'ಜೀಪುಗಳ ರಾಜ' ಮಹೀಂದ್ರಾದಿಂದ ಹೊಸ ಥಾರ್

ಡಿಸೆಂಬರ್ ಅಂತ್ಯಕ್ಕೆ ಬೆಂಗಳೂರು, ಮಂಗಳೂರು, ಚಂದೀಗಢಗಳನ್ನು ಥಾರ್ ಪ್ರವೇಶಿಸಲಿದ್ದು, ಜನವರಿ 2011ರ ವೇಳೆಗೆ ಭಾರತದ ಇತರ ರಾಜ್ಯಗಳಲ್ಲಿ ಪರಿಚಯಿಸಲಾಗುವುದು ಎಂದು ಮಹೀಂದ್ರಾ ಹಾಗೂ ಮಹೀಂದ್ರಾ ಮುಖ್ಯ ಕಾರ್ಯನಿರ್ವಾಹಕ ರಾಜೇಶ್ ಜೆಜುರಿಕರ್ ಹೇಳಿದ್ದಾರೆ.
ವ್ರಾಂಗ್ಲರ್ ಜೀಪಿಗೆ ಕಠಿಣ ಸ್ಪರ್ಧೆ ಒಡ್ಡಲು ಥಾರ್ ತಯಾರಾಗಿದ್ದು, ನಗರ ಹಾಗೂ ಹಳ್ಳಿಗಾಡಿನಲ್ಲೂ ಜನಪ್ರಿಯತೆ ಗಳಿಸುವ ವಿಶ್ವಾಸವನ್ನು ಥಾರ್ ನಿರ್ಮಾಪಕರು ವ್ಯಕ್ತಪಡಿಸಿದ್ದಾರೆ. 2.5ಲೀ , 2500ಸಿಸಿ BS IV CRDe ಟರ್ಬೊ ಡೀಸೆಲ್ ಇಂಜಿನ್ ವುಳ್ಳ ಥಾರ್ ಗೆ ಯುರೋ 4 ಎಮಿಷನ್ ಪ್ರಮಾಣ ಪತ್ರ ಸಿಕ್ಕಿದೆ. 105bhp ಶಕ್ತಿ ಸಾಮರ್ಥ್ಯವಿದ್ದು, ಕಠಿಣ ರಸ್ತೆಗಳಲ್ಲೂ ವೇಗ ನಿಯಂತ್ರಿಸಿಕೊಂಡು ಮುನ್ನುಗ್ಗಬಹುದಾಗಿದೆ.
ಸೆಡಾನ್ ಮಾದರಿ ಕಾರುಗಳು ಕೈಕೊಟ್ಟ ಮೇಲೆ ಮಹೀಂದ್ರಾ ಮತ್ತೆ ಜೀಪು ತಯಾರಿಕೆಯತ್ತ ಗಮನಹರಿಸತೊಡಗಿದೆ. ಸ್ಕಾರ್ಪಿಯೊ, ಕ್ಸೈಲೊ ಹಾಗೂ ಬೊಲೆರೋ ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯನ್ನು ಹೊಂದಿದೆ. ಶ್ರೀಸಾಮಾನ್ಯನಿಂದ ಆರ್ಮಿ ಮೇಜರ್ ಜನರಲ್, ಪ್ರಧಾನಿ ಮುಂತಾದ ಗಣ್ಯಾತಿಗಣ್ಯರನ್ನು ಹೊತ್ತು ಸಾಗಿಸಿದ ಚರಿತ್ರೆವುಳ್ಳ ಮಹೀಂದ್ರಾ ಜೀಪುಗಳು ಮತ್ತೊಮ್ಮೆ ತಮ್ಮ ಸಾಮರ್ಥ್ಯದಿಂದ ಮಾರುಕಟ್ಟೆಯಲ್ಲಿ ವಿಜೃಂಭಿಸಲು ಸಿದ್ಧವಾಗಿವೆ.[ಆಟೋಮೊಬೈಲ್ಸ್]


Click it and Unblock the Notifications








