2012 ಕ್ಕೆ ಸ್ಕೋಡಾ ಸಣ್ಣಕಾರು ಮಾರುಕಟ್ಟೆಗೆ

Skoda Yeti
ಚೆಕ್ ಗಣರಾಜ್ಯ ಮೂಲದ ಕಾರು ತಯಾರಕ ಸ್ಕೋಡಾ, ಭಾರತದ ಸಣ್ಣಕಾರುಗಳ ಮಾರುಕಟ್ಟೆಗೆ ಪಾದುಗಾಲಿಡುತ್ತಿದ್ದು, 3 ರಿಂದ 4 ಲಕ್ಷ ಮುಖಬೆಲೆಯ ಸಣ್ಣಕಾರು ತಯಾರಿಸುವುದಾಗಿ ಹೇಳಿದೆ.

ಸದ್ಯಕ್ಕೆ ಸ್ಕೋಡಾ SUV ಯೆತಿಯನ್ನು ಈ ವರ್ಷದ ಕೊನೆಗೆ ಬಿಡುಗಡೆ ಮಾಡಲಿದೆ. ಸದ್ಯ SUV ಮಾರುಕಟ್ಟೆಯಲ್ಲಿ ಟೋಯೋಟಾ ಫೊರ್ಚುನರ್, ಹೋಂಡಾ CRV, ಚೆವಿ ಕ್ಯಾಪ್ಟಿವಾ ಹಾಗೂ ನಿಸ್ಸಾನ್ ನ ಎಕ್ಸ್ ಟ್ರೈಲ್ ನ ರಾಜ್ಯ ಭಾರ ಮಾಡುತ್ತಿದ್ದು, ಇವುಗಳ ಜೊತೆ ಯೆತಿ ಸೆಣಸಲಿದೆ.

ವೋಕ್ಸ್ ವ್ಯಾಗನ್ ನ ತಂತ್ರಜ್ಞಾನ ಸಹಾಯ ಪಡೆದು ಸೆಡಾನ್ ಮಾದರಿ ಕಾರನ್ನು ಮುಂದಿನ ವರ್ಷ ಹೊರ ತರಲಿದ್ದು, ಈ ಕಾರಿನ ಬೆಲೆ ಸುಮಾರು 6 - 10 ಲಕ್ಷವಾಗಲಿದೆ.

ಸದ್ಯಕ್ಕೆ ವರ್ಷಕ್ಕೆ ಒಂದು ಹೊಸ ಮಾದರಿ ಕಾರುಗಳನ್ನು ಮಾತ್ರ ಹೊರತರುತ್ತಿದ್ದು, ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಮುಂದುವರೆಯುವುದಾಗಿ ಸ್ಕೋಡಾ ಇಂಡಿಯಾದ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶಕ ಥಾಮಸ್ ಕುಯಲ್ ಹೇಳುತ್ತಾರೆ. ಸಣ್ಣಕಾರುಗಳ ತಯಾರಿಕೆ ಈ ವರ್ಷಾಂತ್ಯಕ್ಕೆ ಆರಂಭವಾದರೂ 2012 ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಲಿದೆ.

ಸಣ್ಣಕಾರು ಮಾರುಕಟ್ಟೆಯಲ್ಲಿ ಈಗಾಗಲೇ ಮಾರುತಿ ತನ್ನ ಪ್ರಭುತ್ವವನ್ನು ಸಾಧಿಸಿದ್ದು, ಹ್ಯುಂಡೈ ಮತ್ತು ಟಾಟಾ ಉತ್ತಮ ಪೈಪೋಟಿ ನೀಡುತ್ತಿವೆ. ಜೊತೆಗೆ ಫೋರ್ಡ್ ಫಿಗೋ, ಜಿಎಂ ಬೀಟ್ ಹಾಗೂ ವೋಕ್ಸ್ ವ್ಯಾಗನ್ ನ ಪೋಲೋ ಕೂಡಾ ಸ್ಕೋಡಾದ ಹೊಸ ಕಾರಿನ ಸ್ಪರ್ಧೆ ನೀಡಲಿವೆ.

ಫ್ಯಾಬಿಯ ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ಹೊಸ ಆವೃತ್ತಿಯನ್ನು ಇನ್ನು ಕೆಲ ತಿಂಗಳಲ್ಲೇ ಸ್ಕೋಡಾ ಹೊರ ತರಲಿದೆ. ಸ್ಪರ್ಧಾತ್ಮಕ ಬೆಲೆ ನಿಗದಿ ಮಾಡುವುದಾಗಿ ಹೇಳಿರುವ ಸ್ಕೋಡಾ 6 - 7.84 ಲಕ್ಷಕ್ಕೆ ಸೀಮಿತಗೊಳಿಸುವ ಸಾಧ್ಯತೆಯಿದೆ. ಒಟ್ಟಾರೆ ಹೊಸ ಆವೃತ್ತಿ ಫ್ಯಾಬಿಯ, 2010 ಕ್ಕೆ ಯೆತಿ, 2011 ಕ್ಕೆ ಸೆಡಾನ್ ಹಾಗೂ 2012 ಕ್ಕೆ ಸಣ್ಣಕಾರು ಹೊರತರುವ ಯೋಜನೆ ಹಾಕಿಕೊಂಡಿದೆ.

More from DriveSpark

Article Published On: Thursday, August 19, 2010, 10:05 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+