ಟಾಟಾದಿಂದ 2012 ಕ್ಕೆ ಡಿಲಕ್ಸ್ ನ್ಯಾನೋ

ಡೀಲಕ್ಸ್ ನಲ್ಲಿ ಶಕ್ತಿ ಶಾಲಿ ಎಂಜಿನ್, ಆರಾಮವಾದ ಆಸನದ ಜತೆಗೇ ಶಕ್ತಿ ಶಾಲಿ ಸ್ಟೀರಿಂಗ್ ಮತ್ತು ಏರ್ ಬ್ಯಾಗ್ ಇರುತ್ತದೆ. ನ್ಯಾನೋದ ಮುಂದುವರಿದ ತಂತ್ರಜ್ಞಾನವನ್ನು ಯೂರೋಪ್ ರಾಷ್ಟ್ರಗಳಿಗೆ ಪರಿಚಯಿಸುವ ಯೋಜನೆ ಹಾಕಿಕೊಂಡಿರುವ ಟಾಟಾ ಇದನ್ನು'ನ್ಯಾನೋ ಯೂರೋಪ' ಹೆಸರಿನಲ್ಲಿ ಯೂರೋಪ್ ನಲ್ಲಿ ಬಿಡುಗಡೆ ಮಾಡಲಿದೆ.
ಈ ವಿಷಯವನ್ನು ತಿಳಿಸಿದ ಟಾಟಾ ಮೋಟಾರ್ಸ್ ಇಂಡಿಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪಿ ಎಮ್ ತೆಲಾಂಗ್ ಅವರು ಇದನ್ನು ಭಾರತದಲ್ಲೂ ಬಿಡುಗಡೆ ಮಾಡಲಾಗುವುದು ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಈ ಡೀಲಕ್ಸ್ ನ ತಯಾರಿಕೆಗೆ ಮುಂದಾಗಿರುವ ಟಾಟಾ ಇದರಲ್ಲಿ 5 ವೇಗದ ಸ್ವಯಂ ಚಲಿತ ಗೇರ್ ಬಾಕ್ಸ್ ಹಾಗೂ ಶಕ್ತಿ ಶಾಲಿ 3 ಸಿಲಿಂಡರ್ ಗಳ ಸಂಪೂರ್ಣ ಅಲ್ಯುಮಿನಿಯಂ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ.


Click it and Unblock the Notifications








