ದಟ್ಸನ್ ಗೊ - ನಿಮಗೆ ಗೊತ್ತಿರದ ಅಂಶಗಳು
ಇದೀಗಷ್ಟೇ ಭರ್ಜರಿ ಲಾಂಚ್ ಕಂಡಿರುವ ದಟ್ಸನ್ ಗೊ, ದೇಶದ ನೈಜ ರಸ್ತೆ ಪರಿಸ್ಥಿತಿಯಲ್ಲಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ. ಇದಕ್ಕೂ ಮೊದಲು ಕಂಪನಿಯ ನೀಡಿರುವ ಮುಖ್ಯಾಂಶಗಳ ಕುರಿತು ಅವಲೋಕಿಸುವುದು ಉತ್ತಮ.
ದಟ್ಸನ್ ಗೊ ಬಜೆಟ್ ಕಾರು ಲಾಂಚ್
ನಿಸ್ಸಾನ್ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್, ಗೊ ಹ್ಯಾಚ್‌ಬ್ಯಾಕ್ ಸಣ್ಣ ಕಾರನ್ನು ಭಾರತೀಯ ಮಾರುಕಟ್ಟೆಗೆ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಿದೆ. ಇದು ಖಂಡಿತವಾಗಿಯೂ ಆಲ್ಟೊ ಕೆ10 ಹಾಗೂ ಹ್ಯುಂಡೈ ಇಯಾನ್ ಕಾರುಗಳಿಗೆ ಸವಾಲಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಬನ್ನಿ ಅಷ್ಟಕ್ಕೂ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿನಲ್ಲಿರುವ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣವೇ...

ವೆರಿಯಂಟ್ ವಿವರ
ಡಿ
- ದೆಹಲಿ ಎಕ್ಸ್ ಶೋ ರೂಂ ದರ - 3.12 ಲಕ್ಷ ರು.
- ಎಂಜಿನ್: 1.2 ಲೀಟರ್ ಪೆಟ್ರೋಲ್, 68 ಪಿಎಸ್
- 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್
- ಮೈಲೇಜ್: ಲೀಟರ್‌ಗೆ 20.63 ಕೀ.ಮೀ.
- ಡ್ರೈವ್ ಕಂಪ್ಯೂಟರ್,
- ಡಿಜಿಟಲ್ ಟ್ಯಾಕೋಮೀಟರ್,
- ಸರಾಸರಿ ಇಂಧನ ಬಳಕೆ,
- ಡಿಸ್ಟಾನ್ಸ್ ಟು ಎಮ್ಟಿ,
- ಇಂಟಲಿಜೆಟ್ ವೈಪರ್, ಡ್ರಾಪ್ ವೈಪ್ ಫಂಕ್ಷನ್ ,
- ಫಾಲೋ ಮೀ ಹೋಮ್ ಹೆಡ್‌ಲ್ಯಾಂಪ್,
- ಫ್ರಂಟ್ ಕನೆಕ್ಟಡ್ ಸೀಟ್,
- ಫ್ಯಾಬ್ರಿಕ್ ಸೀಟ್,
- ಹೀಟರ್
- ದೆಹಲಿ ಎಕ್ಸ್ ಶೋ ರೂಂ ದರ - 3.14 ಲಕ್ಷ ರು.
- ಎಂಜಿನ್: 1.2 ಲೀಟರ್ ಪೆಟ್ರೋಲ್, 68 ಪಿಎಸ್
- 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್
- ಮೈಲೇಜ್: ಲೀಟರ್‌ಗೆ 20.63 ಕೀ.ಮೀ.
- ಡಿ ವೆರಿಯಂಟ್ ವೈಶಿಷ್ಟ್ಯ ಜತೆಗೆ
- ಪ್ಯಾಸೆಂಜರ್ ಸೈಡ್ ಔಟ್‌ಸೈಡ್ ರಿಯರ್ ವ್ಯೂ ಮಿರರ್,
- ಫ್ರಂಟ್ ಡೋರ್ ಮ್ಯಾಪ್ ಪ್ಯಾಕೆಟ್,
- ಫ್ರಂಟ್ ಡೋರ್ ಬಾಟಲ್ ಹೋಲ್ಡರ್ (1.5 ಲೀಟರ್)
- ದೆಹಲಿ ಎಕ್ಸ್ ಶೋ ರೂಂ ದರ - 3.46 ಲಕ್ಷ ರು.
- ಎಂಜಿನ್: 1.2 ಲೀಟರ್ ಪೆಟ್ರೋಲ್, 68 ಪಿಎಸ್
- 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್
- ಮೈಲೇಜ್: ಲೀಟರ್‌ಗೆ 20.63 ಕೀ.ಮೀ.
- ಡಿ1 ಗ್ರೇಡ್ ಫೀಚರ್ಸ್ ಜತೆಗೆ
- ಎಸಿ, ಫಿಲ್ಟರ್,
- ಜಾಕ್ವಾಡ್ ಸೀಟ್ ಫ್ಯಾಬ್ರಿಕ್,
- ದೇಹ ಬಣ್ಣದ ಬಂಪರ್,
- ಕ್ರೋಮ್ ಫ್ರೇಮ್ ರೇಡಿಯೇಟರ್ ಗ್ರಿಲ್
- ದೆಹಲಿ ಎಕ್ಸ್ ಶೋ ರೂಂ ದರ - 3.69 ಲಕ್ಷ ರು.
- ಎಂಜಿನ್: 1.2 ಲೀಟರ್ ಪೆಟ್ರೋಲ್, 68 ಪಿಎಸ್
- 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್
- ಮೈಲೇಜ್: ಲೀಟರ್‌ಗೆ 20.63 ಕೀ.ಮೀ.
- ಎ ವೆರಿಯಂಟ್ ಫೀಚರ್ಸ್ ಜತೆಗೆ
- ಮೊಬೈಲ್ ಡಾಕಿಂಗ್ ಸ್ಟೇಷನ್ (ಯುಎಸ್‌ಬಿ+ಆಕ್ಸ್ ಇನ್)
- ಸ್ಪೀಡ್ ಸೆನ್ಸಿಟಿವ್ ಪವರ್ ಸ್ಟೀರಿಂಗ್,
- ಪವರ್ ವಿಂಡೋ (ಫ್ರಂಟ್),
- ಸೆಂಟ್ರಲ್ ಲಾಕಿಂಗ್,
- ಫ್ರಂಟ್ ಸ್ಪೀಕರ್,
- ಸಂಪೂರ್ಣ ವೀಲ್ ಕವರ್
- ದೇಹ ಬಣ್ಣದ ಡೋರ್ ಹ್ಯಾಂಡಲ್
- ಉದ್ದ - 3785 ಎಂಎಂ
- ಅಗಲ - 1635 ಎಂಎಂ
- ಎತ್ತರ - 1485 ಎಂಎಂ
- ವೀಲ್ ಬೇಸ್ - 2450 ಎಂಎಂ
ವೈಶಿಷ್ಟ್ಯ

