ಜೂನ್ ತಿಂಗಳಲ್ಲಿ ಟಾಟಾ ಜಾಗತಿಕ ಮಾರಾಟ ಇಳಿಕೆ

Land Rover
ನವದೆಹಲಿ, ಜೂನ್ 15: ಜೂನ್ ತಿಂಗಳಲ್ಲಿ ಟಾಟಾ ಮೋಟರ್ಸ್ ಜಾಗತಿಕ ವಾಹನ ಮಾರಾಟ 89,846 ಯೂನಿಟ್ ಗೆ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳ 90,702 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 1ರಷ್ಟು ಇಳಿಕೆ ಕಂಡಿದೆ.

ಕಳೆದ ತಿಂಗಳು ಕಂಪನಿಯು 20,358 ಐಷಾರಾಮಿ ಕಾರು ಬ್ರಾಂಡ್ ಜಾಗ್ವಾರ್ ಲ್ಯಾಂಡ್ ರೋವರ್ ಮಾರಾಟ ಮಾಡಿದೆ. ಕಳದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ ಒಂದರಷ್ಟು ಏರಿಕೆ ಕಂಡಿದೆ ಎಂದು ಟಾಟಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ ಇದೇ ತಿಂಗಳಲ್ಲಿ ಐಷಾರಾಮಿ ಸೆಡಾನ್ ಜಾಗ್ವಾರ್ 4,038 ಯೂನಿಟ್ ಮಾರಾಟವಾಗಿದ್ದು ಕಳೆದ ವರ್ಷದ ಜೂನ್ ಮಾರಾಟಕ್ಕೆ ಹೋಲಿಸಿದರೆ ಶೇ. 40ರಷ್ಟು ಇಳಿಕೆ ದಾಖಲಿಸಿದೆ. ಇದೇ ಸಮಯದಲ್ಲಿ ಕಂಪನಿಯು ಸುಮಾರು 16,320 ಲ್ಯಾಂಡ್ ರೋವರ್ ಕಾರುಗಳನ್ನು ಮಾರಾಟ ಮಾಡಿದ್ದು ಶೇ. 22ರಷ್ಟು ಏರಿಕೆ ದಾಖಲಿಸಿದೆ.

2011 ಜೂನ್ ತಿಂಗಳಲ್ಲಿ ಕಂಪನಿಯು ಒಟ್ಟು 44,561 ಯೂನಿಟ್ ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯ ಮಾರಾಟಕ್ಕೆ ಹೋಲಿಸಿದರೆ ಪ್ರಯಾಣಿಕ ಕಾರುಗಳ ಮಾರಾಟ ಶೇ. 12ರಷ್ಟು ಇಳಿಕೆ ಕಂಡಿದೆ. ಇದೇ ಸಮಯದಲ್ಲಿ ಕಂಪನಿಯು 45,285 ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಜೂನ್ ಮಾರಾಟಕ್ಕಿಂತ ಶೇ. 12ರಷ್ಟು ಏರಿಕೆ ಕಂಡಿದೆ.

More from DriveSpark

Article Published On: Friday, July 15, 2011, 16:02 [IST]
English summary
Tata Motors today said its global sales declined nearly one per cent in June to 89,846 units as against 90,702 units in the same month last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+