ಟಾಟಾ ನ್ಯಾನೊ ಕಾರು ಬೆಲೆ ಏರಿಕೆ ಸದ್ಯಕ್ಕಿಲ್ಲ

By

TATA Motors MD Prakash M Telang
ನವದೆಹಲಿ, ಡಿ.28: ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆಯಾಗಿದೆಯಾದರೂ ಈಗಾಗಲೇ ಬುಕಿಂಗ್ ಆಗಿರುವ ನ್ಯಾನೊ ಕಾರುಗಳನ್ನು ಪ್ರಸಕ್ತ ಬೆಲೆಗಳಲ್ಲಿಯೇ ವಿತರಿಸಲಾಗುವುದು ಎಂದು ಟಾಟಾ ಮೋಟರ್ಸ್ ಭರವಸೆ ನೀಡಿದೆ. ಆದರೆ, ಹಾಲಿಯಿರುವ ಬುಕಿಂಗ್ ಗಳನ್ನು ಈಗಾಗಲೇ ಒಪ್ಪಿ ಕೊಂಡಿರುವ ಬೆಲೆಯಲ್ಲೇ ನೀಡಲು ಕಂಪೆನಿ ಮುಂದಾಗಿದ್ದರೂ, ಕಾರು ಡೆಲಿವರಿ ವಿಳಂಬದಿಂದ ಅನೇಕ ಗ್ರಾಹಕರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಯನ್ನು ಟಾಟಾ ಮೋಟಾರ್ಸ್ ಆಡಳಿತ ನಿರ್ದೇಶಕ ಪ್ರಕಾಶ್ ಎಂ. ತೇಲಂಗ್ ಅವರು ತಳ್ಳಿಹಾಕಿದರು.

ಆದರೂ, ಕಂಪೆನಿಯು ತನ್ನ ಇತರ ಮಾದರಿಗಳ ಬೆಲೆಗಳನ್ನೂ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಿದೆಯೇ ಎಂಬ ಪ್ರಶ್ನೆಗೆ ತೇಲಂಗ್ ಯಾವುದೇ ಬದ್ಧತೆಯನ್ನುವ್ಯಕ್ತಪಡಿಸಲಿಲ್ಲ. ಉಕ್ಕು ಮತ್ತು ಟಯರ್ ಬೆಲೆಗಳು ಏರುತ್ತಲೇ ಇದ್ದು, ಎಲ್ಲ ತಯಾರಕರೂ ಆ ಬಗ್ಗೆ ಯೋಚಿಸಬೇಕಾಗಿದೆ. ನಾವು ಪರಿಸ್ಥಿತಿಯ ಮೇಲೆ ನಿಗಾಯಿರಿಸಿದ್ದೇವೆ. ಆ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಕಠಿಣವಾಗುತ್ತದೆ ಎಂದರು.

ಅಗ್ಗದ ಕಾರು -ಗ್ರಾಹಕರು ಮುನಿಸು
ನ್ಯಾನೋ ಅಗ್ಗದ ಕಾರು ಮಾಲೀಕರಾಗಲು ಬುಕ್ಕಿಂಗ್ ಮಾಡಿದ್ದ 2.07 ಲಕ್ಷ ಗ್ರಾಹಕರಲ್ಲಿ ಶೇ. 15 ರಷ್ಟು ಮಂದಿ ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಸರಿಯಾದ ಸಮಯಕ್ಕೆ ಕಾರು ಮನೆಗೆ ತಲುಪದಿರುವುದು ಗ್ರಾಹಕರ ಮುನಿಸಿಗೆ ಕಾರಣ ಎನ್ನಲಾಗಿದೆ. "ಸಣ್ಣ ಕಾರು ಮಾರುಕಟ್ಟೆ ವಿಸ್ತಾರಗೊಂಡಿದ್ದು, ನೂತನ ಕಾರುಗಳು ಪ್ರವೇಶಿಸುತ್ತಿರುವುದರಿಂದ ನ್ಯಾನೋ ಕಾರಿಗಾಗಿ ಕಾದು ಕೂರಲು ಗ್ರಾಹಕರು ತಯಾರಿಲ್ಲ.ಮಾರ್ಚ್ ವೇಳೆಗೆ ಮನೆ ಮುಂದೆ ನ್ಯಾನೋ ಕಾರು ನಿಲ್ಲಿಸುವ ಕನಸು ಕಂಡಿದ್ದ ಗ್ರಾಹಕರು, ಈಗ ಬೇರೆ ಕಾರುಗಳತ್ತ ಗಮನ ಹರಿಸುತ್ತಿದ್ದಾರೆ" ಎಂದು ದೆಹಲಿಯ ಹೆಸರಾಂತ ಆಟೋ ಶೋರೂಂ ರಘುವಂಶಿ ಎಂಟರ್ ಪ್ರೈಸಸ್ ನ ಮಾಲೀಕ ಕೃಷ್ಣನ್ ಬನ್ಸಾಲ್ ಹೇಳಿದ್ದಾರೆ.

