ಸಣ್ಣ ಕಾರಿನತ್ತ ಮರ್ಸಿಡಿಸ್ ಚಿತ್ತ

ಕಂಪನಿಯು ಟಾಟಾ ನ್ಯಾನೊದಂತಹ ಸಣ್ಣ ಕಾರ್ ವಿನ್ಯಾಸ ಮಾಡುತ್ತಿರುವುದಾಗಿ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೂ ನೂತನ ಸಣ್ಣ ಕಾರ್ ಬಿಡುಗಡೆಯ ದಿನಾಂಕ ಇನ್ನೂ ನಿರ್ಧಾರವಾಗಿಲ್ಲವೆಂದು ಅವರು ಹೇಳಿದ್ದಾರೆ. ಬೃಹತ್ ಪ್ರಮಾಣದ ಹೂಡಿಕೆಯ ಮೂಲಕ ಭವಿಷ್ಯದಲ್ಲಿ ಕಂಪನಿಯು ತನ್ನದೇ ಕಾರ್ ಅಭಿವೃದ್ಧಿಪಡಿಸುವುದಾಗಿ ಕಂಪನಿ ಹೇಳಿದೆ. ಅಂದಾಜು 100 ಕೋಟಿ ಯೂರೋ ಹೂಡಿಕೆ ಮಾಡುವ ಯೋಜನೆಯಿದೆ.
ಜರ್ಮನಿಯ ಅಂಗಸಂಸ್ಥೆ ನೆರವಿನಿಂದ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ಬೆಂಗಳೂರಿನಲ್ಲಿ ಸಣ್ಣ ಕಾರ್ ವಿನ್ಯಾಸ ಮಾಡಲಿದೆ. ಆರ್ ಆಂಡ್ ಡಿ ಸೆಂಟರ್ ನಲ್ಲಿ ಈಗ 600 ಸಿಬ್ಬಂದಿಯಿದ್ದು ಮುಂದಿನ ವರ್ಷ ಇದನ್ನು ಎರಡು ಪಟ್ಟು ಹೆಚ್ಚಿಸುವ ಯೋಜನೆಯೂ ಕಂಪನಿಗಿದೆ. ಕಂಪನಿಯ 20 ಮಾಡೆಲ್ ಗಳ ಮಾರಾಟಕ್ಕೆ ಉತ್ತೇಜನ ನೀಡಲು ಹಳೆಯ ಡೀಲರ್ ಕೇಂದ್ರಗಳನ್ನು ಮರು ರೂಪಿಸಲು ಕೂಡ ನಿರ್ಧರಿಸಿದೆ. ದೆಹಲಿಯಲ್ಲಿ ಸಾಂಕೇತಿಕವಾಗಿ ಮೊದಲ ಡೀಲರ್ ಕೇಂದ್ರ ಉದ್ಘಾಟಿಸಿ ನಂತರ ಚೆನ್ನೈ, ಬೆಂಗಳೂರು ಮತ್ತು ಮುಂಬೈ ಡೀಲರ್ ಕೇಂದ್ರಗಳನ್ನು ನವೀಕರಿಸಲು ಕಂಪನಿ ನಿರ್ಧರಿಸಿದೆ


Click it and Unblock the Notifications








