ಝೈಲೊ.. ಝೈಲೊ... ಮಹೀಂದ್ರ ಹೊಸ ಝೈಲೊ..!!

Mahindra Xylo Celebration Edition
ಮಹೀಂದ್ರ ಕಂಪನಿಯ ಝೈಲೊ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 2 ವರ್ಷ ಪೂರೈಸಿದ ಸಂಭ್ರಮದ ನೆನಪಿಗಾಗಿ ಕಂಪನಿಯು ಝೈಲೊದ "ಸೆಲೆಬ್ರೆಷನ್ ಅಡಿಶನ್' ಕಾರನ್ನು ಹೊರತಂದಿದೆ. ಹಿಂದೊಮ್ಮೆ ಈ ಕಾರನ್ನು ಕಂಪನಿಯು ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.

ಮಹೀಂದ್ರ ಝೈಲೊ 2009ರ ಜನವರಿ ತಿಂಗಳಲ್ಲಿ ರಸ್ತೆಗಿಳಿದಿತ್ತು. ಈ ಕಾರ್ ಇಕಾನಮಿಕ್ ಟೈಮ್ಸ್ ಝಿಗ್ ವೀಲ್ಸ್ ನವರ ವರ್ಷದ ಮಲ್ಟಿಪರ್ಫೋಸ್ ವಹಿಕಲ್ ಪ್ರಶಸ್ತಿಯನ್ನೂ ಪಡೆದಿತ್ತು. ಈಗ ಎರಡು ವರ್ಷ ಪೂರೈಸಿದ ಸಂಭ್ರಮದ ನೆನಪಿಗಾಗಿ "ಸೆಲೆಬ್ರೆಷನ್ ಅಡಿಷನ್" ಹೊರತರುವುದಾಗಿ ಹೇಳಿದೆ. ಕಂಪನಿ ಹೇಳುವ ಪ್ರಕಾರ ನೂತನ ಆವೃತ್ತಿ ಐಷಾರಾಮಿ ಮಲ್ಟಿಪರ್ಪೋಸ್ ವೆಹಿಕಲ್ ಆಗಿದ್ದು ಕೇವಲ 1 ಸಾವಿರ ಕಾರ್ ಗಳನ್ನು ಹೊರತರಲಾಗುವುದು ಎಂದು ಹೇಳಿದೆ.

ನೂತನ ಆವೃತ್ತಿಯನ್ನು ವಿಶೇಷವಾದ ಗ್ರಾಫಿಕ್ಸ್ ವಿನ್ಯಾಸದಲ್ಲಿ ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಝೈಲೊ ಕಾರ್ ಗಳಿಗೆ ಹೋಲಿಸಿದರೆ ನೂತನ ಕಾರ್ ಹೆಚ್ಚು ಆಕರ್ಷಕ ಕಾರಾಗಲಿದೆ. ಲ್ಯಾಪ್ ಟಾಪ್, ಫೋನ್ ಚಾರ್ಜರ್ ಮತ್ತು ಸಣ್ಣ ಸಾಧನಗಳನ್ನು ಬಳಕೆ ಮಾಡಲು ಸೂಕ್ತವಾಗುವಂತೆ ವಿಶೇಷ ಇನ್ ವರ್ಟರ್ ನ್ನು ಅಳವಡಿಸಲಾಗಿದೆ. ಇವೆಲ್ಲಕ್ಕಿಂತ ಪ್ರಮುಖವಾಗಿ ನೂತನ "ಸೆಲೆಬ್ರೆಷನ್ ಅಡಿಷನ್"ನಲ್ಲಿ ಹಲವು ಗಿಝ್ಮೊ, ಸುರಕ್ಷತಾ ಸಾಧನಗಳು ಮತ್ತು ಇ8 ಆವೃತ್ತಿಯಲ್ಲಿರುವಂತಹ ಸೀಟ್ ಹೊಂದಾಣಿಕೆ ಫೀಚರ್ ಳೂ ಸೇರಿವೆ. ನೂತನ ಕಾರಿಗೆ ದೆಹಲಿ ಎಕ್ಸ್ ಶೋರೂಂದ ದರ ಸುಮಾರು 9.06 ಲಕ್ಷ ರೂ.

More from DriveSpark

Article Published On: Friday, March 18, 2011, 17:03 [IST]
English summary
Xylo Car completed two years in the market. Mahindra has taken the lead in offering 'Celebration Edition' of Xylo. Celebration Edition Priced at Rs.9.06 lakh in Ex-showroom Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+