ಹೋಂಡಾ ಸಿಟಿಯನ್ನು ಓವರ್ ಟೆಕ್ ಮಾಡಿದ ವೆಂಟೊ!!

VW Vento
ಫೋಕ್ಸ್ ವ್ಯಾಗನ್ ವೆಂಟೊ ರಸ್ತೆಗಿಳಿದು ಕೇವಲ ಎಂಟು ತಿಂಗಳು ಕಳೆದಿರುವುದಷ್ಟೇ. ಕಳೆದ ಹಲವು ವರ್ಷಗಳಿಂದ ರಸ್ತೆಯಲ್ಲಿ ಮಿಂಚುತ್ತಿದ್ದ ಹೋಂಡಾ ಸಿಟಿಯನ್ನು ಓವರ್ ಟೆಕ್ ಮಾಡಿ ವೆಂಟೊ ಮುಂದಡಿಯಿಟ್ಟಿದೆ.

ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯು ಸುಮಾರು 6,839 ವೆಂಟೊ ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಇದೇ ಅವಧಿಯಲ್ಲಿ ಹೋಂಡಾ ಸಿಟಿ ಕೇವಲ 4,315 ಯುನಿಟ್ ಮಾರಾಟವಾಗಿದೆ.

ಮಧ್ಯಮ ಗಾತ್ರದ ಸೆಗ್ಮೆಂಟ್ ನಲ್ಲಿ ಬಂದ ವೆಂಟೊ ಕಾರು ಬಡವರ ಮರ್ಸಿಡಿಸ್ ಬೆಂಝ್ ಕಾರೆಂದು ಜನಪ್ರಿಯಗೊಂಡಿದೆ. ನೂತನ ಜರ್ಮನ್ ತಂತ್ರಜ್ಞಾನ, ಪೆಟ್ರೊಲ್ ದರಕ್ಕಿಂತ ಶೇ. 40ರಷ್ಟು ಡೀಸಲ್ ದರವಿರುವುದು ಹೀಗೆ ಸಿಟಿಯನ್ನು ಹಿಂದಿಕ್ಕಲು ವೆಂಟೊ ಕಾರಿಗೆ ಹಲವು ವಿಷಯಗಳು ನೆರವಾಗಿವೆ.

ಫೋಕ್ಸ್ ವ್ಯಾಗನ್ ಕಳೆದ ಎರಡು ವರ್ಷಗಳಲ್ಲಿ ದೇಶದ ವಾಹನ ಮಾರುಕಟ್ಟೆಯನ್ನು ಸಾಕಷ್ಟು ಹಿಡಿತಕ್ಕೆ ತೆಗೆದುಕೊಂಡಿದೆ. ದೇಶದ ರಸ್ತೆಯಲ್ಲಿ ಮಧ್ಯಮ ಗಾತ್ರದ ವಾಹನ ಮಾರುಕಟ್ಟೆಯಲ್ಲಿ ನಾಲ್ಕು ಕಾರುಗಳು ಹೆಚ್ಚು ಮುಂಚೂಣಿಯಲ್ಲಿವೆ. ಪೊಲೊ ಹ್ಯಾಚ್ ಬ್ಯಾಕ್, ವೆಂಟೊ, ಜೆಟ್ಟಾ ಮತ್ತು ಟೊಯೊಟಾ ಕೊರೊಲಾ ಹೆಚ್ಚು ಬೇಡಿಕೆಯಲ್ಲಿವೆ.

ಇದರಲ್ಲಿ ಫೋಕ್ಸ್ ವ್ಯಾಗನ್ ಪಸ್ಸಾಟ್ ಐಷಾರಾಮಿ ಕಾರಾಗಿದೆ. ದೇಶದ ಒಟ್ಟಾರೆ ಕಾರು ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಶೇ. 2ರಷ್ಟು ಪಾಲು ಪಡೆದೆದೆ. ಕಳೆದ ವರ್ಷ ಕಂಪನಿಯ ಮಾರಾಟ ಶೇ. 30ರಷ್ಟು ಏರಿಕೆ ಕಂಡಿತ್ತು.

More from DriveSpark

Article Published On: Friday, May 20, 2011, 13:05 [IST]
English summary
In mid-size segment VW Vento overtakes Honda City. VW managed to sell 6,839 Ventos in March and April; Honda could sell 4,315 Citys in that period.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+