ಏಷ್ಯಾ ದೇಶಗಳತ್ತ ನ್ಯಾನೊ ಸವಾರಿ

Tata Nano export
ದೇಶದಲ್ಲಿ ನ್ಯಾನೊ ನಿರೀಕ್ಷಿತ ಗೆಲುವು ಪಡೆಯದ ಹಿನ್ನಲೆಯಲ್ಲಿ, ಟಾಟಾ ಮೋಟಾರ್ಸ್ ಜಗತ್ತಿನ ಅಗ್ಗದ ಕಾರನ್ನು ಏಷ್ಯಾದ ಕೆಲವು ದೇಶಗಳತ್ತ ಡ್ರೈವ್ ಮಾಡಲು ಯೋಜಿಸಿದೆ. ಕಂಪನಿಯು ಎರಡು ವರ್ಷ ಪ್ರಾಯದ ಸಣ್ಣ ಕಾರಿನ ಮಾರಾಟ ಹೆಚ್ಚಿಸಲು ಹಲವು ಕಾರ್ಯ ತಂತ್ರ ರೂಪಿಸಿದರೂ ಮಾರಾಟ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕಂಪನಿಯು ನಿರೀಕ್ಷಿತ ಮಾರಾಟದ ಗುರಿ ತಲುಪಲು ನ್ಯಾನೊ ಕಾರನ್ನು ಶ್ರೀಲಂಕಾ, ಥೈಲಾಂಡ್, ಬಾಂಗ್ಲಾದೇಶದ ಮುಂತಾದ ರಾಷ್ಟ್ತಗಳತ್ತ ರಫ್ತು ಮಾಡಲು ನಿರ್ಧರಿಸಿದೆ.

ಕಂಪನಿ ಪ್ರತಿತಿಂಗಳು 6ರಿಂದ 7 ಸಾವಿರ ಕಾರ್ ಮಾರಾಟ ಮಾಡುತ್ತಿದ್ದು, ಇದನ್ನು 8ರಿಂದ 10 ಸಾವಿರ ಯೂನಿಟ್ ಗೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಕಂಪನಿಯ ಮುಖ್ಯವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ಮಾರಾಟದಲ್ಲಿ ಇಳಿಕೆ: ಟಾಟಾ ಮೋಟಾರ್ಸ್ ಕಳೆದ ನವೆಂಬರ್ ತಿಂಗಳಲ್ಲಿ ಕೇವಲ 509 ಯೂನಿಟ್ ನ್ಯಾನೊ ಮಾರಾಟ ಮಾಡಿತ್ತು. ಆದರೆ ಡಿಸೆಂಬರ್ ನಲ್ಲಿ ಹಲವು ಆಫರ್ ಗಳ ಮೂಲಕ ಒಂದಿಷ್ಟು ಗ್ರಾಹಕರನ್ನು ಸೆಳೆಯಲು ಯಶಸ್ವಿಯಾದ ಕಂಪನಿ 5,784 ಯೂನಿಟ್ ನ್ಯಾನೊ ಮಾರಾಟ ಮಾಡಿತ್ತು. ಆದರೂ ಜುಲೈ 2010ರ ಮಾರಾಟಕ್ಕೆ ಹೋಲಿಸಿದರೆ ನ್ಯಾನೊ ಮಾರಾಟ ಈಗ ಶೇಕಡಾ 60ರಷ್ಟು ಇಳಿಕೆಯಲ್ಲಿದೆ.

ಪ್ರತಿತಿಂಗಳು 99 ರೂಪಾಯಿ ನಿರ್ವಾಹಣಾ ವೆಚ್ಚ, ವ್ಯಾರೆಂಟಿ ಅವಧಿಯ ವಿಸ್ತರಣೆ ಇತ್ಯಾದಿ ಕಾರ್ಯತಂತ್ರದ ಮೂಲಕ ಕಂಪನಿಯ ಸಣ್ಣ ಕಾರ್ ಮಾರಾಟ ಏರಿಕೆ ಕಾಣುತ್ತಿದೆ. ಕಾರಿನ ದರ ಏರಿಕೆ ಮತ್ತು ನ್ಯಾನೊದಲ್ಲಿ ಬೆಂಕಿ ಕಾಣಿಸಿಕೊಂಡದ್ದು ಸೇರಿದಂತೆ ಕೆಲವು ಕಾರಣಗಳಿಂದ ಕಳೆದ ಜುಲೈ-ನವೆಂಬರ್ ಅವಧಿಯಲ್ಲಿ ಗಣನೀಯವಾಗಿ ಮಾರಾಟ ಇಳಿಕೆ ಕಂಡಿತ್ತು.

More from DriveSpark

Article Published On: Monday, January 31, 2011, 17:31 [IST]
English summary
Low success of Nano hitting rocks to the camps of Tata Motors, the company now wants to drive in this world cheapest car to the regions of Asia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+