ಡಿ1
ವೈಶಿಷ್ಟ್ಯ

ಎ
ವೈಶಿಷ್ಟ್ಯಗಳು

ಟಿ
ವೈಶಿಷ್ಟ್ಯಗಳು

ಆಧುನಿಕ ವಿನ್ಯಾಸ
ನಿಜವಾಗ್ಲೂ ನಿಮ್ಮನ್ನು ಪ್ರತಿಬಿಂಬಿಸುವ ಕಾರನ್ನು ಚಾಲನೆ ಮಾಡುವ ಸಮಯ ಬಂದಿದೆ. ಎಲ್ಲ ಹೊಸತನದಿಂದ ಕೂಡಿದ ಕಾರೊಂದು ನಿಮ್ಮ ಬಯಕೆಗಳನ್ನು ಈಡೇರಿಸಲಿದೆ. ಇಲ್ಲಿ ವಿಶಿಷ್ಟವಾದ ಫ್ರಂಟ್ ಗ್ರಿಲ್‌ನಿಂದ ಆರಂಭಿಸಿ ಅಥ್ಲೇಟಿಕ್ ರಿಯರ್ ಶೋಲ್ಡರ್ ವರೆಗೆ ದಟ್ಸನ್ ಗೊ ಆಧುನಿಕ ವಿನ್ಯಾಸ ಹೊಂದಿದೆ.

ದಟ್ಸನ್ ಗ್ರಿಲ್
ಇದು ನಿಮಗೆ ಇಷ್ಟವಾಗುವ ಮುಖ ಕವಚವಾಗಿದೆ. ಇದರಲ್ಲಿ ದಟ್ಸನ್ ಪ್ರತಿಬಿಂಬಿಸುವ ಲೊಗೊ ಅಡಗಿದೆ.

ಪ್ಯಾಕೇಜ್
ನಿಮ್ಮೆಲ್ಲ ಕನಸುಗಳನ್ನು ಡಟ್ಸನ್ ನನಸಾಗಿಸಲಿದೆ ಎಂಬುದು ಸಂಸ್ಥೆಯ ವಾದವಾಗಿದೆ. ಪ್ರಭಾವತ್ಮಾಕ ವೇಗತೆಯಿಂದ ಆರಂಭಿಸಿ, ಇಂಧನ ಕ್ಷಮತೆ, ಹೆಚ್ಚು ಸ್ಥಳಾವಕಾಶ ಹೊಂದಿರುವ ಇಂಟಿರಿಯರ್ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಪ್ರವಾಸವನ್ನು ಇನ್ನಷ್ಟು ಆನಂದದಾಯಕವಾಗಿಸಲಿದೆ.

