ನಾಲ್ಕುವರೆ ಲಕ್ಷ ರು.ನ ಹೋಂಡಾ ಬ್ರಿಯೊ ಬೇಕೆ?

ನೂತನ ಬ್ರಿಯೊ, ಹೋಂಡಾ ಜಾಝ್ ನದ್ದೇ ಎಂಜಿನ್ ಹೊಂದಿರಲಿದೆ. 1.2 ಲೀಟರ್ ಎಂಜಿನ್ ಹೊಂದಿರುವ ಬ್ರಿಯೊ ಸುಮಾರು 89 ಹಾರ್ಸ್ ಪವರ್ ನೀಡಲಿದೆ. ಇದರ ಕ್ಯಾಬಿನ್ ನಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು ಕುಟುಂಬದ ಸದಸ್ಯರೊಂದಿಗೆ ಆರಾಮವಾಗಿ ಸವಾರಿ ಮಾಡಬಹುದಾಗಿದೆ. ನಿಮ್ಮ ಮುದ್ದಿನ ಪಿಂಕಿ, ಜಾಕಿ, ಟೈಗರ್ ನಾಯಿಗೂ ಸ್ಥಳ ಉಳಿಯಬಹುದು.
ಇದರಲ್ಲಿರುವ ಕಂಟ್ರೊಲ್ ಬಟನ್ ಗಳು ಅತ್ಯುತ್ತಮವಾಗಿದ್ದು ಸುಲಭವಾಗಿ ಬಳಸಬಹುದಾಗಿದೆ. ಇದು ಬೆಂಗಳೂರಿನಂತಹ ನಗರಗಳಲ್ಲಿ ಪ್ರಯಾಣಿಸಲು ಸೂಕ್ತ ಕಾರು ಎನ್ನಲಾಗಿದೆ. ಇದರ ದರ ನೂತನ ಸ್ವಿಫ್ಟ್ ಮತ್ತು ಫೋರ್ಡ್ ಫಿಗೊಕ್ಕಿಂತ ಕಡಿಮೆ ಇರಲಿದೆ. ಅಂದರೆ ಸುಮಾರು 4.5 ಲಕ್ಷ ರುಪಾಯಿ ಆಸುಪಾಸಿನಲ್ಲಿರುವುದಾಗಿ ಹೋಂಡಾ ಮೂಲಗಳು ಹೇಳಿವೆ. ಬ್ರಿಯೊ ಓಕೆ ಅನ್ನುವ ಮೊದಲು ಮುಂದಿರುವ ಪುಟಗಳತ್ತ ಒಮ್ಮೆ ಡ್ರೈವಿಂಗ್ ಮಾಡಿ.


Click it and Unblock the Notifications








