ಕ್ರೀಡಾ ವಾಹನ ತಯಾರಿಕೆಗೆ ಮಹೀಂದ್ರಾ ಯತ್ನ

ಈ ವಿಲೀನದಿಂದ ಎರಡೂ ಕಂಪೆನಿಗಳೂ ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಸೃಷ್ಟಿಸಿ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಅವಕಾಶವಾಗಲಿದೆ ಎಂದು ಮಹೀಂದ್ರಾದ ಆಟೋಮೋಟಿವ್ ಮತ್ತು ಫಾರ್ಮ್ ವಿಭಾಗದ ಅಧ್ಯಕ್ಷ ಪವನ್ ಗೊಯೆಂಕಾ ಹೇಳಿದರು.
ಕಂಪೆನಿ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಎರಡೂ ಕಂಪೆನಿಗಳು ಉತ್ತಮ ಮಾರುಕಟ್ಟೆ ಹೊಂದಿದ್ದು ಜಾಗತಿಕ ಬ್ರಾಂಡ್ ಸೃಷ್ಟಿಸಲಿವೆ ಎಂದರು. ಕೊರಿಯಾದ ಸಣ್ಣ ವಾಹನ ತಯಾರಿಕಾ ಕಂಪೆನಿಯಾಗಿರುವ ಸ್ಸಾಂಗ್ ಯೊಂಗ್ ಕಡಿಮೆ ಬೆಲೆಯ ಕ್ರೀಡಾ ಉಪಯುಕ್ತ ವಾಹನ ರೆಕ್ಸ್ಟನ್, ಕೈರಾನ್, ಆಕ್ಟೋನ್ ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತಿದ್ದು ಸೇಡಾನ್ ಗಳನ್ನೂ ತಯಾರಿಸುತ್ತಿದೆ.


Click it and Unblock the Notifications