ಹ್ಯುಂಡೈ ಫ್ಲೂಡಿಕ್ ಐ-ಜೆನ್ ಐ20: ಸಂಪೂರ್ಣ ವಿಮರ್ಶೆ

New Fluidic i20 Review
ಹ್ಯಾಚ್ ಬ್ಯಾಕ್ ವಿಭಾಗಕ್ಕೆ ಹ್ಯುಂಡೈ ಕಂಪನಿಯ ನೂತನ ಐ-ಜೆನ್ ಐ20(ಫ್ಲೂಡಿಕ್) ಆಗಮಿಸಿದೆ. ಇದು ಹಳೆಯ ಆವೃತ್ತಿಗಿಂತ ಇನ್ನಷ್ಟು ವಿಶೇಷತೆ ಮತ್ತು ಆಕರ್ಷಣೆಗಳನ್ನು ಒಡಲಲ್ಲಿಟ್ಟುಕೊಂಡು ಬಂದಿದೆ. ಇದರ ಫ್ಲೂಡಿಕ್ ವಿನ್ಯಾಸವೇ ಕಣ್ಮನ ಸೆಳೆಯುವ ಪ್ರಮುಖ ಆಕರ್ಷಣೆ. ಎ-2 ಸೆಗ್ಮೆಂಟಿಗೆ ಬಂದ ನೂತನ ಫ್ಲೂಡಿಕ್ ಐ20 ಕಾರಿನ ವಿಮರ್ಶೆ ಇಲ್ಲಿದೆ ಓದಿ.

ಗುಣಮಟ್ಟದ ಫೀಚರುಗಳಲ್ಲಿ ಯಾವುದೇ ರಾಜಿಮಾಡದೇ ನೂತನ ವಿನ್ಯಾಸದ ಐ20 ರಸ್ತೆಗಿಳಿದಿದೆ. ದೊಡ್ಡದಾದ ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್ ಗಮನ ಸೆಳೆಯುತ್ತವೆ. ಸ್ಮಾರ್ಟ್ ಕೀ ಮೂಲಕ ಸ್ಟಾರ್ಟ್ ಮತ್ತು ಸ್ಟಾಪ್ ಆಯ್ಕೆ, ಚರ್ಮದ ಹಾಸು ಹಾಸಿರುವ ಸ್ಟಿಯರಿಂಗ್ ವೀಲ್ ಮತ್ತು ಗೇರ್ ಶಿಫ್ಟ್ ನಾಬ್, ಎಲೆಕ್ಟ್ರಿಕ್ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೊರಭಾಗದ ಮಿರರ್ ಇತ್ಯಾದಿಗಳು ನೂತನ ಕಾರಿನಲ್ಲಿರುವ ಪ್ರಮುಖ ವಿಶೇಷತೆ.

ಐ20 ಕಾರಿನ ನೂತನ ವಿನ್ಯಾಸವು ಆಕರ್ಷಕವಾಗಿದೆ. ಅಂದರೆ ಕಾರಿನ ಮುಂಭಾಗ ಮತ್ತು ಹಿಂಭಾಗ ಫ್ಲೂಡಿಕ್ ವಿನ್ಯಾಸದಿಂದ ಹೆಚ್ಚು ಗಮನಸೆಳೆಯುತ್ತದೆ. ಇಂಟಿರಿಯರ್ ಆಡಿಯೋ ಸಿಸ್ಟಮ್ ಮತ್ತು ಡ್ಯಾಷ್ ಬೋರ್ಡ್ ಹೊಸ ಬಣ್ಣಗಳಿಂದ ಮಿಂಚುತ್ತಿದೆ. ಹಳೆಯ ಫೀಚರುಗಳು ಹಾಗೆ ಇವೆ.

ನೂತನ ಐಜೆನ್ ಫ್ಲೂಡಿಕ್ ಐ20 1.2 ಲೀಟರಿನ 84 ಹಾರ್ಸ್ ಪವರಿನ ಪೆಟ್ರೋಲ್ ಎಂಜಿನ್ ಮತ್ತು 1.4 ಲೀಟರಿನ 80 ಹಾರ್ಸ್ ಪವರಿನ ಪೆಟ್ರೋಲ್ ಎಂಜಿನ್ ಮತ್ತು 90 ಹಾರ್ಸ್ ಪವರಿನ 1.4 ಲೀಟರಿನ ಕಾಮನ್ ರೈಲ್ ಟರ್ಬೊ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಹೈಟೆಕ್ ಐ20 ಕಾರು 1.4 ಲೀಟರ್ ಯು2 ಸಿಆರ್ ಡಿಐ ಡೀಸೆಲ್ ಎಂಜಿನ್ ಮತ್ತು ಆರು ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಪೆಟ್ರೋಲ್ ಎಂಜಿನ್ ದಕ್ಷತೆ ಹೆಚ್ಚಿಸಲು ಸೂಕ್ತ ಕವಾಟಗಳನ್ನು ಅಳವಡಿಸಲಾಗಿದೆ. ಐ20 ಪೆಟ್ರೋಲ್ ಆವೃತ್ತಿಯಲ್ಲೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಮಾಡಿಕೊಳ್ಳಬಹುದು.

ಹೆಚ್ಚುವರಿ ಫೀಚರುಗಳು: ಕ್ಯಾಬಿನ್ ಮಿರರಿನಲ್ಲಿ ರಿವರ್ಸ್ ಕ್ಯಾಮರಾ, ಆಟೋ ಹೆಡ್ ಲೈಟ್, ಆರು ಏರ್ ಬ್ಯಾಗ್, ಫೋರ್ ವೀಲ್ ಡಿಸ್ಕ್ ಬ್ರೇಕ್, ರೈನ್ ಸೆನ್ಸಿಂಗ್ ವೈಪರ್, ಸ್ಮಾರ್ಟ್ ಕೀಲಿಕೈ(ಸ್ಟಾರ್ಟ್ ಸ್ಟಾಪ್ ಬಟನ್), ಗೇರ್ ನಾಬ್, ವಿದ್ಯುತ್ ಚಾಲೀತ ಮಿರರುಗಳು, ಟೆಲಿಸ್ಕೋಪಿಕ್ ಸ್ಟಿಯರಿಂಗ್ ವೀಲ್, 2ಡಿನ್ ಸಿಡಿ/ಎಂಪಿ3 ಆಡಿಯೋ ಸಿಸ್ಟಮ್(ನಾಲ್ಕು ಸ್ಪೀಕರು), ಯುಎಸ್ ಬಿ, ಆಕ್ಸ್ ಇನ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಇತ್ಯಾದಿ ಪ್ರಮುಖ ಫೀಚರುಗಳಿವೆ. ಸ್ಟಿಯರಿಂಗ್ ವೀಲ್ ನಲ್ಲೇ ಆಡಿಯೋ ಕಂಟ್ರೋಲ್ ಇದೆ.

More from DriveSpark

Article Published On: Friday, March 30, 2012, 10:20 [IST]
English summary
New Fluidic i20; Features, Specs, Price In Detail. The fluidic i20 is available with a 1.2litre 84bhp kappa petrol engine, a 1.4-litre 80bhp petrol engine and a 90bhp 1.4-litre common rail turbo diesel engine. The advanced and hi-tech 1.4 U2 CRDi diesel comes with 6-speed manual transmission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+