ಜಾಗತಿಕವಾಗಿ ಹೆಚ್ಚಿದ ಟಾಟಾ ಮೋಟರ್ಸ್ ಆಟ

ಕಂಪನಿಯು ಸುಮಾರು 22,296 ಜಾಗ್ವಾರ್ ಲ್ಯಾಂಡ್ ರೋವರ್ ಮಾರಾಟ ಮಾಡಿದ್ದು ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 17ರಷ್ಟು ಏರಿಕೆ ಕಂಡಿದೆ. ಲ್ಯಾಂಡ್ ರೋವರ್ ಮಾರಾಟ 18,075 ಯೂನಿಟ್ ಗೆ ತಲುಪಿದ್ದು ಶೇ. 30ರಷ್ಟು ಹೆಚ್ಚಾಗಿದೆ. 2011ರ ಮೇ ತಿಂಗಳಿನಲ್ಲಿ ಒಟ್ಟಾರೆ ಪ್ರಯಾಣಿಕ ವಾಹನ ಮಾರಾಟ 44,181 ಯುನಿಟ್ ಗೆ ತಲುಪಿ ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ. 2ರಷ್ಟು ಹೆಚ್ಚಳವಾಗಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ. 20ರಷ್ಟು ಏರಿಕೆ ಕಂಡಿದೆ.


Click it and Unblock the Notifications








