ನವೀಕೃತ ಮಾರುತಿ ಆಲ್ಟೋ ಕಾರು2ಲಕ್ಷ ರು

ಸುಮಾರು 2 ಲಕ್ಷ ರುಗಳಿಗೆ ನವೀಕೃತ ಮಾರುತಿ ಆಲ್ಟೋ ಸಿಗುತ್ತದೆ ಎಂದಾದರೆ, ಗ್ರಾಹಕರು ಸಹಜವಾಗಿ ಮಾರುತಿಯತ್ತ ತಿರುಗುತ್ತಾರೆ. ಈ ಮೂಲಕ ಟಾಟಾ ನ್ಯಾನೋ(ಈಗಿನ ಬೆಲೆ ಸುಮಾರು 1.5 ಲಕ್ಷ ರು) ಗೆ ಕೂಡ ಮಾರುತಿ ಸವಾಲು ಹಾಕಿದೆ. ಹಾಗೂ ಮುಂಬರುವ ಕಡಿಮೆ ಬೆಲೆ ಕಾರುಗಳಿಗೂ ನಡುಕ ಹುಟ್ಟಿಸಿದೆ. ನಿಸ್ಸಾನ್ ನ ಮಿಕ್ರಾ, ಹ್ಯುಂಡೈ 800, ಶೆವರ್ಲೆ ಸ್ಪಾರ್ಕ್ . .. ಇತ್ಯಾದಿ ಕಾರುಗಳಿಗೆ ಆಲ್ಟರ್ ನೇಟಿವ್ ಆಗಿ ಆಲ್ಟೋ ನಿಲ್ಲುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಕಡಿಮೆ ಬೆಲೆಯ ಮಾರುತಿ ಆಲ್ಟೋ ಗೆ MPF1 K ಸರಣಿಯ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದ್ದು(A ಸ್ಟಾರ್ ಇಂಜಿನ್ ನಂತೆಯೆ ), BS-IV ವಾಯು ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಹೊಂದಿರುತ್ತದೆ. ವಾಯು ಮಾಲಿನ್ಯ, ಇಂಧನ ಹೊರಸೂಸುವಿಕೆಯ ಬಗ್ಗೆ ಕಾಳಜಿ ವಹಿಸುತ್ತಿರುವ ಮಾರುತಿ ಕಂಪನಿ, ಮಾರುತಿ 800 ರಲ್ಲಿ ಆದ ಲೋಪದೋಷಗಳನ್ನು ತಿದ್ದುವ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ. ಐಷಾರಾಮಿ ಸೀಟುಗಳು, ಬಂಪರ್ ಗಳಿಗೆ ಕೊಕ್ ಕೊಟ್ಟು , ಒಳಾಂಗಣ ವಿನ್ಯಾಸದ ಹೊರೆಯನ್ನು ಗ್ರಾಹಕರ ಹೆಗಲಿಗೆ ಹಾಕಿ, ಬೆಲೆ ಇಳಿಕೆ ಮಾಡಲು ಮಾರುತಿ ಮುಂದಾಗಿದೆ.ಮುಂದೊಂದು ದಿನ ಮಾರುತಿ 800 ಸೃಷ್ಟಿಸಿದ್ದ ಮಧ್ಯಮ ವರ್ಗ ಸ್ನೇಹಿ ಕಾರು ವಾತಾವರಣವನ್ನು ಆಲ್ಟೋ ಕಾರಿನ ಮೂಲಕ ತುಂಬಲು ಮಾರುತಿ ಸುಜುಕಿ ಇಂಡಿಯಾ ಬಯಸಿದೆ.


Click it and Unblock the Notifications








