ಪುಟ್ಟ ಕಾರಿಗೆ ಇಷ್ಟು ದರವೆಂದು ಬೆಚ್ಚಿಬೀಳದಿರಿ

ಮೈಲೇಜ್: ಫಿಯೆಟ್ 500 ಕಾರಿನ ಎಂಜಿನ್ ಟಾಟಾ ಇಂಡಿಕಾ, ಟಾಟಾ ಮಾಂಝಾ ಮುಂತಾದ ಕಾರುಗಳಲ್ಲಿರುವ ಎಂಜಿನ್ ಹೊಂದಿದೆ. ಹೀಗಾಗಿ ಫಿಯೆಟ್ 500 ಕೂಡ ಅತ್ಯುತ್ತಮ ಮೈಲೇಜ್ ನೀಡುವ ಕಾರಾಗಿದೆ. ಇದು ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಡೀಸೆಲಿಗೆ 15 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಪ್ರತಿಲೀಟರಿಗೆ 22 ಕಿ.ಮೀ. ಮೈಲೇಜ್ ನೀಡುತ್ತದೆ.
ದರ: ಫಿಯೆಟ್ 500 ದರ ಮಾತ್ರ ದೇಶದ ಗ್ರಾಹಕರಿಗೆ ಇಷ್ಟವಾಗುವಂತ್ತಿಲ್ಲ. ಇದನ್ನು ಶ್ರೀಮಂತರು ಮಾತ್ರ ಖರೀದಿಸಬಹುದು. ಈ ಕಾರಿನ ಎಕ್ಸ್ ಶೋರೂಂ ದರವೇ 14 ಲಕ್ಷ ರು.ನಿಂದ 15.5 ಲಕ್ಷ ರುಪಾಯಿವರೆಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಕಾರು ಪುಟ್ಟ ಗಾತ್ರದ ದುಬಾರಿ ಕಾರು. ಈ ಕಾರಲ್ಲಿ ಆಟೋಮ್ಯಾಟಿಕ್ ಗೇರ್ ಕೂಡ ಇಲ್ಲ. ಪುಟ್ಟ ಐಷಾರಾಮಿ ಕಾರು ಬಯಸುವರು ಇದನ್ನು ಖರೀದಿಸಬಹುದು.


Click it and Unblock the Notifications








