಡ್ ಸ್ಟ್ಯಾಂಡ್ ಹಾಕಿರುವಾಗಲೇ ಎಂಜಿನ್ ಸ್ಟಾರ್ಟ್ ಮಾಡಿ ಗೇರ್ ಬದಲಾವಣೆಗೆ ಪ್ರಯತ್ನಿಸಿದ್ದಲ್ಲಿ ಗಾಡಿ ತನ್ನಿಂದ ತಾನೇ ಆಫ್ ಆಗಲಿದೆ.

ನಮಗಿಷ್ಟವಾದ ಸಂಗತಿಗಳು - 4. ಹೆಡ್‌ಲೈಟ್

ನಮಗಿಷ್ಟವಾದ ಸಂಗತಿಗಳು - 4. ಹೆಡ್‌ಲೈಟ್

ಹೊಸ ಎಕ್ಸ್‌ಟ್ರೀಮ್ ಹೆಡ್‌ಲೈಟ್ ಪ್ರಶಂಸೆಗೆ ಪಾತ್ರವಾಗುತ್ತದೆ. ಇದರ ದೊಡ್ಡಕಾರಾದ ಹೆಡ್‌ಲೈಟ್ ಉತ್ತಮ ಗೋಚರತೆ ಪ್ರದಾನ ಮಾಡುತ್ತದೆ. ನಮ್ಮ ತಂಡದ ಚಾಲನೆ ವೇಳೆ ಕಲ್ಲಿಕೋಟೆಯ ಕಾಪಾಡ್ ಸಮುದ್ರ ತೀರ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕತ್ತಲು ಆವರಿಸಿದ್ದರೂ ಉತ್ತಮ ಚಾಲನಾ ನೀಡುವಲ್ಲಿ ಎಕ್ಸ್‌ಟ್ರೀಮ್ ಯಶಸ್ವಿಯಾಗಿದೆ.

ನಮಗಿಷ್ಟವಾದ ಸಂಗತಿಗಳು - 5. ಗ್ರಾಬ್ ರೈಲ್

ನಮಗಿಷ್ಟವಾದ ಸಂಗತಿಗಳು - 5. ಗ್ರಾಬ್ ರೈಲ್

ಇನ್ನು ಹಿಂದುಗಡೆ ವಿಭಜಿತ ಗ್ರಾಬ್ ರೈಲ್ ಪಡೆದುಕೊಂಡಿದ್ದು, ಒಟ್ಟಾರೆ ಬೈಕ್ ನೋಟಕ್ಕೆ ಇನ್ನಷ್ಟು ಅಂದತೆ ನೀಡುತ್ತದೆ.

ನಮಗಿಷ್ಟವಾದ ಸಂಗತಿಗಳು - 6. ಡ್ಯುಯಲ್ ಟೋನ್ ಮಿರರ್

ನಮಗಿಷ್ಟವಾದ ಸಂಗತಿಗಳು - 6. ಡ್ಯುಯಲ್ ಟೋನ್ ಮಿರರ್

ಬೈಕ್ ಮಿರರ್‌ನಲ್ಲಿ ಡ್ಯುಯಲ್ ಟೋನ್ ಬಣ್ಣಗಳನ್ನು ನೀವಿಲ್ಲಿ ಕಾಣಬಹುದಾಗಿದೆ. ಮಿರರ್, ಇಂಡಿಕೇಟರ್ ಎಲ್ಲವೂ ಸ್ಟೈಲಿಷ್ ಫಿನಿಶ್ ಪಡೆದುಕೊಂಡಿದೆ. ಅದೇ ರೀತಿ ಟೈಲ್ ಲ್ಯಾಂಪ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಸಹ ಅತ್ಯುತ್ತಮವಾಗಿದೆ. ಇದು ಐದು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ನಮಗಿಷ್ಟವಾಗದ ಸಂಗತಿಗಳು - 1. ಫೂಟ್ ಕಂಟ್ರೋಲ್

ನಮಗಿಷ್ಟವಾಗದ ಸಂಗತಿಗಳು - 1. ಫೂಟ್ ಕಂಟ್ರೋಲ್

ಸವಾರ ಗೇರ್ ಶಿಫ್ಟ ಸಹ ತುಂಬಾನೇ ಸಣ್ಣದಾಗಿದ್ದು ಇದರಿಂದ ಸವಾರ ಗೇರ್ ಮೇಲಕ್ಕೆ ಬದಲಾವಣೆ ಮಾಡುವಾಗ ತುಂಬಾನೇ ಪ್ರಯಾಸ ಪಡಬೇಕಾಗುತ್ತದೆ. ಅದೇ ರೀತಿ ಫೂಟ್ ಸ್ಥಾನ ಪರಿಪೂರ್ಣವೆನಿಸಿಕೊಂಡಿಲ್ಲ. ಇದಕ್ಕಾಗಿ ಸವಾರ ಕಾಲನ್ನು ಮೇಲಕ್ಕೆತ್ತಬೇಕಾಗುತ್ತದೆ.

