ಹಿಂದೂಸ್ತಾನ್ ಮೋಟರ್ಸ್ ನಿಂದ ಹೊಸ ಅಂಬಾಸಡರ್?

ಈ ರೋಡ್ ಶೋನಲ್ಲಿ ಕ್ಲಾಸಿಕ್ ಅಂಬಾಸಡರ್ ಕಾರುಗಳನ್ನು ಪ್ರದರ್ಶಿಸಲಾಯಿತು. ಈ ಹದಿನೈದು ದಿನಗಳ ಅಂಬಾಸಡರ್ ಅಭಿಯಾನ ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ಮತ್ತು ಬಿಹಾರಗಳಲ್ಲಿ ನಡೆಯಲಿದೆ. ಇಂತಹ ರೋಡ್ ಶೋ ಉತ್ತರ ಭಾರತ ಮಾತ್ರವಲ್ಲದೇ ದಕ್ಷಿಣ ಭಾರತಕ್ಕೂ ಆಗಮಿಸಲಿದೆ. ಹೀಗಾಗಿ ಬೆಂಗಳೂರು ರಸ್ತೆಯಲ್ಲೂ ಅಂಬಾಸಡರ್ ಅಭಿಯಾನವನ್ನು ನಿರೀಕ್ಷಿಸಬಹುದಾಗಿದೆ.
"ಕಂಪನಿಯ ಕಾರ್ಯತಂತ್ರಗಳಲ್ಲಿ ಇನ್ನಷ್ಟು ಅಂಬಾಸಡರ್ ಕಾರುಗಳಿವೆ. ಅದರಲ್ಲಿ ಶೀಘ್ರದಲ್ಲಿ ಸಣ್ಣದಾದ ಅಂಬಾಸಡರ್ ಕಾರು ಕೂಡ ಸೇರಿದೆ. ನೂತನ ಕಾರುಗಳಿಗಾಗಿ ಕಂಪನಿಯು ಸಾಕಷ್ಟು ಸಂಶೋಧನೆ ಮತ್ತು ವಿನ್ಯಾಸಗಳನ್ನು ಮಾಡುತ್ತಿದೆ" ಎಂದು ಹಿಂದೂಸ್ತಾನ್ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಝಾ ಹೇಳಿದ್ದಾರೆ.


Click it and Unblock the Notifications








