ಚಿನ್ನದ ಬಣ್ಣದ ಜ್ಯೋತಿಷ್ಯ, ಬೆಳ್ಳಿಮೋಡದ ರಹಸ್ಯ

ಸಿಲ್ವರ್: ಬೆಳ್ಳಿಬಣ್ಣದ ಕಾರು ನಿಮ್ಮದಾಗಿರಬಹುದು. ನೀವು ಬಹುಸಂಖ್ಯಾತರು. ಅಂದ್ರೆ ಹೆಚ್ಚು ಜನರಿಗೆ ಸಿಲ್ವರ್ ಬಣ್ಣದ ಕಾರೆಂದರೆ ಇಷ್ಟ. ತಾಂತ್ರಿಕವಾಗಿಯೂ ಸಿಲ್ವರ್ ಬಣ್ಣ ತುಂಬಾ ಒಳ್ಳೆಯದಂತೆ. ಈ ಬಣ್ಣದ ಕಾರಿನವರು ಖಂಡಿತಾ ಡ್ಯಾಷ್ ಬೋರ್ಡಿನಲ್ಲಿ ಐಪಾಡ್ ಸಿಕ್ಕಿಸಿಕೊಳ್ಳುತ್ತಾರೆ. ಯಾಕೆಂದರೆ ಸಿಲ್ವರ್ ಬಣ್ಣವೆಂದರೆ ಸಂಪತ್ತು, ಅಂತಸ್ತು ಮತ್ತು ಐಷಾರಾಮ್ಯದ ಪ್ರತೀಕ. ಹೀಗಾಗಿ ಸಿಲ್ವರ್ ಕಾರು ನಿಮ್ಮದಾಗಲಿ.
ಚಿನ್ನದ ಬಣ್ಣ: ಗೋಲ್ಡ್ ಕಲರ್ ಕಾರು ಕೂಡ ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕ. ಅನಂತ ಪದ್ಮನಾಭ, ತಿರುಪತಿ ತಿಮ್ಮಪ್ಪನೂ ಚಿನ್ನದಿಂದಾಗಿಯೇ ಹೆಚ್ಚು ಪ್ರಶಿದ್ಧಿ ಪಡೆದಿದ್ದಾರಂತೆ. ನೀವು ಸದಾ ಗುರುತಿಸಿಕೊಳ್ಳಲು ಇಚ್ಚಿಸುತ್ತೀರಿ. ನೀವು ಸ್ವತಂತ್ರ ವ್ಯಕ್ತಿ ಎಂದು ಜನರಿಗೆ ತಿಳಿಸಲು ನೀವು ಬಯಸುತ್ತೀರಿ. ನಿಮಗೆ ಹಣಕಾಸು ಸಮಸ್ಯೆಗಳು ಕಡಿಮೆ.


Click it and Unblock the Notifications








