ಅಮಿತಾಬ್, ಅಂಬಾನಿ, ವಿಜಯ್ ಮಲ್ಯರ ನೆಚ್ಚಿನ ಕಾರ್ ಭಾರತಕ್ಕೆ..

ವೇಗದ ಆವೇಗಕ್ಕೆ, ದುಬಾರಿ ಸವಾರಿಗೆ, ಐಷಾರಾಮಿ ಪ್ರಯಾಣಕ್ಕೆ ಬುಗಾಟಿ, ಫೆರಾರಿ, ಲಂಬೋರ್ಗಿನಿ ಮತ್ತು ಫೋರ್ಷ್ ಕಾರ್ ಗಳು ಅನ್ವರ್ಥನಾಮಗಳು. ಇವುಗಳಿಗೆ ಪೈಪೋಟಿ ನೀಡಲು ಇಟಲಿಯಿಂದ ಮಸೆರೆಟಿ ಸ್ಪೋರ್ಟ್ಸ್ ಕಾರ್ ಶೀಘ್ರದಲ್ಲಿ ಭಾರತದ ರಸ್ತೆಗಿಳಿಯಲಿದೆ. ಭಾರತದ ಪಾಲುದಾರ ಕಂಪನಿಯೊಂದರ ಮೂಲಕ ಇಟಲಿಯಿಂದ ಮಸೆರಟಿ ಕಾರ್ ಗಳನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಆಮದು ಪ್ರಕ್ರಿಯೆ 2012ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ಮಸೆರೆಟಿ ಎಂಬುದು ಫಿಯೆಟ್ ನ ಪೇರೆಂಟ್ ಕಂಪನಿಯಾಗಿದೆ. ಮಸೆರೆಟಿ ಕಾರುಗಳನ್ನು ಕಂಪನಿಯು ಸುಮಾರು 75ಕ್ಕೂ ಹೆಚ್ಚು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ಈ ಕಾರ್ ಗಳು ಮೂರು ಮಾದರಿಗಳಲ್ಲಿ ದೊರಕುತ್ತಿದೆ. ಸುಮಾರು 5 ಕೋಟಿ ರೂಪಾಯಿಯ ಎರಡು ಸೀಟ್ ನ ಗ್ರ್ಯಾನ್ ಕ್ಯಾಬ್ರಿಯೊ, ಸುಮಾರು 3 ಕೋಟಿ ರೂ. ದರದ ಕ್ಯೂಟ್ರೊಪೋರ್ಟೆ ಸೆಡಾನ್ ಮತ್ತು ಗ್ರಾನ್ ಟೂರಿಸ್ಮೊ ಕೂಪ್ ಎಂಬ ಟಾಪ್ ಎಂಡದ ಸ್ಪೋರ್ಟ್ ಆವೃತ್ತಿ (4.75 ಕೋಟಿ ರೂ.) ಗಳನ್ನು ಕಂಪನಿ ಹೊರತರುತ್ತಿದೆ.


Click it and Unblock the Notifications








