ಲಾಭದ ನಡುವೆಯೂ ಮಾರುತಿಗೆ ರಫ್ತಿನ ಚಿಂತೆ

ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ಲಾಭಕ್ಕಿಂತ ಶೇ.24 ರಷ್ಟು ಅಧಿಕ ಲಾಭವನ್ನು ಸಂಸ್ಥೆ ಗಳಿಸಿದೆ. ಭಾರತದ ಕಾರು ಮಾರುಕಟ್ಟೆ ಶೇ.51.8 ರಷ್ಟು ಪಾಲು ಹೊಂದಲು ಪ್ರತಿ ತಿಂಗಳಿನ ಪ್ರಗತಿಪರ ಲಾಭಾಂಶವು ಸಹಾಯಕವಾಗಿದೆ. ಆದರೆ, ಕಳೆದ ವರ್ಷ ಶೇ.53.2 ಪಾಲು ಹೊಂದಿತ್ತು ಹಾಗೂ 2008-09ರಲ್ಲಿ ಶೇ.55.1ರಷ್ಟು ಪಾಲು ಗಳಿಸಿತ್ತು.
ಮಾರುತಿ ಬೇಡಿಕೆಯಲ್ಲಿ ಕುಸಿತವಾಗಿಲ್ಲವಾದರೂ, ರಫ್ತು ಪ್ರಮಾಣದಲ್ಲಿ ಕೊಂಚ ಇಳಿಮುಖವಾಗಿರುವುದನ್ನು ಕಂಪೆನಿ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ 51,072 ವಾಹನಗಳನ್ನು ಜಪಾನ್ ಮಾರುಕಟ್ಟೆಗೆ ರಫ್ತು ಮಾಡಿದ್ದ ಮಾರುತಿ ಈ ಬಾರಿ 30,000 ವಾಹನಗಳನ್ನು ಕಳಿಸಿದೆ.
ಯುರೋಪ್ ಮಾರುಕಟ್ಟೆಯಲ್ಲಿ ಕೂಡಾ ಕೊಂಚ ಏರುಪೇರಾಗಿದ್ದರೂ, ನಿಸ್ಸಾನ್ ಜತೆಗೂಡಿ ಹ್ಯಾಚ್ ಬ್ಯಾಕ್ ಮಾದರಿ ಕಾರುಗಳನ್ನು ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟಕ್ಕಿಳಿದಿದೆ. ಒಟ್ಟಾರೆ BSE ಮಾರುಕಟ್ಟೆಯಲ್ಲಿ ಶೇ.1 ರಷ್ಟು ಪ್ರಗತಿ ಸಾಧಿಸಿ ರು .1445 ರು ಮೌಲ್ಯದೊಂದಿಗೆ ಸುಸ್ಥಿತಿಯನ್ನು ಕಾಯ್ದುಕೊಂಡಿದೆ.
ಕಳೆದ ಆರ್ಥಿಕ ವರ್ಷದಲ್ಲಿ 1.02 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದ್ದ ಮಾರುತಿ, ಈ ವರ್ಷ ಕೂಡಾ ಅದೇ ಹಾದಿಯಲ್ಲಿದ್ದು, ಇನ್ನಷ್ಟು ವಾಹನ ಮಾರಾಟ ಮಾಡುವ ಗುರಿ ಹೊಂದಿದೆ. ಬದಲಾಗುತ್ತಿರುವ ಮಾರುಕಟ್ಟೆಗೆ ಅನುಗುಣವಾಗಿ ಮುಂಬರುವ ಮೂರು ವರ್ಷಗಳಲ್ಲಿ ಸುಮಾರು $1.3 ಬಿಲಿಯನ್ ಬಂಡವಾಳ ಹೂಡಿ ವಾರ್ಷಿಕ ವಾಹನ ಉತ್ಪಾದನೆ ಗುರಿಯಲ್ಲಿ ಹೆಚ್ಚಳ ಕಾಣುವ ವಿಶ್ವಾಸ ಹೊಂದಿದೆ.
ಈ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಮಾರುತಿ, 2013ರ ವೇಳೆಗೆ ಹೊಸ ಘಟಕ ಕಾರ್ಯಾರಂಭ ಮಾಡಲಿದ್ದು, ಆರಂಭಿಕ ಹಂತದಲ್ಲಿ 2,50,000 ವಾಹನಗಳನ್ನು ತಯಾರಿಸುವ ಗುರಿ ಹೊಂದಿದೆ. ವಾರ್ಷಿಕವಾಗಿ 1.5 ಮಿಲಿಯನ್ ವಾಹನಗಳ ಉತ್ಪಾದನೆ ಮಾರುತಿಯ ಸದ್ಯದ ಗುರಿ.


Click it and Unblock the Notifications