ಮಾರ್ಚ್ 2010ರೊಳಗೆ ಲಕ್ಷಕಾರು ವಿತರಣೆ?
ಟಾಟಾ ಕಂಪೆನಿಯು ಜೂನ್‌ನಲ್ಲಿ ವಿಶ್ವದ ಅತ್ಯಂತ ಅಗ್ಗದ ಕಾರು ಎಂದು ಬಿಂಬಿಸಲ್ಪಟ್ಟಿರುವ ನ್ಯಾನೊ ಕಾರು ಖರೀದಿಸಲು ಬಯಸಿ ಸಲ್ಲಿಕೆಯಾಗಿದ್ದ ಒಟ್ಟು 2.07 ಲಕ್ಷ ಅಂತಿಮ ಅರ್ಜಿಗಳ ಪೈಕಿ 1.55 ಲಕ್ಷ ಖರೀದಿದಾರರನ್ನು ಆಯ್ಕೆ ಮಾಡಿತ್ತು. 2010 ಮಾರ್ಚ್‌ನೊಳಗೆ ಅದು ಮೊದಲ ಒಂದು ಲಕ್ಷ ಕಾರುಗಳನ್ನು ವಿತರಿಸಲಿದೆ. ಉಳಿದ 55,021 ಕಾರುಗಳನ್ನು ಮುಂದಿನ ಹಂತದಲ್ಲಿ ಪೂರೈಸಲಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ವಾಹನ ತಯಾರಿಕೆ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಮೋಟಾರ್ಸ್ ನವೆಂಬರ್‌ವರೆಗೆ 13,924 ನ್ಯಾನೊ ಕಾರುಗಳನ್ನು ವಿತರಿಸಿದೆ.

ಮೊದಲ ಒಂದು ಲಕ್ಷ ನ್ಯಾನೊ ಮಾಲಕರಿಗೆ ಎಕ್ಸ್-ಶೋರೂಮ್ ಬೆಲೆಗಳಲ್ಲಿ ಯಾವುದೇ ಏರಿಕೆಯಾಗದು ಎಂದು ಟಾಟಾ ಮೋಟಾರ್ಸ್ ಪ್ರಕಟಿಸಿತ್ತು. ನ್ಯಾನೋ ಮೂರು ಮಾದರಿಗಳಲ್ಲಿ 1.23ಲಕ್ಷ ರು.ಗಳಿಂದ 1.79 ಲಕ್ಷ.ರು. (ಎಕ್ಸ್ ಶೋ ರೂಮ್, ದಿಲ್ಲಿ ) ಬೆಲೆಗಳಲ್ಲಿ ಲಭ್ಯವಿದೆ. ವಿತರಣೆಯ ಮುಂದಿನ ಹಂತ ತಲುಪಿದಾಗಷ್ಟೇ ನಾವು ಬೆಲೆ ಏರಿಕೆಯ ಬಗ್ಗೆ ಮಾತನಾಡುತ್ತೇವೆ. ಸದ್ಯ ಉತ್ಪಾದನೆಯನ್ನು ಹೆಚ್ಚಿಸುವತ್ತ ನಮ್ಮ ಗಮನ ಕೇಂದ್ರಿತವಾಗಿದೆ ಎಂದು ತೇಲಂಗ್ ಹೇಳಿದರು.

ಕಂಪೆನಿಯು ಪ್ರಸಕ್ತ ಉತ್ತರಾಂಚಲದ ಪಂತ ನಗರದಲ್ಲಿರುವ ತನ್ನ ವಾರ್ಷಿಕ 50,000 ಕಾರು ಉತ್ಪಾದನಾ ಸಾಮರ್ಥ್ಯದ ಕಾರ್ಖಾನೆಯಿಂದ ನ್ಯಾನೊಗಳನ್ನು ಹೊರತರುತ್ತಿದೆ. ಗುಜರಾತ್‌ನ ಸಾನಂದ್‌ನಲ್ಲಿ ತಲೆ ಎತ್ತುತ್ತಿರುವ ಕಂಪೆನಿಯ ನೂತನ ಘಟಕವು ಮುಂದಿನ ವರ್ಷದ ವೇಳೆಗೆ ಉತ್ಪಾದನೆ ಆರಂಭಿಸಲಿದೆ. ಸಾನಂದ್ ಘಟಕ ಆರಂಭಿಕ ಹಂತದಲ್ಲಿ ವಾರ್ಷಿಕ 3.5 ಲಕ್ಷ ಕಾರು ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ.

More from DriveSpark

Article Published On: Monday, December 28, 2009, 16:14 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+