15 ಲಕ್ಷಕ್ಕೆ ಮರ್ಸಿಡಿಸ್ ಕಾರು ನಂಬಿದ್ರೆ ನಂಬಿ!

ಪ್ರತಿದ್ವಂದ್ವಿ ಬಿಎಂ ಡಬ್ಲ್ಯೂ ನ ಸ್ಪರ್ದೆಯನ್ನು ಎದುರಿಸಲು ಹಾಗೂ ದೇಶದಲ್ಲಿ ಕಾರುಗಳ ಮಾರಾಟ ಹೆಚ್ಚಿಸಲು ಬೆಂಜ್ ಕಾರಿನ ಹಣಕಾಸು ವಹಿವಾಟಿಗೂ ಕೈ ಹಾಕಲು ನಿರ್ಧರಿಸಿದೆ. 2009 ರಲ್ಲಿ 35 ದೇಶಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ ಪ್ರವೇಶಿಸಿದ ಬೆಂಜ್ ಭಾರತದ ಗ್ರಾಹಕರ ಬೇಡಿಕೆಯನ್ನು ಸೆಳೆಯಲು ಮುಂದಾಗಿದೆ ಎಂದು ಕಂಪೆನಿಯ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ವಿಲ್ ಫ್ರೆಡ್ ಅಲ್ಬರ್ ಹೇಳಿದ್ದಾರೆ.
ಕಂಪೆನಿ ಮೂಲ ಮಾಡೆಲ್ ನ ಹೊಸ ಕಾರಿನ ಬೆಲೆ 28 ರಿಂದ 30 ಲಕ್ಷ ರೂಪಾಯಿಗಳಾಗಿದ್ದು, 'ಈ' ವರ್ಗ, 'ಎಮ್ 'ವರ್ಗ ಹಾಗೂ 'ಎಸ್ 'ವರ್ಗದ ಕಾರುಗಳ ಬೆಲೆ ಕ್ರಮವಾಗಿ ರೂ 40 ರಿಂದ 90 ಲಕ್ಷ ರೂಪಾಯಿಗಳಾಗಿವೆ. ಈ ಯೋಜನೆಯಲ್ಲಿ ಕಂಪೆನಿ ಆರು ವರ್ಷಗಳಷ್ಟು ಹಳೆಯದಾದ ಕಾರನ್ನು ಮಾತ್ರ ಮಾರಾಟ ಮಾಡಲಿದೆ. ಇದಕ್ಕಾಗಿ ಕಂಪೆನಿ ದೆಹಲಿ, ಮುಂಬೈ, ಅಹ್ಮದಾಬಾದ್ ಹಾಗೂ ಚಂಡಿಘರ್ ನಲ್ಲಿ ಮಾರಾಟಗಾರರನ್ನು ನೇಮಕ ಮಾಡಿಕೊಳ್ಳಲಿದೆ.
2011 ರಲ್ಲಿ ಕಂಪೆನಿಯ ಒಟ್ಟು ಕಾರುಗಳ ಮಾರಾಟದಲ್ಲಿ ಹಳೇ ಕಾರುಗಳ ಮಾರಾಟ ಪ್ರಮಾಣ ಶೇ.10 ರಿಂದ 15 ಆಗಲಿದೆ ಎಂದು ಅವರು ಹೇಳಿದರು . ಈ ವರ್ಷ ಕಂಪೆನಿಯ ಜನವರಿ- ಮೇ ತಿಂಗಳ ಮಾರಾಟದಲ್ಲಿ ಶೇ.59 ಏರಿಕೆ ದಾಖಲಾಗಿದ್ದು ಒಟ್ಟು 2014 ಕಾರುಗಳನ್ನು ಮಾರಾಟ ಮಾಡಿದೆ . ಕಳೆದ ವರ್ಷ ದೇಶದಲ್ಲಿ ಬಿ ಎಮ್ ಡಬ್ಲ್ಯೂ 3619 ಕಾರುಗಳನ್ನು ಮಾರಾಟ ಮಾಡಿದ್ದು ಬೆಂಜ್ 3247 ಕಾರುಗಳನ್ನು ಮಾರಾಟ ಮಾಡಿದೆ .


Click it and Unblock the Notifications








