ಟಾಟಾ ನ್ಯಾನೊ ಶ್ರೀಲಂಕಾ ಸವಾರಿಗೆ ಸಜ್ಜು

ಮುಂದಿನ ಜೂನ್ ತಿಂಗಳಲ್ಲಿ ಆರಂಭಿಕವಾಗಿ 500 ನ್ಯಾನೊ ಕಾರುಗಳನ್ನು ರಫ್ತು ಮಾಡಲು ಟಾಟಾ ಮೋಟರ್ಸ್ ಯೋಜಿಸಿದೆ. ನಂತರ ಪ್ರತಿತಿಂಗಳು 200 ಕಾರುಗಳನ್ನು ರಫ್ತು ಮಾಡಲು ನಿರ್ಧರಿಸಿದೆ.
ತನ್ನ ಅಗ್ಗದ ದರದಿಂದಾಗಿ ನ್ಯಾನೊ ಜಾಗತಿಕವಾಗಿ ಒಂದಿಷ್ಟು ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಸಣ್ಣ ಕಾರುಗಳಿಗೆ ಬೇಡಿಕೆ ಹೆಚ್ಚಿರುವ ದೇಶಗಳತ್ತ ಕಂಪನಿಯು ಮುಖ ಮಾಡುತ್ತಿದೆ.
ಆಯಾ ದೇಶದ ಅಗತ್ಯಗಳಿಗೆ ತಕ್ಕಂತೆ ಕಾರುಗಳನ್ನು ಪರಿಷ್ಕರಿಸುವ ಅವಶ್ಯಕತೆಯಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಗೆ ನ್ಯಾನೊ ರಫ್ತು ಒಂದಿಷ್ಟು ವಿಳಂಬವಾಗುತ್ತಿದೆ. ಶ್ರೀಲಂಕಾದಲ್ಲಿ ನ್ಯಾನೊ ಕಾರುಗಳ ದರವೆಷ್ಟಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


Click it and Unblock the Notifications








