ಪ್ರೋಟಾನ್ ಮಾರುಕಟ್ಟೆ ಪ್ರವೇಶಕ್ಕೆ ಸಕಾಲ

ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಅರ್ಗೆಂಟಂ ಮೋಟರ್ಸ್ ಜೊತೆ ದೇವೂ ಮೋಟಾರ್ಸ್ ನ ಸುರಜ್ ಪುರ ಘಟಕದತ್ತ ಕಣ್ಣು ಹಾಯಿಸಿತು. ಆದರೆ, ಅದೂ ಯಾಕೋ ವಿಳಂಬವಾಯಿತು. ಭಾರತದಲ್ಲಿ ಈ ಸದ್ಯಕ್ಕೆ ಸಣ್ಣ ಕಾರುಗಳದ್ದೇ ದರ್ಬಾರು. ಇದನ್ನು ಅರಿತ ಪ್ರೋಟಾನ್ ತ್ವರಿತವಾಗಿ ಮಾರುಕಟ್ಟೆ ಪ್ರವೇಶಕ್ಕೆ ಮುಂದಾಗಿದೆ.
ಮಲೇಷಿಯಾ ಮೂಲದ ಪ್ರೋಟಾನ್ ಕೊನೆ ಪ್ರಯತ್ನ ಎಂಬಂತೆ, ಮಹೀಂದ್ರಾ ಕಚೇರಿಯ ಕದ ತಟ್ಟಿದೆ. ತನ್ನ ಕಾರು ಮಾದರಿಗಳಾದ ಎಕ್ಸೋರಾ, ಸೆವ್ವಿ ಹಾಗೂ ಸಾಗಾ ಗಳನ್ನು ಆದಷ್ಟು ಬೇಗ ಭಾರತದ ರಸ್ತೆಗಿಳಿಸಲು ಕಾತುರವಾಗಿದೆ. ಎಫ್ 1 ನಲ್ಲಿ ಲೋಟಸ್ ಜೊತೆಗೆ ಕೈ ಜೋಡಿಸಿದ್ದ ಪ್ರೋಟಾನ್ ಒಂದಷ್ಟು ಯಶ ಕಂಡಿತ್ತು. ಜಗತ್ತಿನ ಎಲ್ಲಾ ಪ್ರಮುಖ ದೇಶಗಳಿಗೆ ಕಾರು ರಫ್ತು ಮಾಡುವ ಪ್ರೋಟಾನ್, ಭಾರತದಲ್ಲಿ ನೆಲೆಯೂರಲು ಇನ್ನಿಲ್ಲದ ಪ್ರಯತ್ನ ಮುಂದುವರೆಸಿದೆ.


Click it and Unblock the Notifications








