ಎಂಆರ್ಎಫ್ ನಿವ್ವಳ ಲಾಭ ಶೇಕಡಾ 48ರಷ್ಟು ಇಳಿಕೆ

ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 2,573 ಕೋಟಿ ರು. ಒಟ್ಟು ಆದಾಯಗಳಿಸಿತ್ತು. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದ 1,925.40 ಕೋಟಿ ರು. ಆದಾಯಕ್ಕೆ ಹೋಲಿಸಿದರೆ ಶೇಕಡಾ 34ರಷ್ಟು ಏರಿಕೆ ದಾಖಲಿಸಿದೆ.
ಕಂಪನಿಯು ಪ್ರತಿಷೇರಿಗೆ 3 ರು. ಮಧ್ಯಂತರ ಡಿವಿಡೆಂಡ್ ಘೋಷಿಸಿದೆ. ಮುಂಬೈ ಷೇರುಪೇಟೆಯ ಅಪರಾಹ್ನದ ವಹಿವಾಟಿನಲ್ಲಿ ಕಂಪನಿಯ ಷೇರು ದರ 7,120 ರು.ಗೆ ತಲುಪಿದ್ದು ಶೇಕಡಾ 3.14ರಷ್ಟು ಇಳಿಕೆ ಕಂಡಿದೆ.


Click it and Unblock the Notifications








