ಫಿಯೆಟ್ 500: ಸಣ್ಣಕಾರು ಲೋಕದಲ್ಲಿ ಗತ್ತಿನ ಬಂಡಿ

ಇದು ಎರಡು ಡೋರಿನ ಕಾರು. ಮಹೀಂದ್ರ ರೇವಾಕ್ಕಿಂತ ಕೊಂಚ ದೊಡ್ಡದಿದೆ ಅಷ್ಟೆ. ಇದು ದುಬಾರಿ ಕಾರು ಕೂಡ ಹೌದು. ಈ ಕಾರಿನಲ್ಲಿ ಸಾಕಷ್ಟು ಫೀಚರುಗಳಿವೆ. ನಾಲ್ಕು ಸೀಟಿನ ಈ ಸ್ಪೋರ್ಟ್ಸ್ ಹ್ಯಾಚ್ ಬ್ಯಾಕ್ ಕಾರು ಆರಾಮದಾಯಕ ಸವಾರಿಗೂ ಪೂರಕ. ಬನ್ನಿ ಆ ಕಾರಿನ ಸಂಪೂರ್ಣ ವಿಮರ್ಶೆ ಓದೋಣ.
ಎಂಜಿನ್. ಟೆಕ್ ಮಾಹಿತಿ ಮತ್ತು ಕಾರ್ಯಕ್ಷಮತೆ
ಫಿಯೆಟ್ 500 ಹ್ಯಾಚ್ ಬ್ಯಾಕ್ ಕಾರು 1.3 ಲೀಟರಿನ ನಾಲ್ಕು ಸಿಲಿಂಡರ್ ಟರ್ಬೊ ಎಂಜಿನ್ ಹೊಂದಿದೆ. ಇದು ಡೀಸೆಲ್ ಆವೃತ್ತಿ. ಫಿಯೆಟ್ 500 ಕಾರು 475 ಹಾರ್ಸ್ ಪವರ್ 145 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರು ಮುಂಭಾಗದಲ್ಲಿ ಮೆಕ್ ಪೆರ್ಷನ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಟೊರಿಷನ್ ಬೀಮ್ ಸಸ್ಪೆನ್ಷನ್ ಹೊಂದಿದೆ.
ಇದರ ಪಿಕಪ್ ಮತ್ತು ಆಕ್ಸಿಲರೇಷನ್ ಅತ್ಯುತ್ತಮವಾಗಿದೆ. ಇದು 16 ಕವಾಟದ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು, 13 ಸೆಕೆಂಡ್ ನಲ್ಲಿ 0-100 kmph ವೇಗ ಪಡೆದುಕೊಳ್ಳಬಹುದು. ಈ ಕಾರಿನ ಗರಿಷ್ಠ ವೇಗ 163 ಕಿ.ಮೀ. ಇದು ಫ್ರಂಟ್ ವೀಲ್ ಡ್ರೈವ್ ಕಾರು. ಈ ಕಾರು ಐದು ಸ್ಪೀಡಿನ ಮ್ಯಾನುಯಲ್ ಟ್ರಾನ್ಷ್ ಮಿಷನ್ ಹೊಂದಿದೆ.


Click it and Unblock the Notifications








