ಗುಜರಾತಿನಲ್ಲಿ ಮಾರುತಿ ಘಟಕ, ಮೋದಿ ಜೊತೆ ಮಾತುಕತೆ

Maruti Suzuki MD meets Modi
ಗುಜರಾತ್, ಮೇ 30: ಗುಜರಾತಿನಲ್ಲಿ ಹೊಸ ಕಾರು ಘಟಕವೊಂದನ್ನು ನಿರ್ಮಿಸಲು ಮಾರುತಿ ಸುಜುಕಿ ಯೋಜಿಸಿದೆ. ಈ ಕುರಿತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಿಂಝೊ ನಕನಶಿ ಇಂದು ಮಾತುಕತೆ ನಡೆಸಿದ್ದಾರೆ.

ಮಾರುತಿ ಸುಜುಕಿ ಗುಜರಾತಿನಲ್ಲಿ ಘಟಕ ತೆರೆಯಲಿದೆ ವದಂತಿಗೆ ಇಂದು ತೆರೆ ಬಿದ್ದಿದೆ. ಘಟಕ ನಿರ್ಮಾಣಕ್ಕೆ ಗುಜರಾತ್ ಸರಕಾರವು ಸುಮಾರು 500 ಎಕರೆ ಭೂಮಿ ನೀಡಲು ಸಮ್ಮತಿಸಿದೆ.

"ಘಟಕಕ್ಕೆ ಭೂಮಿ ಪಡೆಯಲು ಸುಮಾರು 3 ತಿಂಗಳು ಹಿಡಿಯಲಿದೆ. ನೂತನ ಘಟಕಕ್ಕೆ ಸುಮಾರು 6 ಸಾವಿರ ಕೋಟಿ ರು. ಹೂಡಿಕೆ ಮಾಡಲಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಚೇರ್ಮನ್ ಆರ್. ಸಿ. ಭಾರ್ಗವ ಹೇಳಿದ್ದಾರೆ.

ಗುಜರಾತಿನ ಶಾನಂದ್ ಎಂಬಲ್ಲಿ ಕಂಪನಿ ಘಟಕ ನಿರ್ಮಿಸುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ. ಇದು ಟಾಟಾ ನ್ಯಾನೊ ಘಟಕಕ್ಕೆ ಹತ್ತಿರದ ಸ್ಥಳವಾಗಿದೆ.

More from DriveSpark

Article Published On: Tuesday, May 31, 2011, 16:53 [IST]
English summary
Maruti Suzuki India's (MSIL) Managing Director Shinzo Nakanishi met Gujarat chief minister Narendra Modi to discuss the car maker's plans to build a new car plant in Gujarat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+