48 ದೇಶಗಳಿಗೆ ಫಿಗೊ ರಫ್ತಿಗೆ ಫೋರ್ಡ್ ಸಿದ್ಧತೆ

ಈಗಾಗಲೇ ಅಕ್ಟೋಬರ್ ತಿಂಗಳಿನಿಂದ 3.5 ಲಕ್ಷದಿಂದ 4.48 ಲಕ್ಷ ರು ಬೆಲೆಯ ಫಿಗೊ ನೇಪಾಳಕ್ಕೆ ರಫ್ತಾಗುತ್ತಿದೆ. ಮಾರ್ಚ್ ನಿಂದ ಫಿಗೊ ಮಾರಾಟದಲ್ಲಿ ಪ್ರಗತಿ ಕಂಡುಬಂದಿದೆ. ಮುಂಬರುವ ಐದಾರು ವರ್ಷಗಳಲ್ಲಿ ಫಿಗೊ ಕಾರಿನ ಹೊಸ ಹೊಸ ಮಾದರಿಗಳನ್ನು ಹೊರ ತರಲಾಗುವುದು. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ ಎಂದು ಮೈಕಲ್ ತಿಳಿಸಿದರು.
ಒಮ್ಮೆ ಬುಕ್ ಮಾಡಿದ ಫಿಗೊ ಕಾರು ಗ್ರಾಹಕರ ಮನೆ ಸೇರಲು ಕನಿಷ್ಠ 2 ವಾರವಾದರೂ ಬೇಕು. ಚೆನ್ನೈ ಘಟಕದಲ್ಲಿ ಶಿಫ್ಟ್ ಮೇಲೆ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಈ ಕಾಯುವಿಕೆ ಅವಧಿಯನ್ನು ಕಡಿಮೆ ಮಾಡಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಚೆನ್ನೈ ಘಟಕದಿಂದ ಸುಮಾರು 80 ಸಾವಿರ ವಾಹನಗಳು ಹೊರ ಬರುತ್ತಿದ್ದು, ವಾರ್ಷಿಕ 2 ಲಕ್ಷ ಉತ್ಪನ್ನಗಳನ್ನು ಹೊರ ತರುವ ಸಾಮರ್ಥ್ಯ ಈ ಘಟಕಕ್ಕಿದೆ. ಕಾರು ಡೀಲರ್ ಗಳು ಸಂಖ್ಯೆಯ ಹೆಚ್ಚಳಕ್ಕೂ ಯೋಜನೆಗಳು ಸಿದ್ಧವಿದೆ ಎಂದು ಮೈಕಲ್ ಹೇಳಿದರು.


Click it and Unblock the Notifications