 ನಮಗಿಷ್ಟವಾಗದ ಸಂಗತಿಗಳು - 1. ಸ್ವಿಚ್

ನಮಗಿಷ್ಟವಾಗದ ಸಂಗತಿಗಳು - 1. ಸ್ವಿಚ್

ಹೀರೊ ಎಕ್ಸ್‌ಟ್ರೀಮ್ ಸ್ವಿಚ್ ಬಳಕೆ ಬಹಳ ಸರಳವಾಗಿದ್ದು, ಸರಿಯಾದ ಜಾಗದಲ್ಲಿಯೇ ಲಗತ್ತಿಸಲಾಗಿದೆ. ಆದರೆ ಆಧುನಿಕ ತಕ್ಕಂತೆ ಎಂಜಿನ್ ಕಿಲ್ (engine kill) ಬಟನ್ ಆಯ್ಕೆಯನ್ನು ನೀಡುತ್ತಿದ್ದರೆ ಟ್ರಾಫಿಕ್‌ನಲ್ಲಿ ಬಳಕೆ ಇನ್ನಷ್ಟು ಸುಲಭವಾಗಿರುತ್ತಿತ್ತು.

ಬೆಲೆ

ಬೆಲೆ

ಇನ್ನು ಹೀರೊ ಎಕ್ಸ್‌ಟ್ರೀಮ್ ಡ್ಯುಯಲ್ ಡಿಸ್ಕ್ ಮತ್ತು ಸಿಂಗಲ್ ಡಿಸ್ಕ್ ಮಾದರಿಯು ಅನುಕ್ರಮವಾಗಿ 83,926 ರು. ಹಾಗೂ 80,478 ರು.ಗಳಷ್ಟು (ಆನ್ ರೋಡ್ ಬೆಂಗಳೂರು) ದುಬಾರಿಯೆನಿಸಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಒಟ್ಟಾರೆ ಪ್ಯಾಕೇಜ್ ನೋಡಿದಾಗ ಹೀರೂ ಎಕ್ಸ್‌ಟ್ರೀಮ್ ನಿಮಗೆ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ. ಕೆಲವೊಂದು ಸಣ್ಣ ಪುಟ್ಟ ಕೊರತೆಗಳನ್ನು ಹೊರತುಪಡಿಸಿದರೆ ನಯವಾದ ಎಂಜಿನ್, ಹ್ಯಾಂಡ್ಲಿಂಗ್ ಹಾಗೂ ವೈಶಿಷ್ಟ್ಯಗಳು ಹೀರೊ ಎಕ್ಸ್‌ಟ್ರೀಮ್ ಬೈಕನ್ನು 150 ಸಿಸಿ ವಿಭಾಗದಲ್ಲಿ ಶ್ರೇಷ್ಠೆವನಿಸಿಕೊಳ್ಳಲು ಸಹಕಾರಿಯಾಗಲಿದೆ.

ಸ್ಪರ್ಧಾಳುಗಳು

ಸ್ಪರ್ಧಾಳುಗಳು

ಅಂದ ಹಾಗೆ ಹೊಸ ಹೀರೊ ಎಕ್ಸ್‌ಟ್ರೀಮ್ ಬೈಕ್ ದೇಶದ ನಂ.1 ಕ್ರೀಡಾ ಬೈಕ್ ಬಜಾಜ್ ಪಲ್ಸರ್ 150, ಬಜಾಜ್ ಡಿಸ್ಕವರ್ 150 ಎಫ್, ಯಮಹಾ ಎಫ್‌ಝಡ್ 2.0 ಹಾಗೂ ಸುಜುಕಿ ಜಿಕ್ಸರ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಸಂಸ್ಥೆಯ ಬಗ್ಗೆ

ಸಂಸ್ಥೆಯ ಬಗ್ಗೆ

1984ನೇ ಇಸವಿಯಿಂದ ಹೋಂಡಾ ಜೊತೆಗೆ ಪಾಲುದಾರಿಕೆ ಹೊಂದಿದ್ದ ಹೀರೊ 2011ರಲ್ಲಿ ಜಪಾನ್ ಮೂಲದ ಐಕಾನಿಕ್ ಸಂಸ್ಥೆಯ ಜೊತೆಗಿನ ಒಪ್ಪಂದ ಕಡಿದುಕೊಂಡ ಬಳಿಕ ಹೀರೊ ಮೊಟೊಕಾರ್ಪ್ ದೇಶದಲ್ಲ ತನ್ನದೇ ಆದ ಮಾರಾಟ ವಲಯ ಸ್ಥಾಪಿಸಿತ್ತು.

ಅಂತೆಯೇ 2013ರಲ್ಲಿ ಅಮೆರಿಕದ ಎರಿಕ್ ಬ್ಯುಯೆಲ್ ರೇಸಿಂಗ್‌ನಿಂದ ಶೇ. 49.2 ಶೇರು ವಶಪಡಿಸಿಕೊಂಡಿತ್ತು. ಸಂಸ್ಥೆಯು ಈಗ ಭಾರತ ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯವನ್ನು ಹೊಂದಿದೆ.


More from DriveSpark

Article Published On: Friday, January 23, 2015, 11:52 [IST]
English summary
Let's find out how the 2014 Hero Xtreme rated on engine performance, ride and handling, quality and reliability, and value for money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+