ಆಯಾಮ
ಯುರೋ ಶೈಲಿಯ ರೂಫ್ ಲೈನ್ ಹಾಗೂ ವಿಶಾಲವಾದ ವಿನ್ಯಾಸ ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತದೆ.

ವಿಶಾಲವಾದ ಆಂತರಿಕ ಭಾಗ
ದಟ್ಸನ್ ಗೊ ತನ್ನ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಕ್ಯಾಬಿನ್ ಪ್ರದೇಶವನ್ನು ಪಡೆದುಕೊಂಡಿದೆ. ಇದು ಹಿಂದುಗಡೆ ಪ್ರಯಾಣಿಕರಿಗೂ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ. ಇದು ಹೆಚ್ಚು ಹೆಡ್ ರೂಂ, ಲೆಗ್ ರೂಂ ಪಡೆದುಕೊಂಡಿರುವುದಾಗಿ ಸಂಸ್ಥೆ ತಿಳಿಸುತ್ತದೆ.

ನಿಶ್ಶಬ್ಧ ಕ್ಯಾಬಿನ್
ಕಾರಿನೊಳಗೆ ಹೊರಗಡೆಯ ಗಾಳಿಯ ಶಬ್ದ ಕಡಿಮೆ ಮಾಡುವುದರತ್ತ ಗಮನ ಕೊಡಲಾಗಿದ್ದು, ನಿಮ್ಮ ಸಂಭಾಷನೆ ಹಾಗೂ ಸಂಗೀತವನ್ನು ಇನ್ನಷ್ಟು ಆನಂದದಾಯಕವಾಗಿ ಆಲಿಸಬಹುದಾಗಿದೆ.

ಉನ್ನತ ತಂತ್ರಜ್ಞಾನ
ಕೇವಲ ಆಧುನಿಕ ಮಾತ್ರವಲ್ಲ. ಗರಿಷ್ಠ ತಂತ್ರಗಾರಿಕೆಗಳನ್ನು ಆಳವಡಿಸುವುದರತ್ತವೂ ದಟ್ಸನ್ ಗಮನ ಕೇಂದ್ರಿಕರಿಸಿದೆ.

ಕಡಿಮೆ ಆಯಾಸದ ಸೀಟು
ಸಾಮಾನ್ಯ ಸೀಟುಗಿಂತ ಭಿನ್ನವಾಗಿ ದಟ್ಸನ್ ಸೀಟುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ದೂರ ಪ್ರಯಾಣದಲ್ಲೂ ಕಡಿಮೆ ಆಯಾಸದಾಯಕವಾಗಲಿದೆ ಎಂದಿದೆ.

ನಿಮಗಾಗಿ
ಯಾವಾಗ ನಿಮ್ಮ ಕಾರು ಮನೆಯಿಂದ ಹೊರಗಿನ ಮನೆ ಅನಿಸುತ್ತದೆ? ದಟ್ಸನ್‌ನಲ್ಲಿ ಮಾತ್ರ ನಿಮ್ಮ ವೈಯಕ್ತಿಕ ಪಯಣವನ್ನು ಆರಾಮದಾಯಕವಾಗಿಸಲಿದೆ.

ಮೊಬೈಲ್ ಡಾಕಿಂಗ್ ಸ್ಟೇಷನ್ ಜತೆ ಯುಎಸ್‌ಬಿ ಚಾರ್ಚಿಂಗ್

ಫ್ರಂಟ್ ಕನೆಕ್ಟಡ್ ಸೀಟು
ಮುಂಭಾಗದಲ್ಲೂ ಹೆಚ್ಚಿನ ಸ್ಥಳಾವಕಾಶ ನೀಡುವ ನಿಟ್ಟಿನಲ್ಲಿ ಫ್ರಂಟ್ ಕನೆಕ್ಟಡ್ ಸೀಟು ಆಳವಡಿಸಲಾಗಿದೆ. ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಗೇರ್ ನಾಬ್, ಡ್ಯಾಶ್ ಬೋರ್ಡ್ ಕೆಳಮುಖವಾಗಿ ಲಗತ್ತಿಸಲಾಗಿದೆ.

ದಟ್ಸನ್ ಗೊ ಇಂಟಿರಿಯರ್


Click it and Unblock the Notifications








