ಹರ್ಲಿ ಡೇವಿಡ್ ಸನ್ ಬೈಕ್ ಖರೀದಿಸಿದ ಹೈದರಾಬಾದ್ ಮಹಿಳೆ

Harley Davidson
ನವದೆಹಲಿ, ಜುಲೈ 20: ಅಮೆರಿಕದ ಐಕಾನಿಕ್ ಬೈಕ್ ತಯಾರಿಕಾ ಕಂಪನಿ ಹರ್ಲಿ ಡೇವಿಡ್ ಸನ್ ಬೈಕ್ ದೇಶದ ಮಹಿಳೆಯರನ್ನು ಸೆಳೆಯುತ್ತಿದೆ. ಕಳೆದ ತಿಂಗಳು ಬೆಂಗಳೂರಿನ ಮಹಿಳೆಯೊಬ್ಬರು ಹರ್ಲಿ ಡೇವಿಡ್ ಸನ್ ಖರೀದಿಸಿದ್ದರು. ಇವರು ಹರ್ಲಿ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ ಖ್ಯಾತಿಗೆ ಪಾತ್ರರಾಗಿದ್ದರು.

ಇದೀಗ ಹೈದರಾಬಾದಿನ ಮಹಿಳೆಯೊಬ್ಬರು ಹರ್ಲಿ ಡೇವಿಡ್ ಸನ್ ಬೈಕ್ ಖರೀದಿಸಿದ್ದಾರೆ. ಕಂಪನಿಯು ದೇಶದ ಇನ್ನಷ್ಟು ಮಹಿಳೆಯರ ಮೇಲೆ ಕಣ್ಣು ಹಾಕಿದೆ. ಹೈದರಾಬಾದಿನ ಆರ್ಕಿಟೆಕ್ಟ್ ಕಸ್ತೂರಿ ದಿಯೋಧರ್(33) ಹರ್ಲಿ ಬೈಕ್ ಖರೀದಿಸಿದ ಎರಡನೇ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಹರ್ಲಿ ಡೇವಿಡ್ ಸನ್ ಖರೀದಿಸಿದ ಕಸ್ತೂರಿ ಕುರಿತು ಅಚ್ಚರಿ ಪಡಬೇಕೆಂದಿಲ್ಲ. ಯಾಕೆಂದರೆ ಬೆಂಗಳೂರಿನ ಮ್ಯಾಥ್ಯುಸ್ ನಂತೆ ಇವರು ಕೂಡ ಬಾಲ್ಯದಿಂದಲೇ ಬೈಕ್ ಕ್ರೇಝ್ ಬೆಳೆಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಕಸ್ತೂರಿ ದಿಯೋಧರ್ ಯಮಹಾ ರಾಜ್ ದೂತ್ 350 ಬೈಕನ್ನು ಬಳಸುತ್ತಿದ್ದರು. ಇದಕ್ಕೂ ಮುನ್ನ ಬಜಾಜಿನ ಎಲಿಮಿನೇಟರ್ ಬೈಕನ್ನು ಬಳಸುತ್ತಿದ್ದರು. ಇದೀಗ ಇವರ ಬಳಿ ಬಂದಿರುವುದು ಹರ್ಲಿ ಡೇವಿಡ್ ಸನ್ ಐರನ್ ಬೈಕ್.

"ದೇಶದ ಇನ್ನಷ್ಟು ಮಹಿಳೆಯರು ಹರ್ಲಿ ಡೇವಿಡ್ ಸನ್ ಬೈಕ್ ಖರೀದಿಸಲಿದ್ದಾರೆ ಎಂದು ಖಚಿತವಾಗಿ ಹೇಳಬಲ್ಲೆ. ನಾನು ಈ ಬೈಕ್ ಖರೀದಿಸಿದ್ದು ಉಳಿದ ಮಹಿಳೆಯರಿಗೆ ಸ್ಪೂರ್ತಿಯಾದರೆ ನಾನು ಸಂತೋಷ ಪಡುತ್ತೇನೆ" ಎಂದು ಕಸ್ತೂರಿ ಹೇಳಿದ್ದಾರೆ.

"ನಮಗೂ ಸಂತೋಷವಾಗಿದೆ. ಹರ್ಲಿ ಡೇವಿಡ್ ಸನ್ ಬೈಕ್ ಲಿಂಗ ಮತ್ತು ವಯಸ್ಸಿನ ಅಂತರವಿಲ್ಲದೇ ಇಲ್ಲಿನ ಜನರಿಗೆ ಇಷ್ಟವಾಗುತ್ತಿದೆ. ಇನ್ನಷ್ಟು ಮಹಿಳೆಯರು ಬೈಕ್ ಖರೀದಿಸುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದೇವೆ" ಎಂದು ಹರ್ಲಿ ಡೇವಿಡ್ ಸನ್ ಇಂಡಿಯಾ ನಿರ್ದೇಶಕರಾದ ಸಂಜಯ್ ತ್ರಿಪಾಠಿ ಹೇಳಿದ್ದಾರೆ.

"ಅಮೆರಿಕದಲ್ಲಿ 650 ಸಿಸಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುವ ಕಂಪನಿಯ ಬೈಕುಗಳನ್ನು ಮಹಿಳೆಯರು ಖರೀದಿಸುತ್ತಾರೆ. ಈ ಟ್ರೆಂಡ್ ನಿಧಾನವಾಗಿ ಭಾರತಕ್ಕೂ ಬರಲಿದೆ" ಎಂದು ಅವರು ಹೇಳಿದ್ದಾರೆ. ದೆಹಲಿ ಎಕ್ಸ್ ಶೋರೂಂ 6.5 ಲಕ್ಷ ರು. ದರದ ನೂತನ ಹರ್ಲಿ ಡೇವಿಡ್ ಸನ್ ಬೈಕನ್ನು ಕಸ್ತೂರಿಗೆ ಅವರ ಪತಿ ಉಡುಗೊರೆಯಾಗಿ ನೀಡಿದ್ದಾರಂತೆ.

More from DriveSpark

Article Published On: Wednesday, July 20, 2011, 11:36 [IST]
English summary
Harley Davidson seems to be making the right moves to woo Indian women. Within a month of having its first woman buyer in the country, it has added a second one and is eyeing many more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+