ಮಾರುತಿಯಿಂದ ಹೊಸ ಏ ಸ್ಟಾರ್ ಕಾರು

ಸಣ್ಣಕಾರುಗಳ ಮಾರುಕಟ್ಟೆಯಲ್ಲಿ ಅತ್ಯಂತ ಮಿತವ್ಯಯಿ ಎನಿಸಿರುವ ಏ ಸ್ಟಾರ್ ಬೆಲೆ 4.34 ಲಕ್ಷರು(ದೆಹಲಿ ಏಕ್ಸ್ ಷೋರೂಂ ಬೆಲೆ) . ಇಂಧನ ಕಾರ್ಯಕ್ಷಮತೆ ಕೂಡ ಉತ್ತಮವಾಗಿದ್ದು 17 ಕಿ.ಮೀ ಪ್ರತಿ ಲೀಟರ್ ಗೆ ನೀಡುತ್ತದೆ.
ಪವರ್ ವಿಂಡೋಸ್, ಸಿಡಿ/ ಎಂಪಿ3 ಪ್ಲೇಯರ್, ಚಾಲಕನ ಸೀಟು ಎತ್ತರ ಹೆಚ್ಚಿಸಲು ತಗ್ಗಿಸಲು ಸ್ವಯಂ ವ್ಯವಸ್ಥೆ, ಪವರ್ ಸ್ಟೀರಿಂಗ್ ಮುಂತಾದ ಉತ್ತಮ ಸೌಲಭ್ಯಗಳ ಮೂಲಕ ಮಹಿಳೆಯರು ಹಾಗೂ ಹಿರಿಯ ನಾಗರೀಕರ ಅಚ್ಚುಮೆಚ್ಚಿನ ವಾಹನವಾಗಿ ಹೊರಹೊಮ್ಮಿದೆ.
ಇತ್ತೀಚೆಗೆ ಸಿಎನ್ ಜಿ ಮಾದರಿಯ ಎಸ್ಟಿಲೋ, ಎಕೋ, ವಾಗನ್ ಆರ್, ಆಲ್ಟೋ ಮತ್ತು ಎಸ್ ಎಕ್ಸ್ 4ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಜೊತೆಗೆ 1000 ಸಿಸಿ K ಶ್ರೇಣಿ ಇಂಜಿನ್ ವುಳ್ಳ ಮಾರುತಿ ಆಲ್ಟೋ K10 ಕಾರು ಕೂಡಾ ರಸ್ತೆಗಿಳಿದಿದೆ.


Click it and Unblock the Notifications








