ಸ್ಕೋಡಾ ಕಾರು ಕಂಪನಿಯ ಹೊಸ ಯೋಜನೆಗಳು

ಮಾರಾಟದ ಭರಾಟೆಯಿಂದ ಮತ್ತಷ್ಟು ಉತ್ತೇಜನಗೊಂಡಿರುವ ಸ್ಕೋಡಾ ಕಾರು ತಯಾರಿಕಾ ಕಂಪನಿ ಫೇಬಿಯಾ ಮಾಡೆಲ್‌ನಲ್ಲಿ ಇನ್ನೂ ಮೂರು ಮಾಡೆಲ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ. ಅಧಿಕ ಪವರ್ ಇಷ್ಟಪಡುವವರಿಗೆ ಫೇಬಿಯಾ ಸ್ಪೋರ್ಟ್ಸ್ ಮಾಡೆಲ್ ಸ್ಪೋರ್ಟ್‌ಲೈನ್ ವರದಾನವಾಗಿ ಬರಲಿದೆ. ಫೇಬಿಯಾ ಕೊಂಬಿ ಸಹ ಭಾರತಕ್ಕೆ ಬರಲಿದೆ.
ಸ್ಕೋಡಾ ತರುತ್ತಿರುವ ವೈವಿಧ್ಯಮಯ ಕಾರು ಮಾಡೆಲ್ ಗಳು ಸಹಜವಾಗಿಯೇ ಸ್ಕೋಡಾ ಕಾರುಗಳನ್ನು ಫೆವರಿಟ್ ಅನ್ನಾಗಿ ಮಾಡಿವೆ. ಇನ್ನೊಂದು ಹೊಸ ಮಾದರಿ ಫೇಬಿಯಾ ಲಾರಾ ಯಾವುದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇವುಗಳೊಂದಿಗೆ ಯೇಟಿ ಎಂಬ ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ಭಾರತಕ್ಕೆ ತರುವ ಬಗ್ಗೆ ಮಾತುಕತೆಗಳು ನಡೆದಿವೆ.


Click it and Unblock the Notifications








