ಗಮನಿಸಿ: ಫೋರ್ಡ್ ಫಿಗೊ ಮತ್ತು ಫಿಯೆಸ್ಟಾ ಕಾರುಗಳ ಹಿಂಪಡೆತ

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಉತ್ಪನ್ನಗಳಾದ ಫಿಗೊ ಹ್ಯಾಚ್ ಬ್ಯಾಕ್ ಮತ್ತು ಫೋರ್ಡ್(ಫಿಯೆಸ್ಟಾ) ಕ್ಲಾಸಿಕ್ ಕಾರುಗಳನ್ನು ಹಿಂಪಡೆಯಲಿದೆ. ಈ ಕಾರುಗಳ ರಿಯರ್ ಟ್ವಿಸ್ಟ್ ಬೀಮ್ ಮತ್ತು ಪವರ್ ಸ್ಟಿಯರಿಂಗ್ ಹೊಸ್ ಸರಿಪಡಿಸಲು ರಿಕಾಲ್ ಮಾಡುವುದಾಗಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ನಿಮ್ಮಲ್ಲಿ ಸೆಪ್ಟಂಬರ್ 2010ರಿಂದ ಫೆಬ್ರವರಿ 2011ರವರೆಗೆ ಉತ್ಪಾದಿಸಿರುವ ಫಿಗೊ ಮತ್ತು ಫಿಯೆಸ್ಟಾ ಕಾರಿದ್ದರೆ ನೀವು ಹತ್ತಿರದ ಫೋರ್ಡ್ ಡೀಲರನ್ನು ಸಂಪರ್ಕಿಸಬಹುದು. ಕಂಪನಿಯು ಜನವರಿ 2008ರಿಂದ ಡಿಸೆಂಬರ್ 2010ರವರೆಗೆ ಉತ್ಪಾದಿಸಿರುವ ಎಲ್ಲಾ ಕಾರುಗಳನ್ನೂ ಉಚಿತವಾಗಿ ಪರಿಶೀಲಿಸಲಿದೆ.

ಈ ಅವಧಿಯಲ್ಲಿ ಉತ್ಪಾದಿಸಿದ ಫಿಗೊ ಮತ್ತು ಕ್ಲಾಸಿಕ್ ಕಾರುಗಳಿಗೆ ಉಚಿತವಾಗಿ ಪವರ್ ಸ್ಟಿಯರಿಂಗ್ ಹೊಸ್ ಹಾಕಿಕೊಡುವುದಾಗಿ ಕಂಪನಿ ತಿಳಿಸಿದೆ.

ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಲ್ಲಿ ಫಿಗೊ ಅಥವಾ ಕ್ಲಾಸಿಕ್ ಕಾರುಗಳಿದ್ದರೆ ನೀವು ಮಾಡಬೇಕಾದ್ದು ಇಷ್ಟೇ. ಮೊದಲು ನೀವು ಫೋರ್ಡ್ ಕಂಪನಿಯ ವೆಬ್ ತಾಣದ ಈ ಲಿಂಕ್ ಪ್ರವೇಶಿಸಿರಿ. ಫಿಗೊ ಅಥವಾ ಫಿಯೆಸ್ಟಾ ಕ್ಲಾಸಿಕ್ ಕಾರಿನ 17 ಅಂಕಿಯ ವಾಹನ ಗುರುತಿನ ಸಂಖ್ಯೆ(ವಿಐಎನ್) ನಮೋದಿಸಿ ಸಪೋರ್ಟ್ ಬಟನ್ ಕ್ಲಿಕ್ ಮಾಡಿ.

ನಿಮ್ಮ ಕಾರು ಕೂಡ "ರಿಕಾಲ್" ಲಿಸ್ಟಿಗೆ ಸೇರಿರುವುದೇ ಅಥವಾ ಇಲ್ಲವೇ ಎನ್ನುವುದು ಅಲ್ಲಿ ತಿಳಿದುಬರಲಿದೆ. ಎಲ್ಲಾದರೂ ನಿಮ್ಮ ಕಾರಿಗೂ ಈ ಸಮಸ್ಯೆಯಿದೆ ಎಂದರೆ ನಿಮ್ಮ ಹತ್ತಿರದ ಫೋರ್ಡ್ ಡೀಲರನ್ನು ಸಂಪರ್ಕಿಸಿ ಉಚಿತವಾಗಿ ಸಮಸ್ಯೆ ಸರಿಪಡಿಸಿಕೊಳ್ಳಿ.

ಎಲ್ಲಾ ಸರಿ ಈ 17 ಅಂಕಿಯ ವಾಹನ ಗುರುತಿನ ಸಂಖ್ಯೆ ಎಲ್ಲಿರುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ದಕ್ಕಾಗಿ ನೀವು ಡ್ರೈವರ್ ಸೀಟ್ ಕೆಳಗಡೆ ನೋಡಬೇಕು. ಅಲ್ಲಿ ಕಪ್ಪು ಬಣ್ಣದ ಪಟ್ಟಿಯಲ್ಲಿ ವಿಐಎನ್ ಸಂಖ್ಯೆ ಇರುತ್ತದೆ. ಅಥವಾ ಡ್ರೈವರ್ ಸೀಟ್ ಕೆಳಭಾಗದ ಫ್ಲೋರ್ ಮ್ಯಾಟ್ ತೆರೆದರೆ ಅಲ್ಲಿ ಕಪ್ಪು ಕವಾಟ ಕಾಣುತ್ತದೆ. ಆ ಕಪ್ಪು ಕವಾಟ ತೆರೆದರೆ ನಿಮಗೆ 17 ಅಂಕಿಯ ವಾಹನ ಗುರುತಿನ ಸಂಖ್ಯೆ ಕಾಣುತ್ತದೆ.

ಹೆಚ್ಚಿನ ಮಾಹಿತಿಗೆ ಫೋರ್ಡ್ ತಾಣಕ್ಕೆ ಭೇಟಿನೀಡಿ.

Most Read Articles

Kannada
English summary
Ford India started recall for identified batches of Ford Figo and Fiesta Classic for a suspected fault in Rear Twist Beam and Power Steering Hose.
Story first published: Friday, August 10, 2012, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X