ಬಹುನಿರೀಕ್ಷಿತ ರೆನಾಲ್ಟ್ ಫ್ಲೂಯೆನ್ಸ್ ಸೆಡಾನ್ ಕಾರು ರಸ್ತೆಗೆ

ನೂತನ ಫ್ಲೂಯೆನ್ಸ್ ಕಾರು 1.5 ಲೀಟರ್ ವಿ4 ಡೀಸಲ್ ಎಂಜಿನ್ ಎಂಜಿನ್ ಮತ್ತು 2.0 ಮಲ್ಟಿ ಪಾಯಿಂಟ್ ಪೆಟ್ರೊಲ್ ಇಂಜೆಕ್ಷನ್ ಎಂಜಿನ್ ನಲ್ಲಿ ದೊರಕುತ್ತಿದೆ. ಡೀಸಲ್ ಆವೃತ್ತಿಯಲ್ಲಿ 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಮತ್ತು ಪೆಟ್ರೊಲ್ ಆವೃತ್ತಿಯಲ್ಲಿ 6 ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.
ಫ್ಲೂಯೆನ್ಸ್ ಕಾರು ಆಕರ್ಷಕವಾಗಿದ್ದು ಹಲವು ಫೀಚರ್ ಗಳೊಂದಿಗೆ ಬಂದಿದೆ. ಬಾಗಿರುವ ಸ್ಟೇರಿಂಗ್ ಮತ್ತು ಟೆಲಿಸ್ಕೋಪಿಕ್ ಫೀಚರ್ ಇಷ್ಟವಾಗುವಂತಿದೆ. ಬ್ಲೂಟೂಥ್ ಕನೆಕ್ಟಿವಿಟಿ, ಸ್ಮಾರ್ಟ್ ಆಕ್ಸೆಸ್ ಸಾಧನ, ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಮಾಡುವ ಸ್ವಯಂಚಾಲೀತ ಕೀ, ಡ್ಯೂಯಲ್ ಏರ್ ಬ್ಯಾಗ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಇತ್ಯಾದಿ ಫೀಚರ್ ಗಳಿವೆ.
ಆರಾಮದಾಯಕತೆ ವಿಷಯದಲ್ಲೂ ಫ್ಲೂಯೆನ್ಸ್ ಕಡಿಮೆಯೇನಿಲ್ಲ. ಐಷಾರಾಮಿ ಇಂಟಿರಿಯರ್, ಸ್ಟೋರೆಜ್ ಬಾಕ್ಸ್, ಟೀಕಪ್ ಹೋಲ್ಡರ್ ಸೇರಿದಂತೆ ಹಲವು ಅನುಕೂಲತೆಗಳಿವೆ. ಅಲಾಯ್ ವೀಲ್ ಕಾರಿಗೆ ಸೆಕ್ಸಿ ಲುಕ್ ನೀಡುತ್ತದೆ.
ನೂತಕ ರೆನಾಲ್ಟ್ ಫ್ಲೂಯೆನ್ಸ್ ಹೋಂಡಾ ಸಿವಿಕ್, ಸ್ಕೋಡಾ ನ್ಯೂ ಲ್ಯೂರಾ, ಟೊಯೊಟಾ ಕೊರೊಲಾ ಆಲ್ಟಿಸ್, ಷೆವರ್ಲೆ ಕ್ರೂಜ್, ಫೋಕ್ಸ್ ವ್ಯಾಗನ್ ಜೆಟ್ಟಾ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಿದೆ.


Click it and Unblock the Notifications








