ದೇಶದಲ್ಲೇ ನಮ್ಮ ರಾಜ್ಯದಲ್ಲಿ ಗರಿಷ್ಠ ರಸ್ತೆ ತೆರಿಗೆ

Written By:

ದೇಶದ ಇತರೆ ರಾಜ್ಯಗಳನ್ನು ಹೋಲಿಸಿದಾಗ ನಮ್ಮ ಕರ್ನಾಟಕದಲ್ಲಿ ಪ್ರಯಾಣಿಕ ಕಾರುಗಳಿಗೆ ಅತಿ ಹೆಚ್ಚು ರಸ್ತೆ ಸಾರಿಗೆ ಸಂಗ್ರಹಿಸಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಶೇಕಡಾ 10ಕ್ಕಿಂತಲೂ ಹೆಚ್ಚು ರಸ್ತೆ ತೆರಿಗೆ ಈಡು ಮಾಡಲಾಗುತ್ತಿದ್ದು, ತದಾ ಬಳಿಕ ನೆರೆಯ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಪ್ರಮಾಣದ ರಸ್ತೆ ತೆರಿಗೆ ಸಂಗ್ರಹಿಸಲಾಗುತ್ತಿದೆ.

ಅತಿ ಹೆಚ್ಚಿನ ಮಾರಾಟವಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಅಗ್ಗದ ಕಾರುಗಳಿಗೆ ಶೇಕಡಾ 4ರಿಂದ 8ರಷ್ಟು ಹಾಗೂ ಮಧ್ಯಮ ಗಾತ್ರದ ಕಾರುಗಳಿಗೆ ಶೇಕಡಾ 8ರಷ್ಟು ತೆರಿಗೆ ಸಂಗ್ರಹಿಸಲಾಗುತ್ತದೆ. ಹಾಗಿದ್ದರೂ ದೆಹಲಿ ಹಾಗೂ ರಾಜಸ್ತಾನಗಳಂತಹ ರಾಜ್ಯಗಳಲ್ಲಿ ಎಕ್ಸ್ ಶೋ ರೂಂ ಬೆಲೆ ಏರಿಕೆಯೊಂದಿಗೆ ರಸ್ತೆ ತೆರಿಗೆಯೂ ಏರಿಕೆಯಾಗುತ್ತಿದೆ ಎಂಬುದು ತಿಳಿದು ಬಂದಿದೆ.

To Follow DriveSpark On Facebook, Click The Like Button
road tax

ದೆಹಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಡೀಸೆಲ್ ಪ್ರಯಾಣಿಕ ಕಾರುಗಳಿಗೆ ಗರಿಷ್ಠ ತೆರೆಗಿ ವಿಧಿಸಲಾಗುತ್ತದೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಸಿಎನ್ ಜಿ ವಾಹನಗಳಿಗೆ ಕಡಿಮೆ ರಸ್ತೆ ತೆರಿಗೆಯಿದೆ. ಹಾಗೆಯೇ ಉತ್ತರ ಪೂರ್ವ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ರಸ್ತೆ ತೆರಿಗೆ ಕಂಡುಬಂದಿದೆ.

ಅಗ್ಗದ ಕಾರು (3ರಿಂದ 6 ಲಕ್ಷ ರು. ಪರಿಧಿ) - ರಸ್ತೆ ತೆರಿಗೆ (ಶೇಕಡಾ)

 • ಕರ್ನಾಟಕ - 14.43
 • ಪಶ್ಚಿಮ ಬಂಗಾಳ - 13.30
 • ಆಂಧ್ರ ಪ್ರದೇಶ - 12
 • ತಮಿಳುನಾಡು - 10
 • ಮಹಾರಾಷ್ಟ್ರ - 9
 • ಉತ್ತರ ಪ್ರದೇಶ - 8
 • ಮಧ್ಯ ಪ್ರದೇಶ - 7
 • ಪಂಜಾಜ್, ಬಿಹಾರ, ಚತ್ತೀಸಗಡ- 6

ಮಧ್ಯಮ ಗಾತ್ರದ ಕಾರು (6ರಿಂದ 10 ಲಕ್ಷ ರು. ಪರಿಧಿ) - ರಸ್ತೆ ತೆರಿಗೆ (ಶೇಕಡಾ)

 • ಕರ್ನಾಟಕ - 15.54
 • ಆಂಧ್ರ ಪ್ರದೇಶ - 12
 • ಪಶ್ಚಿಮ ಬಂಗಾಳ ಮತ್ತು ತಮಿಳುನಾಡು - 10
 • ಮಹಾರಾಷ್ಟ್ರ - 9
 • ಉ.ಪ್ರದೇಶ, ಕೇರಳ, ರಾಜಸ್ತಾನ - 8
 • ದೆಹಲಿ, ಬಿಹಾರ - 7

ಐಷಾರಾಮಿ ಕಾರುಗಳು (10ರಿಂದ 20 ಲಕ್ಷ ರು. ಪರಿಧಿ) - ರಸ್ತೆ ತೆರಿಗೆ (ಶೇಕಡಾ)

 • ಕರ್ನಾಟಕ - 18.87
 • ತಮಿಳುನಾಡು - 15
 • ಆಂಧ್ರ ಪ್ರದೇಶ - 14
 • ದೆಹಲಿ, ಪ.ಬಂಗಾಳ, ಕೇರಳ, ಮಹಾರಾಷ್ಟ್ರ, ರಾಜಸ್ತಾನ - 8
 • ಹರಿಯಾನ, ಉ.ಪ್ರದೇಶ - 8

ಅತ್ಯಂತ ಕಡಿಮೆ ರಸ್ತೆ ತೆರಿಗೆ (ಎಲ್ಲ ಬೆಲೆ ವಿಭಾಗದಲ್ಲಿ) - ಶೇಕಡ

 • ಸಿಕ್ಕಿಂ - 1
 • ತ್ರಿಪುರ - 1.5
 • ಮೇಘಾಲಯ - 2.5
 • ಮಿಜೋರಾಂ - 3
 • ಅರುಣಾಚಲ ಪ್ರದೇಶ - 3.5
 • ಚಂಡೀಗಡ - 4
English summary
Road tax on passenger vehicles is the highest in Karnataka, lowest in North East.
Story first published: Thursday, May 7, 2015, 6:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark