ರಸ್ತೆ ತೆರಿಗೆ ಹೆಚ್ಚಳ, ಮಾರುತಿ ಸುಜುಕಿ ಕಳವಳ

ಈಗಾಗಲೇ ಚತ್ತಿಸ್ ಗಢ ಮತ್ತು ಹರ್ಯಾಣ ರಾಜ್ಯ ಸರಕಾರಗಳು ಕಳೆದ ತಿಂಗಳು ತೆರಿಗೆ ನೀತಿಯನ್ನು ಪರಿಷ್ಕರಿಸಿದ್ದವು. ಪಂಜಾಬ್ ನಲ್ಲೂ ರಸ್ತೆ ತೆರಿಗೆ ಶೀಘ್ರದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಚತ್ತಿಸ್ ಗಢದಲ್ಲಿ 6 ಲಕ್ಷ ರೂ.ವರೆಗಿನ ಕಾರ್ ಗಳಿಗೆ ಶೇಕಡ 2ರಷ್ಟು ರಿಜಿಸ್ಟ್ರೇಷನ್ ತೆರಿಗೆ ಹೆಚ್ಚು ಮಾಡಿದೆ. ಉಳಿದಂತೆ 6-8 ಲಕ್ಷ ರೂ.ವರೆಗಿನ ಕಾರ್ ಗಳಿಗೆ ಶೇ. 3ರಷ್ಟು, 20 ಲಕ್ಷ ರೂ.ಗಿಂತ ಹೆಚ್ಚು ಬೆಲೆಯ ಕಾರ್ ಗಳಿಗೆ ಶೇಕಡ 4ರಷ್ಟು ರಿಜಿಸ್ಟ್ರೇಷನ್ ತೆರಿಗೆ ದರಗಳನ್ನು ಹೆಚ್ಚಿಸಿದೆ.
ಹರ್ಯಾಣದಲ್ಲೂ 5 ಲಕ್ಷ ರೂ.ವರೆಗಿನ ಕಾರ್ ಗಳಿಗೆ ಶೇ. 2ರಷ್ಟು, 5ರಿಂದ 10 ಲಕ್ಷ ರೂ.ವರೆಗಿನ ಕರ್ ಗಳಿಗೆ ಶೇ. 4ರಷ್ಟು, 10ರಿಂದ 20 ಲಕ್ಷ ರೂ.ವರೆಗಿನ ಕಾರ್ ಗಳಿಗೆ ಶೇಕಡಾ 8ರಷ್ಟು ತೆರಿಗೆ ದರ ಹೆಚ್ಚು ಮಾಡಿವೆ. ಇಂತಹ ರಾಜ್ಯಗಳಲ್ಲಿ ಮಾರುತಿ 8 ಸಾವಿರಕ್ಕಿಂತ ಹೆಚ್ಚು ವಾಹನ ಮಾರಾಟ ಮಾಡುತ್ತಿದ್ದು, ತೆರಿಗೆ ದರ ಪರಿಷ್ಕೃತಗೊಂಡಿರುವುದರಿಂದ ಮಾರಾಟದಲ್ಲಿ ಹಿನ್ನಡೆಯಾಗುತ್ತಿರುವುದಾಗಿ ಹೇಳಲಾಗಿದೆ.
ಒಟ್ಟು ಮಾರುಕಟ್ಟೆಯಲ್ಲಿ ಕಂಪನಿಯ ಸಣ್ಣ ಕಾರ್ ಗಳು ಶೇಕಡಾ 75ರಷ್ಟು ಪಾರಮ್ಯ ಪಡೆದಿದ್ದು, ರಸ್ತೆ ತೆರಿಗೆ ಏರಿಕೆ ಕಂಡಿರುವುದರಿಂದ ಸಹಜವಾಗಿಯೇ ಮಾರಾಟದಲ್ಲಿ ಹಿನ್ನಡೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಇಂಧನ ದರ, ಬಡ್ಡಿದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ರಸ್ತೆ ತೆರಿಗೆ ಹೆಚ್ಚಳದ ಬರೆ ಹಾಕಲಾಗಿದೆ ಎಂದರು.


Click it and Unblock the Notifications








