ಗಿನ್ನೆಸ್ ದಾಖಲೆ ಸೃಷ್ಟಿಸಿದ ಮಾರುತಿ ಸ್ವಿಫ್ಟ್

ಭಾನುವಾರ ಮೇ 30ರಂದು ಗುರ್ ಗಾಂವ್ ನಲ್ಲಿ ನಡೆದ ಪರೇಡಿನಲ್ಲಿ ಮಾರುತಿ ಸ್ವಿಫ್ಟ್ ಕಾರುಗಳ ಸಂತೆ ಜರುಗಿತ್ತು. ಮಾರುತಿ ಸ್ವಿಫ್ಟ್ ಕಾರಿನ ಮಾಲಿಕರು ಅತ್ಯುತ್ಸಾಹದಿಂದ ಈ ಪರೇಡಿನಲ್ಲಿ ಭಾಗವಹಿಸಿದರು. ಗುರ್ ಗಾಂವ್ ಮಾತ್ರವಲ್ಲ ಚೆನ್ನೈ ಮತ್ತು ಮುಂಬೈನಲ್ಲಿಯೂ ಗ್ರಾಹಕರು ಕುಟುಂಬ ಸಮೇತ ಬಂದು ಗಿನ್ನೆಸ್ ದಾಖಲೆ ಸಂಭ್ರದಲ್ಲಿ ಭಾಗವಹಿಸಿದ್ದರು.
ಈ ಗಿನ್ನೆಸ್ ದಾಖಲೆಯ ಯಶಸ್ಸು ಭಾರತದ ಎಲ್ಲಾ 4.5 ಲಕ್ಷ ಮಾರುತಿ ಸ್ವಿಫ್ಟ್ ಕಾರುಗಳ ಮಾಲಿಕರಿಗೆ ಸಲ್ಲುತ್ತದೆ ಎಂದು ಮಾರುತಿ ಸುಜುಕಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ಅಧಿಕಾರಿ ಮಾನ್ಯಕ್ ಪರೀಕ್ ಹೇಳಿದರು.
ಗುರ್ ಗಾಂವ್ ನಲ್ಲಿ ಒಂದು ತಿಂಗಳಲ್ಲಿ 12 ಸಾವಿರ ಸ್ವಿಫ್ಟ್ ಕಾರುಗಳನ್ನು ಮಾರುತಿ ಸುಜುಕಿ ಕಂಪನಿ ತಯಾರಿಸುತ್ತದೆ. 1.2ಲೀ ಪೆಟ್ರೋಲ್ ಮತ್ತು 1.3 ಲೀ ಡೀಸೆಲ್ ಕಾರುಗಳು ಲಭ್ಯವಿವೆ.


Click it and Unblock the Notifications








