ಬಡ್ಡಿದರ ಹೆಚ್ಚಳ: ವಾಹನ ಕಂಪನಿಗಳಿಗೆ ಅಸಂತೋಷ

Auto Sector Unhappy
ಹಣದುಬ್ಬರ ಹತೋಟಿಗೆ ಬಡ್ಡಿದರವನ್ನು ಶೇಕಡಾ 0.5ರಷ್ಟು ಹೆಚ್ಚಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರಮಕ್ಕೆ ದೇಶದ ಹೆಚ್ಚಿನ ವಾಹನ ಕಂಪನಿಗಳು ಅಸಂತೋಷ ವ್ಯಕ್ತಪಡಿಸಿವೆ. ಇದರಿಂದಾಗಿ ಖಾಸಗಿ ಬ್ಯಾಂಕುಗಳು ವೈಯಕ್ತಿಕ ಮತ್ತು ಕಾರ್ಪೊರೇಟ್ ಸಾಲ ಹೆಚ್ಚಿಸುವ ಒತ್ತಡಕ್ಕೆ ಸಿಲುಕಿವೆ

"ಆರ್ ಬಿಐ ಶೇ. 0.5ರಷ್ಟು ರೆಪೊ ಮತ್ತು ರಿವರ್ಸ್ ರೆಪೊ ದರ ಹೆಚ್ಚಿಸಿರುವುದು ಪ್ರಯಾಣಿಕ ಕಾರು ಮಾರಾಟಕ್ಕೆ ಭಾರಿ ಹೊಡೆತ ನೀಡಲಿದೆ" ಎಂದು ದೇಶದ ವಾಹನ ತಯಾರಿಕ ಕಂಪನಿಗಳ ಒಕ್ಕೂಟ(ಸ್ಯಾಮ್) ಅಧ್ಯಕ್ಷರಾದ ಪವನ್ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದಾಗಿ ಈ ವರ್ಷ ಈ ಮೊದಲು ಅಂದಾಜಿಸಿದಕ್ಕಿಂತ ಪ್ರಯಾಣಿಕ ಕಾರು ಮಾರಾಟ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ. ಪ್ರಯಾಣಿಕ ಕಾರು ಮಾರಾಟ ಶೇಕಡಾ 16ರಿಂದ 18ರಷ್ಟಿರಲಿದೆ ಎಂದು ಈ ಹಿಂದೆ ಸ್ಯಾಮ್ ಅಂದಾಜಿಸಿತ್ತು. ಬಡ್ಡಿದರ ಹೆಚ್ಚಳದಿಂದ ಇದು ಶೇಕಡ 10-12ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ದೇಶದ ವಾಹನ ಕಂಪನಿಗಳು ಅತ್ಯಧಿಕ ಬಡ್ಡಿದರ, ಇಂಧನ ದರ ಹೆಚ್ಚಳ ಮತ್ತು ಕಚ್ಚಾ ಸಾಮಾಗ್ರಿಗಳ ದರ ಹೆಚ್ಚಳದಿಂದ ಸಂಕಷ್ಟದಲ್ಲಿವೆ ಎಂದು ಸ್ಯಾಮ್ ಹೇಳಿದೆ. ಆರ್ ಬಿಐ ಹೊಸ ನೀತಿಯಿಂದಾಗಿ ವಾಹನ ಖರೀದಿ ಯೋಚನೆಯನ್ನು ಗ್ರಾಹಕರು ಮುಂದೂಡುವ ನಿರೀಕ್ಷೆಯನ್ನು ಸ್ಯಾಮ್ ವ್ಯಕ್ತಪಡಿಸಿದೆ.

More from DriveSpark

Article Published On: Wednesday, July 27, 2011, 10:23 [IST]
English summary
The country's automobile sector have expressed their reservations over the Reserve Bank of India's (RBI) decision to hike interest rates by 50 basis points to tame inflation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+