ಬಿಗ್ ಬಜಾರಿನಲ್ಲಾಯ್ತು, ಸಣ್ಣ ಪಟ್ಟಣದಲ್ಲೂ ನ್ಯಾನೊ ಮೋಡಿ

ಒಂದು ಮಾಡೆಲ್ ವಾಹನಕ್ಕಾಗಿ ಪ್ರತ್ಯೇಕ ಶೋರೂಂ ಸ್ಥಾಪನೆ ಕಾರ್ಯತಂತ್ರವನ್ನು ಕಂಪನಿ ಇದೇ ಮೊದಲು ಮಾಡುತ್ತಿಲ್ಲ. ತನ್ನ ಸಣ್ಣ ಟ್ರಕ್ "ಏಸ್" ಮಾರಾಟಕ್ಕೂ ಈ ಟ್ರಿಕ್ ಬಳಸಿತ್ತು. ದೇಶದಲ್ಲೀ ಈಗ ಅಂದಾಜು 600ರಷ್ಟು "ಏಸ್ ಓನ್ಲಿ" ಶೋರೂಂಗಳಿವೆ. ಇದೇ ಕಾರ್ಯತಂತ್ರದ ಮೂಲಕ ನ್ಯಾನೊ ಮಾರಾಟ ಹೆಚ್ಚಿಸಿಕೊಳ್ಳಲು ಟಾಟಾ ಮೋಟರ್ಸ್ ನಿರ್ಧರಿಸಿದೆ.
"ಸಣ್ಣ ಪಟ್ಟಣಗಳಲ್ಲಿ ಅಗ್ಗದ ನ್ಯಾನೊ ಕಾರಿಗಾಗಿ ಪ್ರತ್ಯೇಕ ಶೋರೂಂಗಳನ್ನು ತೆರೆಯಲಿದ್ದೇವೆ. ಇಲ್ಲಿ ನ್ಯಾನೊ ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗುವುದು" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಆದರೆ ಕಂಪನಿಯು ಯಾವಾಗ ಮತ್ತು ಎಷ್ಟು ಸಂಖ್ಯೆಯಲ್ಲಿ ಅಂತಹ ಶೋರೂಂಗಳನ್ನು ತೆರೆಯಲಿದೆ ಎಂಬ ಮಾಹಿತಿಯನ್ನು ವಕ್ತಾರರು ಬಹಿರಂಗಪಡಿಸಿಲ್ಲ. .
ಇತ್ತೀಚೆಗೆ ಕಂಪನಿಯು ಸಣ್ಣ ಕಾರನ್ನು ಆಯ್ದ ಬಿಗ್ ಬಜಾರ್ ಮಳಿಗೆಗಳಲ್ಲೂ ಖರೀದಿಸುವ ಅವಕಾಶ ನೀಡಿತ್ತು. "ಫ್ಯೂಚರ್ ಗ್ರೂಪ್ ನ ಬಿಗ್ ಬಜಾರ್ ನಲ್ಲೂ ನ್ಯಾನೊ ಕಾರುಗಳು ಮಾರಾಟವಾಗುತ್ತಿವೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ಕಳೆದ ವರ್ಷ ಸಣ್ಣ ಕಾರು ನ್ಯಾನೊದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗಳ ನಂತರ ಗ್ರಾಹಕರಿಂದ ಕಾರುಗಳನ್ನು ಹಿಂಪಡೆದು ಸುರಕ್ಷತೆಯ ಫೀಚರ್ ಗಳನ್ನು ಅಳವಡಿಸಿತ್ತು. ಕಳೆದ ವರ್ಷದ ಜನವರಿಯಲ್ಲಿ ಸುಮಾರು 5,784 ನ್ಯಾನೊ ಕಾರುಗಳು ಮಾರಾಟವಾಗಿವೆ. ಆದರೆ ಜನವರಿ ನಂತರ ಮಾರಾಟ ಗಮನಾರ್ಹ ಏರಿಕೆ ಕಾಣುತ್ತಿದೆ. 2011ರ ಜನವರಿಯಲ್ಲಿ ಸುಮಾರು 6,703 ಯುನಿಟ್, ಫೆಬ್ರವರಿಯಲ್ಲಿ 8,262 ಯುನಿಟ್ ಮತ್ತು ಮಾರ್ಚ್ ನಲ್ಲಿ ಸುಮಾರು 8,707 ನ್ಯಾನೊ ಕಾರುಗಳು ಮಾರಾಟವಾಗಿವೆ.
ಕಳೆದ ವರ್ಷ ನವೆಂಬರ್ ನಲ್ಲಿ ನ್ಯಾನೊ ಮಾರಾಟ ಕೇವಲ 509 ಯುನಿಟ್ ಮಾರಾಟವಾಗಿತ್ತು. ಮತ್ತೆ ಪುಟ್ಟ ಕಾರಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಟಾಟಾ ಮೋಟರ್ಸ್ ಖುಷಿಗೊಂಡಿದ್ದು, ವಿವಿಧ ಕಾರ್ಯತಂತ್ರಗಳ ಮೂಲಕ ಮಾರಾಟ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ.


Click it and Unblock the Notifications








