ವಾಹನ ಆಮದು ಸುಂಕ ಇಳಿಕೆ ಮಾಡಿ: ರತನ್ ಟಾಟಾ

ಮುಕ್ತ ವ್ಯಾಪಾರ ಒಪ್ಪಂದದಲ್ಲಿ ವಾಹನಗಳ ಮೇಲಿನ ಆಮದು ಸಂಕ ತಗ್ಗಿಸುವ ಪ್ರಸ್ತಾಪಕ್ಕೆ ದೇಶದ ವಾಹನ ಕಂಪನಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಾಗಿ ರತನ್ ಟಾಟಾ ಅವರ ಈ ನಿಲುವು ಅಚ್ಚರಿ ಮೂಡಿಸುವಂತಿದೆ. ಆದರೆ ಆಮದು ಸುಂಕ ಕಡಿಮೆ ಮಾಡಿದರೆ ಭಾರತಕ್ಕೆ ರಾಶಿ ರಾಶಿ ಬಿಡಿಭಾಗ ತಂದು ಸುರಿಯಬಹುದೆಂದು ದೇಶಿ ಕಂಪನಿಗಳು ಅಭಿಪ್ರಾಯಪಟ್ಟಿವೆ.
ಆದರೆ ಆಮದು ಸುಂಕ ಕಡಿಮೆ ಮಾಡುವುದರಿಂದ ವಿದೇಶಿ ಮಾರುಕಟ್ಟೆಯಿಂದ ಅಗ್ಗದ ದರದಲ್ಲಿ ಬಿಡಿಭಾಗ ಆಮದು ಮಾಡಿಕೊಳ್ಳಲು ಸಾಧ್ಯ ಎಂದು ಟಾಟಾ ಅಭಿಪ್ರಾಯ. ಈಗ ಪೂರ್ಣ ಪ್ರಮಾಣದ ವಾಹನ ಆಮದಿಗೆ ಮಾರಾಟ ತೆರಿಗೆ, ವ್ಯಾಟ್ ಮತ್ತು ಇತರ ತೆರಿಗೆಗಳು ಸೇರಿ ಶೇ. 110ರಷ್ಟು ತೆರಿಗೆ ಪಾವತಿಸಬೇಕಿದೆ.
ಈಗ ಮಹೀಂದ್ರ ಆಂಡ್ ಮಹೀಂದ್ರ ಮತ್ತು ಟಾಟಾ ಮೋಟರ್ಸ್ ಹೊರತುಪಡಿಸಿ ಎಲ್ಲಾ ಕಂಪನಿಗಳು ಅಧಿಕ ಸುಂಕ ಪಾವತಿಸಿ ವಿದೇಶದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಈ ಚಿತ್ರಣ ಬದಲಾಗಬೇಕಾದರೆ ಆಮದು ಸುಂಕ ಕಡಿತ ಮಾಡಲೇಬೇಕು ಎಂದು ರತನ್ ಟಾಟಾ ಹೇಳುತ್ತಾರೆ.


Click it and Unblock the Notifications








