ಥ್ಯಾಂಕ್ಸ್ ಟು ನ್ಯಾನೋ, ಟಾಟಾ ಮಾರಾಟ ಮೇಲ್ಮುಖ

ಕಂಪೆನಿ ಜುಲೈ ತಿಂಗಳಿನಲ್ಲಿ 27,864 ವಾಹನಗಳನ್ನು ಮಾರಾಟ ಮಾಡಿದ್ದರೆ, 2009ರ ಜುಲೈ ನಲ್ಲಿ 17,191ವಾಹನಗಳನ್ನು ಮಾರಾಟ ಮಾಡಿತ್ತು. ಜುಲೈ ನಲ್ಲಿ 9,000 ನ್ಯಾನೋ,8,606 ಇಂಡಿಕಾ, 7,007 ಇಂಡಿಗೋ ಮತ್ತು 3,251 ಸುಮೋ ಹಾಗೂ ಸಫಾರಿಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ.
ಟಾಟಾದ ಮೂಲಕ ಮಾರಾಟ ಮಾಡಲಾಗುತ್ತಿರುವ ಇಟಲಿಯ ಫಿಯಟ್ ಆಟೋ ಮಾರಾಟದಲ್ಲಿ ಶೇ 14.4 ರಷ್ಟು ಕುಸಿತ ದಾಖಲಾಗಿದ್ದು ಕಳೆದ ವರ್ಷದ ಜುಲೈನಲ್ಲಿ 2,690 ಫಿಯಟ್ ಗಳನ್ನು ಮಾರಾಟ ಮಾಡಿದ್ದು ಈ ವರ್ಷ ಇದರ ಸಂಖ್ಯೆ 2,301 ಕ್ಕೆ ಕುಸಿದಿದೆ.


Click it and Unblock the Notifications








