ಮಾರುತಿ ಕಿಝಾಷಿ ಫೆಬ್ರವರಿಯಲ್ಲಿ ರಸ್ತೆಗೆ

Maruti Kizashi car launch
ದೇಶದ ಬೃಹತ್ ಕಾರ್ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ನೂತನ ಕಿಝಾಷಿ ಕಾರ್ ಮೂಲಕ ಐಷಾರಾಮಿ ಕಾರ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ನೂತನ ಐಷಾರಾಮಿ ಸೆಡಾನ್ ದೇಶದ ಮಾರುಕಟ್ಟೆಗೆ ಮುಂದಿನ ಫೆಬ್ರವರಿಯಲ್ಲಿ ಪ್ರವೇಶಿಸಲಿದೆ. ಇದು ಜಪಾನಿನ ಸುಜುಕಿ ಘಟಕದಲ್ಲಿ ಉತ್ಪಾದನೆಯಾಗಿ ಭಾರತಕ್ಕೆ ಕಂಪನಿಯು ಆಮದು ಮಾಡಿಕೊಳ್ಳಲಿದೆ.

ನೂತನ ಕಾರ್ ರಸ್ತೆಯಲ್ಲಿರುವ ಹೋಂಡಾ ಅಕಾರ್ಡ್, ಟೊಯೊಟಾ ಕ್ಯಾಮ್ರಿ, ಹೋಂಡಾ ಸಿವಿಕ್, ವೋಕ್ಸ್ ವ್ಯಾಗನ್ ಜೆಟ್ಟಾ ಮತ್ತು ಟೊಯೊಟಾ ಕೊರೊಲಾ ಇತ್ಯಾದಿ ಕಾರ್ ಗಳೊಂದಿಗೆ ಪೈಪೋಟಿ ನಡೆಸಲಿದೆ. ನೂತನ ಕಿಝಾಷಿ ದರ ಸುಮಾರು 12 ಲಕ್ಷ ರೂಪಾಯಿಯಿಂದ 20 ಲಕ್ಷ ರೂ.ವರೆಗಿರಲಿದೆ.

ಎ4 ಮತ್ತು ಎ5 ಸೆಗ್ಮೆಂಟ್ ನಲ್ಲಿ ವರ್ಷಕ್ಕೆ 55 ಸಾವಿರಕ್ಕಿಂತ ಹೆಚ್ಚು ಯೂನಿಟ್ ಉತ್ಪಾದಿಸುವ ಅಂದಾಜನ್ನು ಕಂಪನಿ ವ್ಯಕ್ತಪಡಿಸಿದೆ. ನೂತನ ಮಾರುತಿ ಸುಜುಕಿ ಕಿಝಾಷಿ 2.4 ಲೀಟರ್ ನ ಪೆಟ್ರೊಲ್ ಎಂಜಿನ್ ಹೊಂದಿರಲಿದ್ದು, ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಎರಡು ಆಯ್ಕೆಯಲ್ಲೂ ದೊರಕಲಿದೆ.

ನೂತನ ಕಾರ್ ನ್ನು ಕಂಪನಿಯು ಹೆಚ್ಚು ಆರಾಮದಾಯಕ ಫೀಚರ್ ಗಳಿಂದ ನಿರ್ಮಿಸಿದೆ. ಇದು 6,500 ಆರ್ ಪಿಎಂಗೆ ಆಕರ್ಷಕ 178 ಪಿಎಸ್ ಪವರ್ ನೀಡುತ್ತದೆ. ಜೊತೆಗೆ 4 ಸಾವಿರ ಆರ್ ಪಿಎಂಗೆ 230 ಎನ್ ಎಂ ಟಾರ್ಕ್ ಪೂರೈಕೆ ಮಾಡುತ್ತದೆ. ಇದರೊಂದಿಗೆ ಇದರಲ್ಲಿ 6 ಸ್ಪೀಡ್ ನ ಟ್ರಾನ್ಸ್ ಮಿಷನ್ (ಸಿವಿಟಿ) ಕೂಡ ಇದೆ.

More from DriveSpark

Article Published On: Monday, January 24, 2011, 14:07 [IST]
English summary
Maruti Suzuki India, the largest car manufacturer is all geared to enter the luxury car segment with its "Kizashi". The luxury sedan is said to be in the Indian markets from February and is completely manufactured in the main Suzuki facility in Japan and is imported to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+