ಲಕ್ಷ ಹಾರ್ಸ್ ಪವರಿನ ಬೃಹತ್ ಇಂಜಿನ್ ನೋಡಿ ಬೆರಗಾಗಿರಿ

ಬುಗಾಟಿ ವೆರೊನ್ ಗೊತ್ತಲ್ವ? ವೇಗದ ಕಾರುಗಳಲ್ಲಿ ಕೆಟ್ಟಹುಡುಗ. ಜಗತ್ತಿನ ಅತ್ಯಂತ ವೇಗದ ಕಾರು ವೆರೊನ್ ಹೊಂದಿರುವುದೇ ಎಂಟು ಲೀಟರ್ ಎಂಜಿನ್. ಕಾರುಗಳ ವಿಷ್ಯ ಬಿಟ್ಟುಬಿಡಿ. ಟ್ರಕ್ ಗಳ ಎಂಜಿನ್ ಹತ್ತು ಲೀಟರ್ ಆಸುಪಾಸಿನಲ್ಲಿರುತ್ತವೆ. ವಿಮಾನದ ಎಂಜಿನ್ ಗಳೂ ಕೊಂಚ ಜಾಸ್ತಿ ಲೀಟರ್ ಹೊಂದಿರುತ್ತವೆ.
ಆದರೆ ಹಡಗಿನ ಎಂಜಿನ್ ಹೇಗಿರುತ್ತೆ ಅಂತ ಯೋಚಿಸಿದ್ದೀರಾ? ಸಮುದ್ರದಲ್ಲಿ ಸಾವಿರಾರೂ ಟನ್ ತೂಕದ ಭಾರ ಹೊರುವ ಹಡಗುಗಳಿಗೆ ಅತ್ಯಧಿಕ ಶಕ್ತಿಶಾಲಿ ಎಂಜಿನ್ ಅವಶ್ಯಕತೆಯಿದೆ. ವಿಶ್ವದ ಬೃಹತ್ ಹಡಗು ಎಂಜಿನ್ ನೊಂದನ್ನು ವಾರ್ಸ್ಟಲಿಯಾ ಸುಲ್ವೆರ್ ಎಂಬ ಕಂಪನಿ ನಿರ್ಮಿಸಿದೆ. ಇದು 44 ಫೀಟ್ ಎತ್ತರವಿದೆ.
ವಿಶ್ವದ ಬೃಹತ್ ಹಡಗೊಂದಕ್ಕೆ ಅಳವಡಿಸಲು ಇದನ್ನು ಕೊಂಡೊಯ್ಯಲಾಗುತ್ತಿದೆ. ಇದು 2 ಸ್ಟ್ರೋಕ್ ಡೀಸಲ್ ಎಂಜಿನಾಗಿದೆ. Wartsila-Sulzer RTA96-C ಎಂಬ ಈ ಎಂಜಿನ್ 25,480 ಲೀಟರ್ ಸಾಮರ್ಥ್ಯದ್ದಾಗಿದೆ. ಇದು 14 ಸಿಲಿಂಡರ್ರ್ ಹೊಂದಿದೆ. ಇದರ ತೂಕ 2,300 ಟನ್. ಈ ಎಂಜಿನ್ ನಂಬಲು ಅಸಾಧ್ಯವೆಂಬಂತೆ 1.09 ಲಕ್ಷ ಹಾರ್ಸ್ ಪವರ್ ನೀಡುತ್ತದೆ. ಚಿತ್ರವನ್ನೊಮ್ಮೆ ನೋಡಿ, 68 ಚಕ್ರದ ಲಾರಿಯ ಮೇಲಿದೆ ಈ ಬೃಹತ್ ಎಂಜಿನ್.


Click it and Unblock the Notifications