ಕಾರ್ ಕಂಪನಿಗಳ "ಪರ್ಯಾಯ" ಇ-ಕನವರಿಕೆಗಳು

ಟಾಟಾ ಮೋಟರ್ಸ್ ಫ್ಯಾಕ್ಟರಿಯಿಂದ ದೇಶದಲ್ಲಿ ಇಂಡಿಕಾ ವೆಸ್ಟಾ ಇವಿ ಹೊರಬರಲಿದೆ. ನಾರ್ವೆ, ಡೆನ್ಮಾರ್ಕ್ ಮತ್ತು ಇಂಗ್ಲೆಂಡ್ ಮಾರುಕಟ್ಟೆಗೆ ಹೈಬ್ರಿಡ್ ಕಾರ್ ಪರಿಚಯಿಸಲು ಟಾಟಾ ಮೋಟರ್ಸ್ ಯೋಜಿಸಿದೆ. ಈ ವರ್ಷ ನೂತನ ತಲೆಮಾರಿನ ಹೊಸ ರೇವಾ ಎನ್ಎಕ್ಸ್ಆರ್ ಮಾದರಿಯೊಂದನ್ನು ಮಹೀಂದ್ರ ಆಂಡ್ ಎಎಂಪಿ ಪರಿಚಯಿಸಲಿದೆ. ಇದು ಲಿಥಿಯಂ ಐಯಾನ್ ಬ್ಯಾಟರಿ ಹೊಂದಿರಲಿದೆ.
ಜಿನಿವಾ ವಾಹನ ಪ್ರದರ್ಶನದಲ್ಲಿ ಐಷಾರಾಮಿ ಕಾರ್ ತಯಾರಿಕಾ ಕಂಪನಿ ರೋಲ್ಸ್ ರಾಯ್ಸಿ "102 ಎಕ್ಸ್ ಫಾಂಟೊಮ್" ಎಂಬ ಎಲೆಕ್ಟ್ರಿಕ್ ಆವೃತ್ತಿಯೊಂದನ್ನು ಅನಾವರಣ ಮಾಡಿದೆ. ಜನರಲ್ ಮೋಟರ್ಸ್ ಕೂಡ ಹೈಬ್ರಿಡ್ ಕಾರ್ ಲೋಕದಲ್ಲಿ ಸಕ್ರಿಯವಾಗಿದೆ. ತನ್ನ ವೋಲ್ಟ್ ಎಲೆಕ್ಟ್ರಿಕ್ ಕಾರ್ ನ್ನು ಕಂಪನಿ ಪರಿಚಯಿಸಿದೆ. ಜಿನಿವಾದಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಕಾರ್ ಗಳು ಕಂಡು ಬಂದಿದ್ದು ಕಾರ್ ಕಂಪನಿಗಳ ಮುಂದಿನ ದಿನಗಳ ಕಾರ್ಯ ತಂತ್ರಕ್ಕೆ ಕನ್ನಡಿ ಹಿಡಿದಿವೆ.
ಜಿನಿವಾ ವಾಹನ ಪ್ರದರ್ಶನದಲ್ಲಿ ಟಾಟಾ ತನ್ನ ಲ್ಯಾಂಡ್ ರೋವರ್ ರೇಂಜ್-ಇ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ. ರೋಲ್ಸ್ ರಾಯ್ಸಿ ತನ್ನ ಎಲೆಕ್ಟ್ರಿಕ್ ಫ್ಯಾಟಮ್ ಕಾರನ್ನು ಪರಿಚಯಿಸಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 200 ಕಿ.ಮೀ. ಸಾಗಬಹುದೆಂದು ಪ್ರತಿಪಾದಿಸಿದೆ. ಸ್ವಿಡನ್ ನ ಕ್ಯೂನಿಗ್ ಸಂಗ್, ಫ್ರಾನ್ಸ್ ನ ಪಿಗೊಟ್ ಕೂಡ ಇ-ಕಾರ್ ಗಳನ್ನು ಪ್ರದರ್ಶನದಲ್ಲಿಟ್ಟಿದ್ದವು.


Click it and Unblock the Notifications








