ಸಣ್ಣ ಏಸ್ ಝಿಪ್, ಐರಿಸ್: ಟಾಟಾ ಮ್ಯಾಜಿಕ್

Tata Motors
ಮುಂಬೈ, ಮೇ 11: ಒಂದು ಪುಟ್ಟ ಟ್ರಕ್. ಎಷ್ಟು ಪುಟ್ಟದೆಂದರೆ ಇದರಲ್ಲಿ ಒಂದು ಕ್ವಿಂಟಲ್ ಅಕ್ಕಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಮತ್ತೊಂದು ಐರಿಷ್ ಎಂಬ ಆಕರ್ಷಕ ವ್ಯಾನ್. ಇದರಲ್ಲಿ ದೂರದೂರಿಗೆ ಟ್ರಿಪ್ ಹೋಗಬಹುದು. ಅಥವಾ ಸಾರ್ವಜನಿಕ ಸಾರಿಗೆ ವಾಹನವನ್ನಾಗಿ ಬಳಸಬಹುದು. ಟಾಟಾ ಮೋಟರ್ಸ್ "ಟಾಟಾ ಮ್ಯಾಜಿಕ್ ಐರಿಸ್" ಎಂಬ ಕ್ಯಾರಿಯರ್ ಮತ್ತು ಟಾಟಾ ಏಸ್ ಝಿಪ್ ಎಂಬ ಮೈಕ್ರೊ ಟ್ರಕನ್ನು ಹೊರತಂದಿದೆ.

ಟಾಟಾ ಮ್ಯಾಜಿಕ್ ಐರಿಸ್ ಎಂಬುದು ಸಣ್ಣ ಕ್ಯಾರಿಯರ್. ವಿನ್ಯಾಸ ಮಾರುತಿ ಓಮ್ನಿಯಂತಿದೆ. ರಿಕ್ಷಾದಂತೆ ಇದನ್ನು ಸಾರ್ವಜನಿಕ ಸಾರಿಗೆಯಾಗಿ ಬಳಸಬಹುದು. ಅತ್ಯುತ್ತಮ ಪವರ್ ಮತ್ತು ಪಿಕ್ ಅಪ್ ನೀಡುವುದರಿಂದ ಇದರಲ್ಲಿ ದೂರದೂರಿಗೆ ಪ್ರವಾಸ ಸಹ ಕೈಗೊಳ್ಳಬಹುದು. ಐರಿಸ್ ಕ್ಯಾರಿಯರ್ ಗೆ ಮಂಬೈ ಎಕ್ಸ್ ಶೋರೂಂ ದರ ಸುಮಾರು 1.95 ಲಕ್ಷ ರು.

"ಐರಿಸ್" 611 ಸಿಸಿ ವಾಟರ್ ಕೂಲ್ಡ್ ಎಂಜಿನ್ ಹೊಂದಿದ್ದು 11 ಹಾರ್ಸ್ ಪವರ್ ನೀಡುತ್ತದೆ. "ಐರಿಸ್" ಡಬಲ್ ಶೀಟ್ ಡೋರ್ ಹೊಂದಿರುವುದರಿಂದ ಹೆಚ್ಚು ಸುರಕ್ಷತೆಯ ವ್ಯಾನ್ ಆಗಿದೆ. ಮಳೆ, ಧೂಳು ಮತ್ತು ಬಿಸಿಯಿಂದ ಸಂಪೂರ್ಣ ಮುಕ್ತವಾಗಿರುವುದಾಗಿ ಕಂಪನಿ ಹೇಳಿದೆ. ವಿಶಾಲವಾದ ಡೋರ್ ಗಳು, ಆರಾಮದಾಯಕ ಸೀಟ್ ಗಳು, ಹೆಚ್ಚಿನ ಸ್ಥಳವಕಾಶ, ಸೀಟ್ ಬೆಲ್ಟ್ ಇತ್ಯಾದಿ ಫೀಚರ್ ಗಳು ಇದರಲ್ಲಿವೆ. ಸ್ಮೂತಾಗಿ ಇದರಲ್ಲಿ ರೈಡ್ ಮಾಡಬಹುದಾಗಿದೆ.

ಟಾಟಾ ಏಸ್ ಝಿಪ್ ಸಣ್ಣ ಟ್ರಕ್ ಆಗಿದೆ. ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್ ಹೊಂದಿದ್ದು ಸುಮಾರು 11 ಅಶ್ವಶಕ್ತಿ ನೀಡುತ್ತದೆ. ಇದು ಆಕರ್ಷಕ ಸ್ಟೇರಿಂಗ್, ಆರಾಮದಾಯಕ ಸೀಟ್ ಹೊಂದಿದೆ. ಇದರ ಕ್ಯಾಬಿನ್ ಸ್ಥಳಾವಕಾಶ ಹೆಚ್ಚಿದೆ. ಸಣ್ಣಪುಟ್ಟ ಬಿಸಿನೆಸ್ ಮಾಡುವರಿಗೆ ಏಸ್ ಝಿಪ್ ಸೂಕ್ತ ಟ್ರಕ್ ಆಗಿದೆ ಎಂದು ಕಂಪನಿ ಹೇಳಿದೆ. ಇದರ ಮುಂಬೈ ಶೋರೂಂ ದರ 1.90 ಲಕ್ಷ ರು.

More from DriveSpark

Article Published On: Wednesday, May 11, 2011, 11:29 [IST]
English summary
Tata Motors today launched the Tata Magic IRIS a 3-4 seater four-wheel passenger vehicle and the Tata Ace Zip micro-truck. Tata Motors has said the Magic IRIS would be an ideal alternative for people travelling in three wheelers. The Ace Zip is being touted as an advanced micro-truck capable of a carrying a payload of 600kg.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+